ಯಾದಗಿರಿ ಮತಕ್ಷೇತ್ರ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ತ್ರಿಕೋನ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷೇತರರು !

ಯಾದಗಿರಿ : ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 15 ಜನರು ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಇನ್ನುಳಿದ ಹಲವು ಪಕ್ಷಗಳು ಸೇರಿದಂತೆ ಆರು ಜನರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ವೆಂಕಟರೆಡ್ಡಿ ಮುದ್ನಾಳ ಬಿಜೆಪಿ ಪಕ್ಷದ ಅಭ್ಯರ್ಥಿ
****
ಯಾದಗಿರಿಯಲ್ಲಿ ಮುದ್ದಾಳ ಕುಟುಂಬದವರ ಹಿಡಿತವಿದೆ. ಮುದ್ನಾಳ್ ಕುಟುಂಬಕ್ಕೆ ಡಾ.ಎಬಿ ಮಾಲಕರೆಡ್ಡಿಯವರು ಪ್ರತಿಸ್ಪರ್ಧಿಯಾಗಿ ಮೊದಲಿನಿಂದಲೂ ಪ್ರಬಲ ಎದುರಾಳಿಯಾಗಿ ಚುನಾವಣೆ ನಡೆಸಿದ್ದಾರೆ.ದಿ.ವಿಶ್ವನಾಥರೆಡ್ಡಿ ಮುದ್ನಾಳ್ ನಂತರ ಯಾದಗಿರಿ ಕ್ಷೇತ್ರದಲ್ಲಿ ವೀರಬಸವಂತರೆಡ್ಡಿ ಮೂರು ಬಾರಿ ಶಾಸಕರಾಗಿದ್ದು, ಬಿ ಎಸ್ ವೈ ಆಪ್ತರಾದ ವೆಂಕಟರೆಡ್ಡಿ ಮುದ್ನಾಳ  ಕಳೆದ ಬಾರಿ ಯಾದಗಿರಿ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ.ಈ ಬಾರಿ ಸ್ವಪಕ್ಷೀಯರ ವಿರೋಧದ ನಡುವೆಯು ಟಿಕೇಟ್ ಗಿಟ್ಟಿಸಿಕೊಂಡಿದ್ದಾರೆ.
ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ
****
ಎ ಬಿ ಮಾಲಕರೆಡ್ಡಿಯವರು
 ಶಾಸಕರಾಗಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದು, ಈ ಸಾರಿ ಕಾಂಗ್ರೆಸ್ ಪಕ್ಷದಿಂದ ಅವರ ಮಗಳಿಗೆ ಟಿಕೆಟ್ ಸಿಗದ ಕಾರಣ ಜೆಡಿಎಸ್ ಪಕ್ಷದಿಂದ ಸ್ಪರ್ಧೆಗಿಳಿದಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಅವರ ಕೈ  ಹಿಡಿಯುತ್ತವೆ ಎನ್ನುವ ಬಲವಾದ ನಂಬಿಕೆ ಮಾಲಕರೆಡ್ಡಿಯವರದಾಗಿದೆ.
ಮಲ್ಲಿಕಾರ್ಜುನ್ ಖರ್ಗೆ ಪರಮಾಪ್ತನಿಗೆ ಕಾಂಗ್ರೆಸ್ ಟಿಕೆಟ್ : ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಕಳೆಗುಂದಿದೆ.ಮಾಲಕರೆಡ್ಡಿಯವರು ಬಿಜೆಪಿ ಪಕ್ಷ ಸೇರ್ಪಡೆಯಾದ ನಂತರ ಯಾದಗಿರಿ ಕ್ಷೇತ್ರದಲ್ಲಿ ಯಾರು ಕೂಡ ತಳಮಟ್ಟದಿಂದ ಪಕ್ಷದ ಸಂಘಟನೆಗೆ ಗಮನ ಕೊಡಲಿಲ್ಲ. ಈ ಸಾರಿ 17 ಜನ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಪರಮಾಪ್ತರಾದ ಚೆನ್ನಾರೆಡ್ಡಿ ತುನ್ನೂರಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.
 ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ನಿರಾಶೆಯಾಗಿದ್ದಾರೆ. ಪಕ್ಷದಲ್ಲಿಯ ಒಳಬೇಗುದಿ ಕಾಂಗ್ರೆಸ್ ಪರ ಕೆಲಸ ಮಾಡುತ್ತದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಕ್ಷೇತ್ರದಲ್ಲಿ ಮಾಲಕರೆಡ್ಡಿಯವರ ಪರಮಾಪ್ತರು, ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್ಗೆ ಇದು ನುಂಗಲಾರದ ತುತ್ತಾಗಿದೆ.
ಡಾ.ಎಬಿ.ಮಾಲಕರೆಡ್ಡಿ ಜೆಡಿಎಸ್ ಪಕ್ಷದ ಅಭ್ಯರ್ಥಿ
****
ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷೇತರರು !
 ಕ್ಷೇತ್ರದಲ್ಲಿ 15 ಜನರು ಕಣದಲ್ಲಿದ್ದರೂ ಉಳಿದವರು ಸಣ್ಣಪುಟ್ಟ ಪಕ್ಷಗಳು ಸೇರಿದಂತೆ ಪಕ್ಷೇತರರು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂದಾಗಿದೆ. ಪಕ್ಷೇತರರಾಗಿ ಸ್ಪರ್ಧಿಸಿದ ಕೆಲವರು ಪಕ್ಷದಲ್ಲಿ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಕ್ಷೇತ್ರದಾದ್ಯಂತ ಮತದಾರರು ಯಾರ ಪರ ಮತದಾನ ಮಾಡುತ್ತಾರೋ ತಿಳಿಯುತ್ತಿಲ್ಲ. ಮುಂಜಾನೆ ಒಂದು ಪಕ್ಷ, ಮಧ್ಯಾಹ್ನ ಇನ್ನೊಂದು ಪಕ್ಷ  ಸಂಜೆಯೊಳಗಾಗಿ ಮಗದೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಹಲವಾರು ವ್ಯಕ್ತಿಗಳು ಎಲ್ಲಾ ಪಕ್ಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಮೇ 13 ರಂದು ಮತದಾರ ಯಾರ ಪರ ವರ ನೀಡುವರು ಎನ್ನುವುದು ಗೊತ್ತಾಗಲಿದೆ.

About The Author