ಇಂದಿನಿಂದ ಅತ್ತನೂರು ಗ್ರಾಮದ ಶ್ರೀ ದಿಡ್ಡಿ ಬಸವೇಶ್ವರ 57ನೇ ಜಾತ್ರಾ ಮಹೋತ್ಸವ

ಸಿರವಾರ : ಅತ್ತನೂರಿನ ದಶಶತಪೂರವಾಸ ಶ್ರೀ ದಿಡ್ಡಿ ಬಸವೇಶ್ವರ ನಂದೀಶ್ವರವಾಸನ ಜಾತ್ರೆ ಇಂದಿನಿಂದ ಆರಂಭಗೊಳ್ಳಲಿದೆ ಎಂದು ಶ್ರೀ ದಿಡ್ಡಿಬಸವೇಶ್ವರ ಟ್ರಸ್ಟಿನ ಅಧ್ಯಕ್ಷರಾದ ವೀರಭದ್ರು ಅತ್ತನೂರು ತಿಳಿಸಿದರು.

*****

ಗ್ರಾಮದ ದಿಡ್ಡಿ ಬಸವೇಶ್ವರ ದೇವರ ಹಿನ್ನೆಲೆ 
* ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ನೆಲೆಗಿಂತ ಶ್ರೀ ದಿಡ್ಡಿಬಸವೇಶ್ವರ ನಂದಿರೂಪದಲ್ಲಿರುವ ನಂದೀಶ್ವರ ವಿಶ್ವದಲ್ಲಿಯೇ ಪ್ರಸಿದ್ಧ. ಮೇಲ್ಮುಖವಾಗಿರುವ ಬಸವಣ್ಣ. ಐತಿಹಾಸಿಕ ಪರಂಪರೆಯುಳ್ಳಾತ.ಇಂಥಹ ಕೆಂಪು ಕಂತೆಯಿಂದ ಕೂಡಿದ ಬಸವಣ್ಣ ವಿಶ್ವದಲ್ಲಿಯೇ ಇಂಥ ಮೂರ್ತಿ ಸಿಗದು. 57ನೇ ವರ್ಷದ ಜಾತ್ರಾ ಮಹೋತ್ಸವ ಗ್ರಾಮದಲ್ಲಿ ನಡೆಯಲಿದ್ದು, ಸುತ್ತಲಿನ ಹಲವಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವರು. ದೇವಸ್ಥಾನದ ನವೀಕರಣವಾಗಿದೆ.ನವಗೋಪರವಾಗಿದೆ. ದೇವಸ್ಥಾನದ ಮುಂದೆ ಹೊಸದಾಗಿ ಒಳಗಿನ ಮೂರ್ತಿಗೆ ತದ್ರೂಪಿ ಮೂರ್ತಿಯನ್ನು ಹೊರಗಡೆ ನಿರ್ಮಿಸಲಾಗಿದೆ. ಜಾತ್ರೆ ಆರಂಭದಲ್ಲಿ ಕಳಸದ ಸೇವೆ ಉಚ್ಚ್ರಾಯ ರಥೋತ್ಸವ ಜಾನುವಾರುಗಳ ಮಾರಾಟ ನಡೆಯುತ್ತಿದೆ. ಭಕ್ತರ ಅಭಿಲಾಷೆಯ ಮೇರೆಗೆ ಕೆಲವು ವರ್ಷಗಳಿಂದ ಜೋಡು ರಥೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ.
****

ದೇವಸ್ಥಾನದ ಜೀರ್ಣೋದ್ಧಾರ

* ದೇವಸ್ಥಾನದ ಶಿಖರ ಶಿಥಿಲಗೊಂಡಿತ್ತು. ಟ್ರಸ್ಟಿನ ಅಧ್ಯಕ್ಷ ವೀರಭದ್ರು ಕಾಳಜಿಯಿಂದ ಗ್ರಾಮದ ಮುಖ್ಯಸ್ಥರು ಮತ್ತು ಭಕ್ತರ ನೆರವಿನಿಂದ ನವಗೋಪುರ ನಿರ್ಮಿಸಲಾಗಿದೆ. ಇದಕ್ಕೆ ಭಕ್ತರ ನೆರವಿನ ಮಹಾಪೂರವನ್ನೆ ಹರಸಿದ್ದಾರೆ. ಎಲ್ಲವೂ ನಂದೀಶ್ವರನ ಆಶೀರ್ವಾದ ಎನ್ನುತ್ತಾರೆ ಟ್ರಸ್ಟಿನ ಅಧ್ಯಕ್ಷರು.
****

ಜಾತ್ರಾ ಕಾರ್ಯಕ್ರಮಗಳ ವಿವರ

* ಶುಕ್ರವಾರ ದಿನಾಂಕ 28-4-2023 ಕಳಸದ ಸೇವೆ ಪುರವಂತಿಕೆ ಸೇವೆ ಶ್ರೀಮಠದಿಂದ ದೇವಸ್ಥಾನಕ್ಕೆ (ರಾತ್ರಿ 11-00 ರಿಂದ ಬೆಳಗ್ಗೆ 5.30 ರವರೆಗೆ) ನಂತರ ದೇವಸ್ಥಾನದ ಶಿಖರಕ್ಕೆ ಕಳಸಾರೋಹಣ
* ಶನಿವಾರ ದಿನಾಂಕ 29.04.2023 ರಂದು ಸಾಯಂಕಾಲ 6-00ಗಂ. ಉಚ್ಚ್ರಾಯ 
* ರವಿವಾರ 30-04-2023 ರಂದು ಉದಯ 5:00ಗಂ. ಬಸವೇಶ್ವರ ದೇವರಿಗೆ ಮಹಾರುದ್ರಭಿಷೇಕ, ಸಾಯಂಕಾಲ 6-11ಕ್ಕೆ ಜೋಡುರಥೋತ್ಸವ.
* ಸೋಮವಾರ 01-05- 2023 ರಂದು ಕಡುಬಿನ ಕಾಳಗ ಬಸವಣ್ಣನ ತೊಟ್ಟಿಲು ಸೇವೆ ಸಾಯಂಕಾಲ 6:00ಗಂ. ಹಾಸ್ಯ ರಸಮಂಜರಿ ಕಾರ್ಯಕ್ರಮ, ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ. ಅಂದು ಮಹಾ ದಾಸೋಹ ಪ್ರಸಾದ ವ್ಯವಸ್ಥೆ ಇರುತ್ತದೆ.
* 30-04-2023 ರಂದು ರಾತ್ರಿ 10:30ಕ್ಕೆ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್ ಸಾಮಾಜಿಕ ನಾಟಕ.
* ಜಾತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಾನುವಾರುಗಳ ಮಾರಾಟ ನಡೆಯುತ್ತದೆ.

About The Author