ಬಡವರ ಕಣ್ಣೀರು ಒರೆಸುವ ದಿನದಲಿತರ ಕಣ್ಮಣಿ ಅಮೀನ್ ರೆಡ್ಡಿ ಯಾಳಗಿ

* ಸಮಸ್ಯೆಗಳನ್ನು ತೆಗೆದುಕೊಂಡು ತಮ್ಮ ಬಳಿಗೆ ಬಂದರೆ ನನಗಾಗುವ ಸಹಾಯ ನಾ ಮಾಡುವೆ.ನನ್ನಿಂದಾಗದು ಎಂದು ನಾ ಕಳಿಸಲಾರೆ. ನನ್ನ ಶತ್ರುಗಳಲ್ಲಿ ಆ ಕೆಲಸ ಆಗುವುದಿದ್ದರೆ ಬೇರೆಯವರಿಂದ ಹೇಳಿಸಿ ನಾ ಮಾಡಿಸಿಕೊಡುವೆ. ಚಿಂತಿಸಿದಿರಿ ನನ್ನಲ್ಲಿ ಬಂದು ಸಮಸ್ಯೆ ಹೇಳಿಕೊಳ್ಳುವ ಯಾವ ವ್ಯಕ್ತಿಯಾದರೂ ಯಾವ ಪಕ್ಷದವರಾದರೂ ಸರಿ ನಾ ಮಾಡುವೆ. ವ್ಯಕ್ತಿಯ ಸಮಸ್ಯೆಗಿಂತ ರಾಜಕೀಯ ಹಣ ದೊಡ್ಡದಲ್ಲ. ಆ ವ್ಯಕ್ತಿಯ ಕಣ್ಣೀರು ಒರೆಸಿದರೆ ಆ ಪುಣ್ಯದ ಫಲ ನನಗೆ ಸಿಗುತ್ತದೆ ಎನ್ನುವ ಬಲವಾದ ನಂಬಿಕೆ ನನಗಿದೆ ಎನ್ನುತ್ತಾರೆ ಬಿಜೆಪಿಯ ಮುಖಂಡ ಅಮ್ಮಿನ ರೆಡ್ಡಿ ಯಾಳಗಿ.
*****
    * ಕೆಲ ಸಮಸ್ಯೆಗಳನ್ನು ತೆಗೆದುಕೊಂಡು ಹೋದಾಗ ಬೇರೊಂದು ಊರಿನಲ್ಲಿರುವ ಆ ಸಮಸ್ಯೆಯನ್ನು ನಿವಾರಿಸಲು ನನ್ನನ್ನು ಕರೆದುಕೊಂಡು ಹೋಗಿ ಪರಿಹಾರ ಕೊಡಿಸಿದ್ದರು ಎಂದು ಹೇಳುತ್ತಾರೆ ಇಂಜಿನಿಯರ್ ವಿದ್ಯಾರ್ಥಿ.
*****
    * ನನ್ನ ಮನೆಯಲ್ಲಿ ಸಮಸ್ಯೆ ಇದೆ. ಸ್ವಂತ ಮನೆ ಇಲ್ಲ ಎಂದಾಗ ವ್ಯವಸ್ಥೆ ಮಾಡಿಕೊಟ್ಟರು ಅಮ್ಮಿನ ರೆಡ್ಡಿಯವರು. ಒಬ್ಬ ರಾಜಕೀಯ ನೇತಾರ ಸರಕಾರದವರಲ್ಲಿ ಸಿಗುವ ಸೌಲಭ್ಯದಲ್ಲಿ ನಿನಗೆ ಕೊಡಿಸುವೆನು ಎನ್ನುತ್ತಾನೆ. ಆದರೆ ಅಮ್ಮಿನ ರೆಡ್ಡಿಯವರು ತಮ್ಮ ಸ್ವಂತ ಹಣದಿಂದ ನನಗೆ ಮನೆ ನಿರ್ಮಿಸಲು ಅನುವು ಮಾಡಿಕೊಟ್ಟರು ಎನ್ನುತ್ತಾರೆ ಒಂದು ಗ್ರಾಮದ ನಿವಾಸಿ.
*****
* ನಾನೊಬ್ಬ ರಾಜಕೀಯ ನೇತಾರನಿಂದ 20 ವರ್ಷಗಳ ಕಾಲ ಆತನಿಗಾಗಿ ಶ್ರಮಿಸಿದೆ. ನನಗೇನು ಮಾಡಲಿಲ್ಲ.ಬಡ ಪ್ರೇಮಿ ಅಮ್ಮಿನ ರೆಡ್ಡಿಯಲ್ಲಿ ಕೆಲಸ ಮಾಡಿದೆ. ನಾನು ಪಕ್ಷಕ್ಕಿಂತಲೂ ನನ್ನನ್ನು ಉನ್ನತ ಸ್ಥಾನದಲ್ಲಿ ಇಟ್ಟಿದ್ದಾರೆ. ನನಗೆ ಎಲ್ಲಾ ಸೌಕರ್ಯ ಒದಗಿಸಿ ಕೊಟ್ಟಿದ್ದಾರೆ ಎಂದು ಹೇಳಿದ ಹೆಸರೇನು ಇಚ್ಚಿಸದ ವ್ಯಕ್ತಿ.
*****
 * ಕೆಲವು ಜನರಿಗೆ ವಸತಿ ಸೌಲಭ್ಯ ಸಿಕ್ಕಿತು. ನನಗೇಕೆ ಇಲ್ಲ. ಅವರ ಸರಿ ಸಮ.  ನನಗೆ ಮೋಸ ಮಾಡಿದ ಎಂದು ನಾ ಕೇಳಿದಾಗ ಆ ಸೌಲಭ್ಯ ನಾನು ಒದಗಿಸಿ ಕೊಡುಗೆ ನೀವು ನನ್ನಲ್ಲಿಗೆ ಬರಲಿಲ್ಲವೇಕೆ ಎಂದು ನೊಂದು ಕೇಳಿದ ಅಮ್ಮಿನ ರೆಡ್ಡಿ. ಆ ವ್ಯಕ್ತಿ ಹೇಳಿದ ನಾನು 10 ವರ್ಷಗಳಾಯಿತು ನನಗೆ ಸ್ವಂತ ಮನೆ ಇಲ್ಲ. ಸ್ಥಳವಿಲ್ಲ. ಬಡತನದಲ್ಲಿ ಕೊರಗುತ್ತಿರುವೆ ಎಂದೆ. ಚುನಾವಣೆಯ ಸಮಯ ನಾನೇನು ಹೇಳಲಾರೆ. ಚುನಾವಣೆ ಮುಗಿದ ನಂತರ ಗೆಲುವು ಸೋಲು ಸಂಬಂಧವಿಲ್ಲ. ನಿನ್ನ ಸಮಸ್ಯೆಗಳೆಲ್ಲವನ್ನು ಪರಿಹರಿಸಿ ಕೊಡುವೆನೆಂದ ಅಮೀನರೆಡ್ಡಿ.
*****
 *  ಕೋವೀಡ್ ಸಮಯದಲ್ಲಿ ಜಾತಿ ಧರ್ಮಗಳನ್ನು ಲೆಕ್ಕಿಸದೆ ಹಲವಾರು ಕುಟುಂಬಗಳಿಗೆ ಶಹಾಪುರ ನಗರ ಸೇರಿದಂತೆ ಹಲವಾರು ಹಳ್ಳಿಗಳಿಗೆ ಆಹಾರದ ಪೊಟ್ಟಣಗಳ ಜೊತೆಗೆ ತನು ಮನ ಧನದ ಸಹಾಯ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಯ ರೋಗಿಗಳನ್ನೊಳಗೊಂಡು  ಬಡವರ ಪರ ಆಸರೆಯಾಗಿ ನಿಂತಿದ್ದಾರೆ ಅಮೀನ್ ರೆಡ್ಡಿ.
*****
 *  ಹೇಳಬೇಕೆಂದರೆ ನೂರಾರು ಉದಾಹರಣೆಗಳಿವೆ. ಬಡ ಜನರ ಆಶಾಕಿರಣ. ಅವರ ಸಹಾಯ ಅವರ ಕೊಟ್ಟ ದಾನ ಧರ್ಮ ಇತರರಿಗೆ ಮಾದರಿಯಾಗಬೇಕು. ಪ್ರಚಾರ ಬೇಡ ಮೇಲಿನವರ ದಯೆ ಇದ್ದರೆ ಸಾಕು ಎನ್ನುತ್ತಾರೆ ಆ ವ್ಯಕ್ತಿ.
*****

About The Author