ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳಿ ನಿರ್ದೇಶಕರಾಗಿ ಶಾಂತಗೌಡ ನಾಗನಟಗಿ ಆಯ್ಕೆ

ಬೆಂಗಳೂರು:ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿಯ ರಾಯಚೂರು ಯಾದಗಿರಿ ನಿರ್ದೇಶಕರಾಗಿ ಶಾಂತಗೌಡ ನಾಗನಟಗಿ ಆಯ್ಕೆಯಾಗಿದ್ದಾರೆ.ಮಹಾ ಮಂಡಳಿಯಲ್ಲಿ ಹದಿನಾಲ್ಕು ಜನ ನಿರ್ದೇಶಕರಿದ್ದು ಅದರಲ್ಲಿ ಆರು ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 8 ಜನ ನಿರ್ದೇಶಕರಿಗೆ ಚುನಾವಣೆ ನಡೆದಿತ್ತು. ಚುನಾವಣೆ ನಡೆದ ನಂತರ ಧಾರವಾಡ ಮತ್ತು ಬೆಂಗಳೂರು ಉಚ್ಚ ನ್ಯಾಯಾಲಯಗಳು ಫಲಿತಾಂಶ ತಡೆಹಿಡಿಯಲು ಸೂಚಿಸಿತ್ತು.ನ್ಯಾಯಾಲಯದ ಆದೇಶದಂತೆ ದಿನಾಂಕ 12 ರಂದು ಫಲಿತಾಂಶ ಪ್ರಕಟಿಸಲು ಸೂಚಿಸಿದ ನಂತರ ಇಂದು 08 ಜನ ನಿರ್ದೇಶಕರ ಪಲಿತಾಂಶ ಪ್ರಕಟಣೆಗೊಂಡಿತು.

ತೀವ್ರ ಪೈಪೋಟಿಗೆ ಕಾರಣವಾದ ರಾಯಚೂರು ಮತ್ತು ಯಾದಗಿರಿ ನಿರ್ದೇಶಕರ ಚುನಾವಣೆಯಲ್ಲಿ 20 ಮತಗಳಲ್ಲಿ ಶಾಂತಗೌಡ ನಾಗನಟಗಿ 12 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.ಮಲ್ಲಯ್ಯ ಗೋರ್ಕಲ್ 08 ಮತಗಳು ಪಡೆದು ಪರಾಭವಗೊಂಡರು.

ಬೆಂಗಳೂರು ಮಹಾಮಂಡಳಿಯ ನಿಕಟಪೂರ್ವ ಅಧ್ಯಕ್ಷರಾದ ಪಂಡಿತ್ ರಾವ್ ಚಿದ್ರಿಯವರು ಅವಿರೋಧ ಆಯ್ಕೆಗಾಗಿ ಬಹಳಷ್ಟು ಶ್ರಮಿಸಿದರು.ಫಲಕೊಡಲಿಲ್ಲ. ಅನಿವಾರ್ಯವಾಗಿ ರಾಯಚೂರು ಯಾದಗಿರಿ ನಿರ್ದೇಶಕ ಸ್ಥಾನದ ಚುನಾವಣೆ ನಡೆಯಿತು.

ಈ ಸಂದರ್ಭದಲ್ಲಿ ರಾಯಚೂರು ಮತ್ತು ಯಾದಗಿರಿ  ಸಂಘದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ  ಯಾದಗಿರಿ ಜಿಲ್ಲಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ಯಾದಗಿರಿ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ನಿಕಟಪೂರ್ವ ಅಧ್ಯಕ್ಷರಾದ ಪಂಡಿತ್ ರಾವ್ ಚಿದ್ರಿ,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಗೀತಾ ಪಂಡಿತ್ ರಾವ್ ಚಿದ್ರಿ,ಶ್ರೀನಿವಾಸ ಏಗನೂರು, ಶರಣಯ್ಯ
ಒಡೆಯರ್, ನಿಂಗಣ್ಣ ರಾಜಾಪುರ, ನಿಂಗರಾಜ ದೇವಸೂಗೂರು, ಮಾಳಪ್ಪ ಸುಂಕದ ಕೆಂಭಾವಿ,ಬಲಭೀಮ ಮಡ್ನಾಳ, ಮಲ್ಲಯ್ಯ ಅಲ್ಲಿಪುರ, ಮುನಿಯಪ್ಪ ಗೌಡ, ಮಲ್ಲಿಕಾರ್ಜುನ ಅರಕೇರ,ಹನುಮಂತ ಸಿಂಧನೂರು, ರಾಮಣ್ಣ ರಾಯಚೂರು, ಮಲ್ಲಪ್ಪ ರೊಟ್ನಡಗಿ, ಸಾಬಣ್ಣ ಗಟ್ಟು ಬಿಚ್ಚಾಲಿ ಸೇರಿದಂತೆ ಇತರರು ಇದ್ದರು.

 

ಈ ಚುನಾವಣೆ ಸತ್ಯಕ್ಕೆ ತಂದ ಜಯವಾಗಿದ್ದು, ಸುಮಾರು ಮೂರು ತಿಂಗಳಿನಿಂದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪಲಿತಾಂಶ ಪ್ರಕಟಿಸಲು ತಡವಾದರೂ ಕೂಡ ನಮಗೆ ಗೆಲುವು ಸಿಕ್ಕಿದೆ.ಯಾದಗಿರಿ ಮತ್ತು ರಾಯಚೂರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ಸಹಕಾರದಿಂದ ಗೆಲುವು ದಕ್ಕಿದೆ.ಕುರಿ ಸಂಘಗಳಿಗೆ ಮತ್ತು ಕುರಿಗಾರರಿಗೆ ಶ್ರಮಿಸುತ್ತೇನೆ.

ಶಾಂತಗೌಡ ನಾಗನಟಗಿ
ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಬೆಂಗಳೂರು.

 

 

 

About The Author