ಮಹಾಶೈವ ಧರ್ಮಪೀಠದಲ್ಲಿ 42 ನೆಯ  ಶಿವೋಪಶಮನ : ಕಾರ್ಯ ನಡೆಯಲು ಬಾರದಿದ್ದ ವೃದ್ಧೆ ಮತ್ತು ಬಾಲಕರಿಬ್ಬರು ನಡೆದಾಡಿದ ವಿಶ್ವೇಶ್ವರ ಶಿವನ ಲೀಲೆ!

ಶಹಾಪುರದ ಸಗರ ಗ್ರಾಮದ ಪೃಥ್ವಿ ಎನ್ನುವ ಬಾಲಕ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ.ಮಹಾಶೈವ ಪೀಠದಲ್ಲಿ ನಡೆದಾಡುತ್ತಿರುವುದು.

ವಡಗೇರಾ : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಎಪ್ರಿಲ್ 16 ರವಿವಾರದಂದು ನಲವತ್ತೆರಡನೆಯ ‘ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಗಬ್ಬೂರು ಹಾಗೂ ದೂರದೂರದ ಊರುಗಳಿಂದ ಬಂದಿದ್ದ ಬಹುಸಂಖ್ಯೆಯ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

       ಕಳೆದ ರವಿವಾರ ನಡೆದಿದ್ದ 41 ನೆಯ ಶಿವೋಪಶಮನ ಕಾರ್ಯದಲ್ಲಿ ತೋರಿಸಿಕೊಳ್ಳಲು ಬಂದಿದ್ದ ಎರಡು ಕಾಲುಗಳ ಪೂರ್ಣಸ್ವಾಧೀನಕಳೆದುಕೊಂಡು  ನಡೆಯಲು  ಬಾರದಿದ್ದ ದರೆಮ್ಮ ನಂದಿಹಾಳ ಎನ್ನುವ ಮಹಿಳೆ ಮತ್ತು ಸಗರದ ಪೃಥ್ವಿ ಎನ್ನುವ ಬಾಲಕರಿಬ್ಬರು ಪೀಠಾಧ್ಯಕ್ಷರ ಸನ್ನಿಧಿಯಲ್ಲಿ ನಡೆದಾಡಿದ್ದನ್ನು ಭಕ್ತಸಮೂಹ ಆನಂದಾಶ್ಚರ್ಯಗಳಿಂದ ನೋಡಿದರೆ ಆ ಎರಡು ಕುಟುಂಬಗಳವರು ಕೃತಜ್ಞತಾಪೂರ್ವಕವಾಗಿ ಶರಣುಗಳನ್ನು ಸಮರ್ಪಿಸಿದರು.ಪ್ರತಿವಾರವೂ ಹೀಗೆ ಪವಾಡಸದೃಶ್ಯವಾಗಿ ರೋಗಿಗಳು ಮಹಾಶೈವ ಧರ್ಮಪೀಠದಲ್ಲಿ ವಿಶ್ವೇಶ್ವರ ಶಿವನ ದಿವ್ಯಕಾರುಣ್ಯ ಕಟಾಕ್ಷದಿಂದ ಗುಣಮುಖರಾಗುತ್ತಿದ್ದಾರೆ.
ವೈದ್ಯರುಗಳು ಅಸಹಾಯಕತೆಯಿಂದ ಕೈಚೆಲ್ಲಿದ ಅಸಾಧ್ಯ ರೋಗಪೀಡಿತರುಗಳು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ಗುಣಮುಖರಾಗುತ್ತಿರುವುದರಿಂದ ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.ಕಳೆದ ವಾರ ಶಕ್ತಿನಗರದ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು ಚೇತರಿಸಿಕೊಂಡಿದ್ದನ್ನು ಪತ್ರಿಕೆಗಳಲ್ಲಿ ಓದಿದ್ದ ರಾಯಚೂರಿನ ಗಾಜಗಾರಪೇಟೆಯ ವಿಶ್ವನಾಥಪ್ಪ ಎನ್ನುವವರು ಶ್ರೀಕ್ಷೇತ್ರಕ್ಕೆ ಆಗಮಿಸಿ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ತಮ್ಮ ಸಹೋದರಿ ವಿಜಯ ಲಕ್ಷ್ಮೀಯವರ ಕರುಣಾಜನಕ ಸ್ಥಿತಿಯ ಬಗ್ಗೆ ಪೀಠಾಧ್ಯಕ್ಷರೆದುರು ನಿವೇದಿಸಿಕೊಂಡರು.
ಕ್ಯಾನ್ಸರ್ ಪೀಡಿತ ವಿಜಯಲಕ್ಷ್ಮೀಯವರನ್ನು ರಾಯಚೂರು ಬೆಂಗಳೂರಿನ ಆಸ್ಪತ್ರೆಗಳಲ್ಲಿ  ವೈದ್ಯಕೀಯ ತಪಾಸಣೆ ಮಾಡಿಸಿ,ಕ್ಯಾನ್ಸರ್ ರೋಗಕ್ಕೆಂದು ಕಿಮಿಯೋ ತೆರಪಿ,ರೆಡಿಯೋ ತೆರಪಿ ಮಾಡಿಸಿಯೂ ಗುಣಮುಖರಾಗದೆ ಕ್ಯಾನ್ಸರ್ ಉಲ್ಬಣಿಸಿ ರೋಗವು ಅವರ ದೇಹದಾದ್ಯಂತ ವ್ಯಾಪಿಸಿರುವ ಸಂಗತಿಯನ್ನು ಅರುಹಿದರು. ವಿಶ್ವನಾಥಪ್ಪನವರಿಗೆ ಅಭಯ ನೀಡುತ್ತ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಜಯಲಕ್ಷ್ಮೀಯವರ ಪರವಾಗಿ ಶಿವ ವಿಶ್ವೇಶ್ವರನಲ್ಲಿ ಪ್ರಾರ್ಥಿಸಿದ್ದು ಭಕ್ತಜನರಲ್ಲಿ ಪೀಠಾಧ್ಯಕ್ಷರ ಲೋಕಾನುಕಂಪ ಗುಣದ ಬಗ್ಗೆ ಗೌರವಾದರಗಳು ನೂರ್ಮಡಿಸಲು ಕಾರಣವಾಯಿತು.
        ಇಂದಿನ ಶಿವೋಪಶಮನ ಕಾರ್ಯದಲ್ಲಿ  ತಮ್ಮ ಹುಟ್ಟುಹಬ್ಬದ ನಿಮಿತ್ತವಾಗಿ ಹೋಳಿಗೆ ಊಟದ ವಿಶೇಷ ಅನ್ನ ದಾಸೋಹ ಕೈಂಕರ್ಯಗೈದ ಉದಯಕುಮಾರ ಮಡಿವಾಳ ಅವರನ್ನು ಪೀಠದ ಪರವಾಗಿ ಮುಖ್ಯೋಪಾಧ್ಯಾಯರು ಮತ್ತು ಶ್ರೀದೇವಿ ಉಪಾಸಕರಾಗಿರುವ ಉದಯಕುಮಾರ ಬಡಿಗೇರ ಅವರು ಸನ್ಮಾನಿಸಿ,ಗೌರವಿಸಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದಾಸೋಹ ಸಮಿತಿಯ ಗುರುಬಸವ ಹುರಕಡ್ಲಿ ಮತ್ತು ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶರಣಪ್ಪ ಬೂದಿನಾಳ, ಶರಣಗೌಡ ಹೊನ್ನಟಗಿ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್,  ಬಿ.ಮಲ್ಲಿಕಾರ್ಜುನ ವಕೀಲರು, ಪಂಚಯ್ಯ ಕರಿಗಾರ,ಯಲ್ಲಪ್ಪ ಕರಿಗಾರ,ಪೀಠದ ಅರ್ಚಕ ದೇವರಾಜ ಕರಿಗಾರ,ಹನುಮೇಶ,ತಿಪ್ಪಯ್ಯ ಭೋವಿ,ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳೇನಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author