ಬಿಸಿಯೂಟ ನೌಕರರ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ

ಯಾದಗಿರಿ:60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಸೇವ್ ಇಂದ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿ  (ಸಿಐಟಿಯು ಸಂಯೋಜಿತ ) ವತಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯ ಮುಖ್ಯಮಂತ್ರಿಯವರಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು.
ಈ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬಿಸಿಊಟ ನೌಕರ ಸಂಘದ ಜಿಲ್ಲಾ ಮುಖಂಡರಾದ ಸುನಂದಾ ಹಿರೇಮಠ ಅವರು
ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ ಮಕ್ಕಳ ಗೈರುಹಾಜರಿ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆಯವರನ್ನು 60ವರ್ಷದ ವರಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಸರ್ಕಾರದ ಕ್ರಮವನ್ನು ಅಕ್ಷರ ದಾಸೋಹ ಖಂಡಿಸುತ್ತದೆ. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಪಲ್ಯವು ಫಲಿತಾಂಶ ಹೊರ ಬರಲು ತಾಯಂದಿರು ತಮ್ಮ ಜೀವನ ಸಹಿಸಿದ್ದಾರೆ ರಾಜ್ಯದಲ್ಲಿ ಸುಮಾರು 50 ಲಕ್ಷ ಬಡವರ ದೀನದಲಿತರ ಮಕ್ಕಳಿಗೆ ಆಹಾರ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಸರಕಾರ ಕನಿಷ್ಠ ಮಾನವೀಯತೆ ತೋರದೆ ಅವರನ್ನು ಬರಿಗೈಯಿಂದ ವಾಪಸ್ ಕಳಿಸುವ ಕ್ರಮ ಸರಿಯಾದುದಲ್ಲ. ಸರ್ಕಾರ ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಅವರು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಬಿಸಿಊಟ ನೌಕರ ಸಂಘದ ಜಿಲ್ಲಾ ಮುಖಂಡರಾದ ಸುರೇಖಾ ಕುಲಕರ್ಣಿ ಅವರು
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ನಮ್ಮ ಸಂಘಟನೆಯ ರಾಜ್ಯ ಮುಖಂಡರು ಒಳಗೊಂಡ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು ಆದರೆ ಈ ಎಲ್ಲಾ ಕ್ರಮಗಳು ಜಾರಿಯಾಗುವ ಮೊದಲೇ ಸರಕಾರ ಏಕಾಏಕಿ ಬಿಸಿಊಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡುತ್ತಿರುವುದು ಅಮಾನವೀಯ ಮತ್ತು ಮಹಿಳಾವಿರೋಧಿ ಧೋರಣೆಯಾಗಿದೆ. ಸರಕಾರದ ಈ ಒಂದು ಕೆಟ್ಟ ನಿರ್ಧಾರದಿಂದ ರಾಜ್ಯದಲ್ಲಿ ಸುಮಾರು 11 ಸಾವಿರದಿಂದ 12 ಸಾವಿರ ನೌಕರರ ಕೆಲಸವನ್ನು ಯಾವುದೇ ನಿವೃತ್ತಿ ಸೌಲಭ್ಯವಿಲ್ಲದೆ  ತೆಗೆದು ಹಾಕಲು ಮುಂದಾಗಿದೆ. ಸರ್ಕಾರ ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಹೊಡೆಯಬೇಕು. ಬಡ, ಅಲ್ಪಸಂಖ್ಯಾತ, ದಲಿತ, ಕೂಲಿಕಾರ ಮಹಿಳೆಯರಿಗೆ ನ್ಯಾಯ ನ್ಯಾಯ ಒದಗಿಸಿಕೊಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಕೃಷಿ ಕೂಲಿಕಾರ ಸಂಘದ ಜಿಲ್ಲಾಧ್ಯಕ್ಷ ದಾವಲ್ ಸಾಬ್ ನದಾಫ್, ಬಿಸಿಊಟ ನೌಕರ ಸಂಘದ ತಾಲೂಕ ಕಾರ್ಯದರ್ಶಿ ಈರಮ್ಮ ಹಯ್ಯಾಳ ಕರ್, ಮಂಜುಳಾ ಹೊಸಮನಿ, ಸುರಪುರ ತಾಲೂಕ ಅಧ್ಯಕ್ಷ ಸಜ್ಜಾದ್ ಬೇಗಂ, ಖಜಾಂಚಿ ಸೌಭಾಗ್ಯ, ಕಾರ್ಮಿಕ ಮುಖಂಡರಾದ ಬಸವರಾಜ್ ಬಜಂತ್ರಿ ನಿಂಗಣ್ಣ ನಾಟೆಕಾರ್, ಸುವರ್ಣ ಕೆಂಭಾವಿ, ರಂಜಾನ್ ಬೀ, ಸೇರಿದಂತೆ ಅನೇಕ ಬಿಸಿಯೂಟ ನೌಕರರು ಭಾಗವಹಿಸಿದ್ದರು.

About The Author