ಡಾ ತನುಶ್ರೀ ಜಾತಿ ಪ್ರಮಾಣ ಪತ್ರ ಅರ್ಹ :  ಜಿಲ್ಲಾಧಿಕಾರಿ ಆದೇಶ ತಡೆಹಿಡಿದ ನ್ಯಾಯಾಲಯ :  ಚುನಾವಣೆ ನಿಲ್ಲಲು ಗ್ರೀನ್ ಸಿಗ್ನಲ್ !

ರಾಯಚೂರು : ಮಾನ್ವಿ ಕ್ಷೇತ್ರದಲ್ಲಿ ಕಳೆದ ಬಾರಿ 2018ರಲ್ಲಿ ಎಸ್ಟಿ ಕೋಟದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಡಾ. ತನುಶ್ರೀ (ಗುತ್ತೇದಾರರಾದ ಸಿದ್ದರಾಮಯ್ಯನವರ ಆಪ್ತರಾದ ಎಂ ಈರಣ್ಣನವರ ಸೊಸೆ)  37 ಸಾವಿರಕ್ಕೂ ಹೆಚ್ಚು ಮತಗಳ ಪಡೆದು ಎರಡನೇ ಸ್ಥಾನದಲ್ಲಿದ್ದರು.

ಈ ಬಾರಿ 2023 ರ ರಾಜ್ಯ ವಿಧಾನಸಭಾ ಚುನಾವಣೆಗೆ ಗೆಲ್ಲುವ ವಿಶ್ವಾಸದಿಂದ ಕಾಂಗ್ರೆಸ್  ಟಿಕೆಟ್ ಗಾಗಿ ಡಾ.ತನುಶ್ರೀ ಅರ್ಜಿ ಸಲ್ಲಿಸಿದ್ದರು. ಆದರೆ ಕೆಲವು ಕಾಂಗ್ರೆಸ್ ಪಕ್ಷದ ತಾಲೂಕು ಮತ್ತು ಜಿಲ್ಲಾ ನಾಯಕರ ಕುತಂತ್ರದಿಂದ ಟಿಕೆಟ್ ತಪ್ಪಿಸಿದರು. ಇದನ್ನು ಲೆಕ್ಕಿಸದೆ ಎಂ. ಈರಣ್ಣನವರು ಮತ್ತೆ 2023ರ ಚುನಾವಣೆಗೆ ನಿಲ್ಲಲು ಮುಂದಾಗಿದ್ದು, ಇದನ್ನು ಸಹಿಸದ ಕೆಲವರು ಡಾ.ತನುಶ್ರೀರವರ ಜಾತಿ ಪ್ರಮಾಣ ಪತ್ರ ‌ ಸುಳ್ಳು ಜಾತಿ ಪ್ರಮಾಣ ಪತ್ರ ಎಂದು ದೂರು ದಾಖಲಿಸಿದ್ದರು.
ಬೀದರ ಜಿಲ್ಲಾಧಿಕಾರಿಗಳು ಜಾತಿ ಪ್ರಮಾಣ ಪತ್ರ ಅನರ್ಹ ಎಂದು ಘೋಷಿಸಿದ್ದರು.
ಇದನ್ನು ಪ್ರಶ್ನಿಸಿ ಡಾ. ತನುಶ್ರೀ ಕಲಬುರ್ಗಿ ಉಚ್ಚ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ನ್ಯಾಯಾಲಯವು ಡಾ.ತನುಶ್ರೀ ಜಾತಿ ಪ್ರಮಾಣ ಪತ್ರ ಅರ್ಹವಾಗಿದ್ದು  ಬೀದರ್ ಜಿಲ್ಲಾಧಿಕಾರಿಗಳ ಆದೇಶ ರದ್ದುಪಡಿಸಿ ಚುನಾವಣೆಗೆ ನಿಲ್ಲಲು ನ್ಯಾಯಾಲಯವು ತನುಶ್ರೀರವರಿಗೆ ಗ್ರೀನ್ ಸಿಗ್ನಲ್ ನೀಡಿದೆ. ದೂರು ದಾಖಲಿಸಿದ ಕೆಲವರಿಗೆ ಕ್ಷೇತ್ರದಲ್ಲಿ ಬಾರಿ ಹಿನ್ನಡೆಯಾಗಿದೆ.

About The Author