ಬಿವಿ.ನಾಯಕ ಬಿಜೆಪಿ ಸೇರ್ಪಡೆ : ಭಗವಂತನನ್ನು ಕೈಹಿಡಿದ ಶಿವ !

ರಾಯಚೂರು : ರಾಯಚೂರಿನ ಎಲ್ಲಾ ಕ್ಷೇತ್ರಗಳು ರಣರೋಚಕದಿಂದ ಕೂಡಿದ್ದು, ಒಂದು ಕಾಲದಲ್ಲಿ ಅರಕೇರಾದ ವೆಂಕಟೇಶ ನಾಯಕ ಇಡೀ ರಾಯಚೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಅರಕೇರದ ಕೇಂದ್ರಬಿಂದುವನ್ನಾಗಿಸಿದ್ದವು. ಆದರೆ ಇಂದು ಅರಿಕೇರ ಕೇಂದ್ರ ನುಚ್ಚುನೂರಾಗಿದ್ದು ಅಣ್ಣತಮ್ಮಂದಿರು ಬೇರ್ಪಟ್ಟು ಬೇರೆ ಪಕ್ಷದತ್ತ ವಾಲುತ್ತಿದ್ದಾರೆ.

 

ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲವೆಂದು ಜಿಲ್ಲೆಯ ಕೆಪಿಸಿಸಿ ಅಧ್ಯಕ್ಷರಾದ ಬಿ ವಿ ನಾಯಕ ಹುಬ್ಬಳ್ಳಿಯ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾರವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನೆ ಉಂಟಾಗಿದೆ.ಕಾಂಗ್ರೆಸ್ ಪಕ್ಷದ ಒಬ್ಬ ಪ್ರಭಾವಿ ನಾಯಕ ಕಾಂಗ್ರೆಸ್ ತೊರೆದಿದ್ದು, ಜಿಲ್ಲೆಯಲ್ಲಿ ದೇವದುರ್ಗ ಕ್ಷೇತ್ರವನ್ನು ಅರಿಕೇರವನ್ನಾಗಿಸಲು ತಮ್ಮ ಸಂಬಂಧಿಕರಲ್ಲಿ ಉಳಿಸಿಕೊಳ್ಳಬೇಕು ಎನ್ನುವಾಸೆಯಿಂದ ಬಿಜೆಪಿ ಸೇರಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಹೆಚ್ಚಾಗಿದ್ದು ಗೆಲುವಿನ ಅಂಚಿನಲ್ಲಿದ್ದಾರೆ ಎನ್ನುತ್ತಿದ್ದಾರೆ ಮತದಾರರು ! ಕಾಂಗ್ರೆಸ್ ಪಕ್ಷದಿಂದ ಬಿವಿ. ನಾಯಕರಿಗೆ ಟಿಕೆಟ್ ನೀಡಲಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಶ್ರೀದೇವಿ ನಾಯಕ ಹಠ ಮಾಡಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬಿವಿ.ನಾಯಕ ತಮ್ಮ ಕುಟುಂಬದವರಿಗೆ ಮಾನ್ವಿ ಮತ್ತು ದೇವದುರ್ಗದಲ್ಲಿ ಟಿಕೆಟ್ ಕೇಳಿದ್ದರು ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಒಂದೇ ಟಿಕೆಟ್ ದೇವದುರ್ಗಕ್ಕೆ ಕೊಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿವಿ ನಾಯಕ ಕಾಂಗ್ರೆಸ್ ತೊರೆದಿದ್ದಾರೆ ಎನ್ನಲಾಗಿದೆ.ಬಿವಿ. ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿಯ ಶಿವನಗೌಡ ನಾಯಕ ಮಾವನಿಗಾಗಿ ಮಾನ್ವಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ಸಲುವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎನ್ನುವ ಕೂಗೂ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.ಇದರಿಂದ ಅರಿಕೆರೆಯಲ್ಲಿಯೇ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಇಬ್ಬರಿಂದಲೂ ನಡೆದಿದೆ ಎನ್ನಲಾಗಿದೆ.
ಹೊರಗಿನವರಾದ ಜೆಡಿಎಸ್ಸಿನ ಕರೆಮ್ಮನಿಗೆ ಯಾವುದೇ ಸಂದರ್ಭ ಬಂದರೂ ದೇವದುರ್ಗದಲ್ಲಿ ಅಧಿಕಾರ ಬಿಟ್ಟು ಕೊಡಬಾರದು ಎನ್ನುವ ಲೆಕ್ಕಾಚಾರದಿಂದಾಗಿ ಬಿಜೆಪಿಗೆ ಬಿವಿ.ನಾಯಕ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ಬೆಳಗಾವಿಯ ಬಿಜೆಪಿ ಪ್ರಭಾವಿ ನಾಯಕರಾದ ಬಿವಿ. ನಾಯಕ ಸಂಬಂಧಿಗಳಾದ ರಮೇಶ್ ಜಾರಕಿಹೊಳಿ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ದೇವದುರ್ಗ ಮತ್ತು ಮಾನ್ವಿ ಕ್ಷೇತ್ರಗಳು ಬಿಜೆಪಿಯ ಪ್ರಭಾವಿ ಮುಖಂಡರ ಕೈ ಸೇರಿವೆ. ಆದರೆ ಮತದಾರರು ಯಾರ ಕೈಹಿಡಿತಾರೆ ಎನ್ನುವುದು ಕುತೂಹಲ ಘಟ್ಟಕ್ಕೆ ತಲುಪಿದೆ.
ಬಿವಿ. ನಾಯಕ ದೇವದುರ್ಗದಲ್ಲಿ ತನ್ನದೇ ಛಾಪು ಹೊಂದಿದ್ದಾರೆ. ಬಿಜೆಪಿ ಸೇರ್ಪಡೆಯಿಂದ ದೇವದುರ್ಗದಲ್ಲಿ ಮತಗಳು ಕ್ರೂಡೀಕರಣ ಹೊಂದಿ ಕಾಂಗ್ರೆಸ್ ಮತಗಳು ಬಿಜೆಪಿಗೆ ಹಾಕಬಹುದು ಎನ್ನುವ ಲೆಕ್ಕಾಚಾರ ದೇವದುರ್ಗದಲ್ಲಿ ಯಾಗಬಹುದು. ಇದರಿಂದಾಗಿ ಶಿವನಗೌಡ ನಾಯಕ ಸುಲಭ ಗೆಲುವು ಸಾಧಿಸಬಹುದು ಎನ್ನಲಾಗಿದ್ದು, ಮಾನ್ವಿ ಕ್ಷೇತ್ರದಲ್ಲಿ ಶಿವನಗೌಡ ನಾಯಕ ಪ್ರಭಾವವಿದ್ದು,ಇದರಿಂದ ಬಿವಿ.ನಾಯಕ ಮಾನ್ವಿ ಕ್ಷೇತ್ರದಲ್ಲಿ ಅಭ್ಯರ್ಥಿಯಾದರೆ ಗೆಲುವಾಗಬಹುದು  ಎನ್ನುವ ಲೆಕ್ಕಾಚಾರ ಶಿವನಗೌಡ ನಾಯಕರವರಲ್ಲಿದೆ.ಮಾನ್ವಿಯಲ್ಲಿ ಬಿಜೆಪಿ ಟಿಕೆಟ್ ಸಿಗದ ಆಕಾಂಕ್ಷಿಗಳು ಬಂಡಾಯವೆದ್ದರೆ ಮತದಾರರ ಲೆಕ್ಕಾಚಾರ ಉಲ್ಟಾವಾಗಬಹುದು. ಕೊನೆಗೆ ಮತದಾರ ಯಾರಿಗೆ ಪಟ್ಟ ಕಟ್ಟುವನೊ ನೋಡಬೇಕಿದೆ.

About The Author