ಶಹಾಪುರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಬಿಜೆಪಿ ಅಭ್ಯರ್ಥಿ ಅಮ್ಮಿನರೆಡ್ಡಿ ಬೇಟಿ ಮತಯಾಚನೆ

ಶಹಾಪುರ:ಶಹಪುರ ಕ್ಷೇತ್ರದ ನಡಕೂರು,ಗೋಗಿಪೇಠ, ಪರಸನಹಳ್ಳಿ,ಚನ್ನೂರು,ಕಕ್ಕಸಗೇರಾ,ಬೂದನೂರು ಗ್ರಾಮಗಳಿಗೆ ಬಿಜೆಪಿ ನಿಯೋಜಿತ ಅಭ್ಯರ್ಥಿಯಾದ ಅರ್ಮಿನ್ ರೆಡ್ಡಿ ಯಾಳಗಿಯವರು ಕ್ಷೇತ್ರದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಶಹಪುರ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು, ಪ್ರತಿ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಮೇಲೆ ಮತದಾರರಲ್ಲಿ ಅಪಾರ ಒಲವು ಮೂಡಿಬಂದಿದೆ. ಕ್ಷೇತ್ರದಾದ್ಯಂತ ಜನ ಬದಲಾವಣೆ ಬಯಸಿದ್ದು, ಕ್ಷೇತ್ರದ ಮತದಾರರು ಬಿಜೆಪಿಯ ಕೈಹಿಡಿದು ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ನಡಕೂರು ಗ್ರಾಮದ ನಿಂಗಣ್ಣ ಮೇಟಿ‌ ಯಡಿಯೂರು, ಸಿದ್ದಣ್ಣ ಅಂಕುಶ ಮಡಿವಾಳಪ್ಪ ಪೂಜಾರಿ ಹನುಮಂತರಾಯ ಗದ್ಯಪ್ಪ ಪೂಜಾರಿ ಸೇರಿದಂತೆ ಹಲವರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಡಾ.ಚಂದ್ರಶೇಖರ ಸುಬೆದಾರ, ತಾಲೂಕು ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ್ ಬಿಜೆಪಿ ಹಿರಿಯ ಮುಖಂಡರಾದ ಬಸವರಾಜಗೌಡ ವಿಭೂತಿಹಳ್ಳಿ ರಾಜಶೇಖರ ಗೂಗಲ ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *