ಟ್ರಾಕ್ಟರ್ ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಶಹಾಪುರ :ವಡಗೇರ ತಾಲೂಕಿನ ಖಾನಾಪುರ ಗ್ರಾಮದ ಮನಗಿನಾಳ ಹತ್ತಿಮಿಲ್ ಬಳಿ ಟ್ರಾಕ್ಟರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ  ಸ್ಥಳದಲ್ಲೆ ಮೃತ ಪಟ್ಟಿದ್ದು, ಇಬ್ಬರು ಬಾಲಕರಿಗೆ ಗಂಭೀರ ಗಾಯಗಳಾಗಿದ್ದು, ಕಲ್ಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೊಪಣ್ಣ ತಂದೆ ಮಲ್ಲಪ್ಪ ಹಿಂದಿನಮನಿ (45) ಎನ್ನುವ ಬೈಕ್ ಸವಾರ ಮೃತ ದುರ್ದೈವಿಯಾಗಿದ್ದಾನೆ.
ಮಹೇಶ್ (10),  ಹನಮಂತ (12) ಅಪಘಾತಕ್ಕೊಳಗಾದ ಬಾಲಕರು. ಉಳ್ಳೆಸೂಗೂರ ಮೂಲದ ಟ್ರಾಕ್ಟರ್  ಯಾದಗಿರಿ  ಕಡೆ  ಹೊರದ್ದು, ಬೈಕ್ ಸವಾರನು  ಸೋಮವಾರ ದಂದು ಯಾದಗಿರಿಯ  ಮಲ್ಲಾರ್   ಗ್ರಾಮಕ್ಕೆ ಸಂಬಂಧಿಕರೊಡನೆ  ದೇವಸ್ಥಾನಕ್ಕೆ ತೆರಳಿದ್ದ.  ಮಂಗಳವಾರ  ತನ್ನ ಸ್ವಂತ ಗ್ರಾಮವಾದ  ಸಗರ ಗ್ರಾಮಕ್ಕೆ ತನ್ನ ಮಕ್ಕಳಿಬ್ಬರ ಜೊತೆ ಮರಳುತಿದ್ದ.  ಯಮನಂತೆ  ಬಂದ  ಟ್ರಾಕ್ಟರ್ ಟೈರ್ ಹೊಡೆದು  ಬೈಕ್ ಗೆ  ಡಿಕ್ಕಿ ಹೊಡೆದಿದೆ. ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.ಈ ಕುರಿತು ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.