ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 43 ನೆಯ ‘ ಶಿವೋಪಶಮನ ಕಾರ್ಯ’

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಎಪ್ರಿಲ್ 23,2023 ರ ರವಿವಾರದಂದು 43 ನೆಯ ‘ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಕಾರುಣ್ಯ ವಿಶೇಷವಾದ ಶಿವೋಪಶಮನವನ್ನು‌ ಕರುಣಿಸಿದರು.

ಮಹಾಶೈವ ಧರ್ಮಪೀಠದಲ್ಲಿ ನಡೆದ ಐದನೆಯ ‘ ಶಿವೋಪಶಮನ ಕಾರ್ಯ’ ದಲ್ಲಿ ಸಂತಾನಾರ್ಥಿಯಾಗಿ ಶಿವ ವಿಶ್ವೇಶ್ವರನ ಸನ್ನಿಧಿಗೆ ಬಂದಿದ್ದ ಮಹಾಶೈವ ಧರ್ಮಪೀಠದ ನಿಷ್ಠಾವಂತ ಭಕ್ತರಾಗಿದ್ದ ಮಸೀದಪುರ ಗ್ರಾಮದ ಶಿವಪುತ್ರಪ್ಪ ಹೇರೂರ ಇವರ ಮಗ ಶಿವಾನಂದ
ಹೆಣ್ಣುಮಗುವಿನ ತಂದೆಯಾಗಿದ್ದುದು ಈದಿನದ ‘ ಶಿವೋಪಶಮನ ಕಾರ್ಯ’ ದ ವಿಶೇಷವಾಗಿತ್ತು.ಶಿವ ವಿಶ್ವೇಶ್ವರನು ‘ ಮಾತನಾಡುವ ಮಹಾದೇವ’ ಎಂದು ಬಿರುದುಗೊಂಡು ತನ್ನ ಸನ್ನಿಧಿಯನ್ನರಸಿ ಬರುವ ಸಂತಾನಾರ್ಥಿಗಳ ಸಂಕಟವನ್ನು ಪರಿಹರಿಸಿ, ನಿಶ್ಚಿತವಾಗಿ ಸಂತಾನಭಾಗ್ಯವನ್ನು ಕರುಣಿಸುತ್ತಿರುವುದರಿಂದ ಮಹಾಶೈವ ಧರ್ಮಪೀಠಕ್ಕೆ ಜಾತಿ,ಧರ್ಮಗಳ ಹಂಗಿಲ್ಲದೆ ಎಲ್ಲ ಜಾತಿ,ಧರ್ಮಗಳ ಭಕ್ತರುಗಳು ಸಂತಾನಾಪೇಕ್ಷಿಗಳಾಗಿ ಬರುತ್ತಿದ್ದಾರೆ.

ಈದಿನದ ಅನ್ನದಾಸೋಹಿಗಳಾದ ಬೂದೆಪ್ಪ ಅಮನಳ್ಳಿ ಅವರನ್ನು ಪೀಠಾಧ್ಯಕ್ಷರು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠ ವಾರ್ತಾಧಿಕಾರಿ ಬಸವರಾಜ ಕರೆಗಾರ,ದಾಸೋಹ ಸಮಿತಿಯ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿದ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಬಾಬುಗೌಡ ಯಾದವ ಸುಲ್ತಾನಪುರ, ಶಿವಯ್ಯಸ್ವಾಮಿ ಮಠಪತಿ,ಮೃತ್ಯುಂಜಯ ಯಾದವ ಗಬ್ಬೂರು,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಯಲ್ಲಪ್ಪ ಕರಿಗಾರ,ಹನುಮೇಶ,ಮಹಾಶೈವ ಧರ್ಮಪೀಠದ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ಪ್ರಚಾರ ವ್ಯವಸ್ಥಾಪಕ ಉದಯಕುಮಾರ ಸಣ್ಣಹುಲಿಗೆಪ್ಪ ಮಡಿವಾಳ ಸೇರಿದಂತೆ ಗ್ರಾಮಸ್ಥರು,ಭಕ್ತರುಗಳು ಉಪಸ್ಥಿತರಿದ್ದರು.

About The Author