ಬಿಜೆಪಿಯಿಂದ ಹಿಂದುಳಿದವರ ಕಡೆಗಣನೆ ಆರೋಪ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ದೇವೇಂದ್ರಪ್ಪ ಮುನ್ಮುಟಗಿ 

ವಡಗೇರಾ : ಬಿಜೆಪಿಯಲ್ಲಿ ಹಿಂದುಳಿದ ವರ್ಗದವರು ತುಳಿತಕ್ಕೆ ಒಳಗಾಗುತ್ತಿದ್ದಾರೆ. ಪಕ್ಷವು ಹಿಂದುಳಿದ ವರ್ಗದ ಒಂದು ಸಮಾಜದ ನಾಯಕರಾದ ಕೆಎಸ್ ಈಶ್ವರಪ್ಪನವರನ್ನು ಮೂಲೆಗುಂಪು ಮಾಡಲಾಗಿದೆ. ಜಿಲ್ಲೆಯಲ್ಲಿಯೂ ಕೂಡ ಇದೇ ಮನಸ್ಥಿತಿ ಇದ್ದು,ಇದರಿಂದ ಬೇಸತ್ತು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದು ಯಾದಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಖಾನಾಪೂರ ಗ್ರಾಮದ ಬಿಜೆಪಿ ಮುಖಂಡ ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗದ ಮಾಜಿ ಜಿಲ್ಲಾಧ್ಯಕ್ಷರಾದ ದೇವೇಂದ್ರಪ್ಪ ಮುನ್ಮುಟಗಿ ತಿಳಿಸಿದರು.ಇಂದು ಖಾನಾಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಮಾತನಾಡಿದರು.
 ನಾಯ್ಕಲ್ ಜಿಲ್ಲಾ ಪಂಚಾಯಿತಿಯಲ್ಲಿ ನಮ್ಮ ತಾಯಿಯು ಜಿಲ್ಲಾ ಪಂಚಾಯಿತಿ ಸದಸ್ಯರಿರುವ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಜೆಜೆಪ್ಪ, ಶರಣಪ್ಪ ತಿಪ್ಪನಟಗಿ, ದೇವಪ್ಪ, ಸಿದ್ದಣ್ಣ, ಅನಿಲ್ ತಡಿಬಿಡಿ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಚೆನ್ನಾರೆಡ್ಡಿ ತುನ್ನೂರು,ಡಾ. ಭೀಮಣ್ಣ ಮೇಟಿ, ಶರಣಪ್ಪ ಸಲಾದಪೂರ, ಡಾ. ಶರಣಪ್ಪ ಕಾಮರೆಡ್ಡಿ, ಬಸು ಬೀಳಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮರೇಪ್ಪ ಬಿಳಾರ, ರಾಷ್ಟ್ರೀಯ ಕಾರ್ಯದರ್ಶಿಗಳಾದ ಚೈತ್ರ ಕೊಂಕಲ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.