ಶಹಾಪುರದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ : 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆಗಳನ್ನು ತೋರಿಸುತ್ತೇವೆ ಚರ್ಚೆಗೆ ಬನ್ನಿ ಬಿಜೆಪಿಗೆ ಸವಾಲು ಹಾಕಿದ ಮಲ್ಲಿಕಾರ್ಜುನ ಖರ್ಗೆ

ಶಹಾಪುರ : ಪದೇ ಪದೇ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುತ್ತಿರುವ ಬಿಜೆಪಿಯವರು ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ,  ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆಗಳನ್ನು ನಾವು ತೋರಿಸುತ್ತೇವೆ. ನೀವು ಬನ್ನಿ ಎಂದು ನೇರವಾಗಿ ಬಿಜೆಪಿಯವರಿಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಸವಾಲು ಹಾಕಿದರು.ಕಾಂಗ್ರೆಸ್ ಪಕ್ಷದ ವತಿಯಿಂದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು
70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಎಷ್ಟು ಸಾರಿ ಹೇಳುತ್ತೀರಿ. ಇಂದಿನ ಶಾಲೆ, ಕಾಲೇಜು, ಶಿಕ್ಷಣ, ನೀರಾವರಿ ಯೋಜನೆಗಳು, ಬೃಹತ್ ಜಲಾಶಯಗಳ ನಿರ್ಮಾಣ, ರೈಲ್ವೆಗಳು, ವಿಮಾನಗಳು, ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳು ಇವೆಲ್ಲವುಗಳೂ ಮಾಡಿದವರು ಯಾರು.ರಾಜ್ಯದಲ್ಲಿ ನಡೆಯುತ್ತಿರುವ 2023ರ ವಿಧಾನಸಭಾ ಚುನಾವಣೆಗೆ ರಾಷ್ಟ್ರದ ಪ್ರಧಾನಮಂತ್ರಿಯವರು ದೇಶದ ರಾಜ್ಯಗಳ ಅಭಿವೃದ್ಧಿ ಕಾರ್ಯಗಳ ಕಡೆ ಗಮನಕೊಡದೆ ಪುರಸಭೆ ಮತ್ತು ನಗರಸಭೆಯ ಚುನಾವಣೆ ರೀತಿಯಲ್ಲಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
 *****
ಗುಜರಾತ್ ರಾಜ್ಯದಲ್ಲಿ ಪೌಷ್ಟಿಕಾಂಶ ಕೊರತೆಯಿಂದ ರಾಷ್ಟ್ರದಲ್ಲಿಯೆ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮೊದಲು ನಿಮ್ಮ ಮನೆಯನ್ನು ಸುಧಾರಿಸಿಕೊಳ್ಳಿ. ಅದು ಬಿಟ್ಟು ಅಮೋಲಿನ ಜೊತೆ ನಂದಿನಿ ಹಾಲನ್ನು ಜೋಡಿಸಲು ಬರಬೇಡಿ ಎಂದು ಮೋದಿಯವರಿಗೆ ನೇರವಾಗಿ ವಾಗ್ದಾಳಿ ನಡೆಸಿದರು.
*****
ಕೇಂದ್ರ  ಬಿಜೆಪಿ ಸರಕಾರ ಒಂಬತ್ತು ವರ್ಷಗಳ ಮತ್ತು ರಾಜ್ಯ ಸರ್ಕಾರದ ಐದು ವರ್ಷಗಳ ಅಭಿವೃದ್ಧಿ ಏನು.ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಿರಿ.ಶೇ. 40 ಪರ್ಸೆಂಟ್ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಹಲವು NGOಗಳು, ಗುತ್ತಿಗೆದಾರರು ದೂರು ಕೊಟ್ಟರು ಮೋದಿಯವರು ಯಾಕೆ ಕ್ರಮಕೈಗೊಳ್ಳಲಿಲ್ಲ. ಮೈ ನಹಿ ಕಾಹೂಂಗ, ಕಾನೆ ನಹಿದೂಂಗ ಎನ್ನುವವರು ನಿಮ್ಮ ಪಕ್ಕದಲ್ಲಿಯೇ ಲಂಚ ತಿನ್ನುವವರನ್ನು ಕುಳ್ಳಿಸಿಕೊಂಡು ಭಾಷಣ ಮಾಡುತ್ತಿದ್ದೀರಿ.ನಾನು ರೈಲ್ವೆ ಸಚಿವನಾಗಿದ್ದಾಗ ಒಂದೇ ವರ್ಷದಲ್ಲಿ 37 ರೈಲುಗಳಿಗೆ ಚಾಲನೆ ನೀಡಿದ್ದೆ. ಕಲಬುರ್ಗಿಯಲ್ಲಿ ಏಮ್ಸ್ ಆಸ್ಪತ್ರೆಗಾಗಿ ಪ್ರಧಾನಿಗೆ ಮನವಿ ಮಾಡಿದಾಗ ನಿನ್ನ ಮಾತನ್ನು ಸಿದ್ದರಾಮಯ್ಯ ಕೇಳುವುದಿಲ್ಲ ಎಂದು ಸುಳ್ಳು ಹೇಳಿದಿರಿ.ಏಮ್ಸ್ ಆಸ್ಪತ್ರೆ ಸಿದ್ದರಾಮಯ್ಯನವರು ಕೊಡುವರೇನು. ಅವಶ್ಯಕತೆ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದಿರಿ. ಬಿಪಿಎಲ್ ಕಾರ್ಡದಾರರಿಗೆ ಪುಕ್ಕಟೆ ಸಿಲಿಂಡರ್ ಗ್ಯಾಸ್ ಕೊಡುವೆನೆಂದು ಹೇಳಿ 1200 ರೂ. ಬೆಲೆ ಏರಿಕೆ ಮಾಡಿದಿರಿ. ಇಂದಿನ ದಿನ ಬಡವರ ಕಣ್ಣಲ್ಲಿ ರಕ್ತ ಬರುತ್ತಿದೆ ಎಂದು ಸರಕಾರದ ವಿರುದ್ಧ ಹರಿಹಾಯ್ದರು.
*****
ಕಾಂಗ್ರೆಸ್ ಮುಖಂಡರಾದ ಬಸವರಾಜ ಪಾಟೀಲ ಇಟಗಿ, ಆಂಧ್ರಪ್ರದೇಶದ ಮಾಜಿ ಮಂತ್ರಿ ವಿಶ್ವನಾಥ,
ಮರಿಗೌಡ ಹುಲಕಲ್,ಚಂದ್ರಶೇಖರ್ ಆರ್ಬೋಳ್,
 ಶರಣಪ್ಪ ಸಲಾದಪುರ,ಇಬ್ರಾಹಿಂ ಶಿರುವಾಳ,ಗುರುನಾಥ ರೆಡ್ಡಿ,ಸಿದ್ದಲಿಂಗ ರೆಡ್ಡಿ ಸಾವು ಹತ್ತಿಗೂಡೂರು,ತಿಮ್ಮಯ್ಯ ಪುರ್ಲೆ, ನೀಲಕಂಠ ಬಡಿಗೇರ, ಚನ್ನಪ್ಪ ಆನೆಗುಂದಿ, ಮಲ್ಲಣ್ಣ ಗೋಗಿ, ಮಲ್ಲಿಕಾರ್ಜುನ್ ಪೂಜಾರಿ ವಿನೋದ್ ಪಾಟೀಲ್ ಅಮೀನ್ ಪಾಟೀಲ್ ಕಿರದಳ್ಳಿ, ದೇವಣ್ಣ ವಕೀಲರು, ಕೆಂಭಾವಿಯ ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
*****
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲು ಕ್ಯಾಬಿನೆಟ್ ಸಭೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಾದ 
 ತಿಂಗಳಿಗೆ ಎರಡು ನೂರು ಯುನೀಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ, ಪ್ರತಿ ಕುಟುಂಬಕ್ಕೆ ತಿಂಗಳಿಗೆ 10 ಕೆಜಿ ಅಕ್ಕಿ ಉಚಿತ, ಪದವೀಧರರಿಗೆ 3000 ರೂ ಮತ್ತು ಡಿಪ್ಲೋಮೋ ಪದವಿದರರಿಗೆ 1500 ರೂ ಗೌರವಧನ, ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪಾಸ್ ವಿತರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನನ್ನ ಅಭಿವೃದ್ಧಿ ಕೆಲಸ ನೋಡಿ ಮತ ಕೊಡಿ. ರಾಜ್ಯದಲ್ಲಿ ಬಿಜೆಪಿ ಪಕ್ಷ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಸುಳ್ಳು ಹೇಳುತ್ತಾ ಬಂದಿದೆ. ಬಡವರಿಗೆ ರೈತರಿಗೆ ಮೋಸ ಮಾಡುತ್ತಾ, ನಿರುದ್ಯೋಗ ಸೃಷ್ಟಿ ಮಾಡಿದೆ. ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದವರು. ಭ್ರಷ್ಟತೆಯಿಂದ ಅಧಿಕಾರ ನಡೆಸಿದರು.
ನನ್ನ ಕ್ಷೇತ್ರದಲ್ಲಿ ಶೇಕಡ 90ರಷ್ಟು ಅಭಿವೃದ್ಧಿ ಮಾಡಿದ್ದೇನೆ. ವಿರೋಧ ಪಕ್ಷದಲ್ಲಿದ್ದು,ಸುನ್ನತಿ ಭೀಮಾನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ, ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ, ಮಾಡೆಲ್ ಡಿಗ್ರಿ ಕಾಲೇಜು, ಕೆರೆಗೆ ನೀರು ತುಂಬುವುದು,
 ರಸ್ತೆ ಅಭಿವೃದ್ಧಿ, ನಗರದಲ್ಲಿ ಹಲವು ಬ್ರಿಡ್ಜ್ ನಿರ್ಮಾಣ, ಬೂದಿನಾಳ – ಪಿರಾಪುರ ಯೋಜನೆ, ಕೆಂಭಾವಿ ನಗನೂರು ಆಸ್ಪತ್ರೆಗಳು ಮೇಲ್ದರ್ಜೆ, ಅಲ್ಪಸಂಖ್ಯಾತ ಮುರಾರ್ಜಿ ಶಾಲಾ ಸುಧಾರಣೆ, 20 ಎಕರೆ ಜಾಗದಲ್ಲಿ 800 ನಿವೇಶನಗಳಂತೆ 500 ನಿವೇಶನಗಳಿಗೆ ವಿದ್ಯುತ್, ಸಿಸಿ ರಸ್ತೆ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ. ಐದು ವರ್ಷದಲ್ಲಿ ವಾರದಲ್ಲಿ ರವಿವಾರ ಹೊರತುಪಡಿಸಿ ಎಲ್ಲ ದಿನಗಳಲ್ಲಿಯೂ ಕ್ಷೇತ್ರದ ಜನರ ಮಧ್ಯೆ ಸೇವೆ ಮಾಡಿದ್ದೇನೆ.ಮುಂದಿನ ಐದು ವರ್ಷಗಳಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಅಭಿವೃದ್ಧಿ ಕೆಲಸ ನೋಡಿ ಮತ ನೀಡಿ. 
* ಶರಣಬಸಪ್ಪಗೌಡ ದರ್ಶನಾಪುರ
ಶಾಸಕರು ಶಹಾಪುರ ಮತ ಕ್ಷೇತ್ರ
ಶರಣಬಸಪ್ಪಗೌಡ ದರ್ಶನಾಪುರ
ಶಾಸಕರು ಶಹಾಪುರ ಮತ ಕ್ಷೇತ್ರ

About The Author