ಇಬ್ರಾಹಿಂ ಶಿರವಾಳ ಕಾಂಗ್ರೆಸ್ ಸೇರ್ಪಡೆ : ಹಿಂದುಳಿದವರನ್ನು ಕಡೆಗಣಿಸುತ್ತಿರುವ ಬಿಜೆಪಿ ಪಕ್ಷದ ವಿರುದ್ಧ ಶಾಸಕರ ಆಕ್ರೋಶ

ಶಹಪುರ : ತಾಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ  ಶಾಸಕ ಶರಣಬಸಪ್ಪಗೌಡ ದರ್ಶನಪುರ ಸಮ್ಮುಖದಲ್ಲಿ ಇಬ್ರಾಹಿಂ ಶಿರವಾಳ ಕಾಂಗ್ರೆಸ್ ಪಕ್ಷ  ಸೇರ್ಪಡೆಗೊಂಡರು.ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ ಶಿರವಾಳ, ಏಕಾಏಕಿ ನಾನು ಬೇರೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆ.ಆದರಿಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದೇನೆ.ಯಾವ ಕಾಲಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.
*****
ಈ ಸಂದರ್ಭದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಪುರ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆಯಾಗಿದೆ. ನಾನು ಭೇಟಿ ಕೊಟ್ಟ ಗ್ರಾಮಗಳಲ್ಲಿ ಮತದಾರರು ಕಾಂಗ್ರೆಸ್ ಪರ ಒಲವು ತೋರಿಸುತ್ತಿದ್ದಾರೆ. ಕುಟುಂಬ ರಾಜಕಾರಣ ಬಿಜೆಪಿ ಪಕ್ಷದಲ್ಲಿ ಇಲ್ಲ ಎನ್ನುತ್ತಿದ್ದಾರೆ. ಅದೆಲ್ಲ ಸುಳ್ಳು. ಯಡಿಯೂರಪ್ಪ ತನ್ನ ಮಗನಿಗೆ, ಆನಂದ್ ಸಿಂಗ್ ತನ್ನ ಮಗನಿಗೆ ಸೇರಿದಂತೆ ಇತರ ನಾಯಕರ  ಸಂಬಂಧಿಗಳಿಗೆ ಟಿಕೆಟ್ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಹಿಂದುಳಿದ ವರ್ಗದವರನ್ನು ಕಡೆಗಣಿಸಿರುವ ಬಿಜೆಪಿ ಪಕ್ಷ ಈಶ್ವರಪ್ಪನವರ ಮಗನಿಗೆ ಏಕೆ ಟಿಕೆಟ್ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
*****
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ 30 ರಿಂದ 35 ಸೀಟ್ ಗೆಲ್ಲಲಿದೆ ಎಂದರು.
ಲಿಂಗಾಯತರನ್ನು ಕಡೆಗಣಿಸುತ್ತಿರುವ ಬಿಜೆಪಿ ಪಕ್ಷ ಜಗದೀಶ್ ಶೆಟ್ಟರ್,ಲಕ್ಷಣ ಸವದಿ ಸೇರಿದಂತೆ ಹಲವು ಲಿಂಗಾಯತ ಮುಖಂಡರನ್ನು ಮೂಲೆಗುಂಪು ಮಾಡಿದೆ. ಬಿಜೆಪಿಯು ಮೀಸಲಾತಿಯಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಶೇ. 50 ಮೀರುವಂತಿಲ್ಲ. ರಾಜ್ಯ ಸರ್ಕಾರ ಶೇ. 67 ರಷ್ಟು ಮೀಸಲಾತಿ ನೀಡಿದೆ! ಮೀಸಲಾತಿ ನೀಡಿದ್ದೇವೆ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
*****
2013ರ ಚುನಾವಣೆಯಲ್ಲಿ ಸೋತ ನಾನು ಹೆದರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪಕ್ತ ಸಂಘಟನೆ ಮಾಡಿ 2018ರಲ್ಲಿ ಜಯಗಳಿಸಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕ್ಷೇತ್ರದ ಮತದಾರರು ಮತ್ತೆ ನನ್ನ  ಕೈ ಹಿಡಿಯುತ್ತಾರೆ ಎನ್ನುವ ಬಲವಾದ ನಂಬಿಕೆ ಇದೆ ಎಂದು ತಿಳಿಸಿದರು.ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲ್ಕಲ್, ಜಿಲ್ಲಾ ವಕ್ತಾರರಾದ ಮಲ್ಲಪ್ಪ ಗೋಗಿ ಉಳಂಡಗೇರಿ ಉಪಸ್ಥಿತರಿದ್ದರು.
*****
ಏಪ್ರಿಲ್ 17 ರಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ನಾಮಿನೇಷನ್ ಮಾಡುವ ಸಂದರ್ಭದಲ್ಲಿ ಇಬ್ರಾಹಿಂ ಶಿರವಾಳ ಶಾಸಕರ ಜೊತೆಗಿದ್ದರು.ಮರುದಿನವೆ ಮಾಜಿ ಶಾಸಕರಾದ ಗುರುಪಾಟೀಲ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದರು.ಆದರಿಂದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

About The Author