ಬಿಜೆಪಿಯಿಂದ ರಾಜ್ಯದಲ್ಲಿ ಲಿಂಗಾಯತ ನಾಯಕರೆ ಟಾರ್ಗೆಟ್ ! : ನಾಳೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಜಗದೀಶ ಶೆಟ್ಟರ್

ಹುಬ್ಬಳ್ಳಿ : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಧರ್ಮೇಂದ್ರ ಪ್ರಧಾನ ಮತ್ತು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಶಿಯವರ ಸಂಧಾನ ಸಭೆಯ ನಡುವೆಯೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ನಾಳೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಇಂದು ತಮ್ಮ ನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಗೆ ನಿಲ್ಲುವುದು ಖಚಿತ.ನನ್ನ ಮೇಲೆ ಭ್ರಷ್ಟಾಚಾರದ ಯಾವುದೆ ಕಪ್ಪುಚುಕ್ಕೆ ಇಲ್ಲ.ಜನ ಸಂಘದಿಂದ ಬಂದಿದ್ದೇನೆ.ನನಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದಾರೆ.40 ವರ್ಷ ರಾಜಕಾರಣದಲ್ಲಿ ಇಂದು ನನಗೆ ಅತ್ಯಂತ ಕೆಟ್ಟ ದಿನ.ನನಗೆ ಅಲ್ಪಾವಧಿ ಅಧಿಕಾರ ಸಿಕ್ಕರು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿರುವೆ.ಪಕ್ಷದ ಶಿಸ್ತಿನ ಸಿಪಾಯಿ ನಾನು.

75 ವರ್ಷದಲ್ಲಿದ್ದವರಿಗೆ ಟಿಕೆಟ್  ನೀಡಲಾಗಿದೆ.ನನಗೇಕಿಲ್ಲ.ಆರು ಬಾರಿ ಶಾಸಕನಾಗಿ 25000 ಮತದಿಂದ ಗೆದ್ದಿರುವೆ.ಹೈಕಮಾಂಡ್ ಸರ್ವೆಯಲ್ಲಿ ನಾನು ಮುಂದಿರುವೆ.ಟಿಕೆಟ್ ನಿರಾಕರಣೆಗೆ ಕಾರಣವೇನು.ನಡ್ಡಾ ಮತ್ತು ಅಮಿತ್ ಶಾ ರಿಗೆ ನನ್ನ ಬಗ್ಗೆ ಹೇಳುತ್ತಿಲ್ಲ.

ನನ್ನ ವಿರುದ್ಧ ಷಡ್ಯಂತ್ರ ಕುತಂತ್ರ ನಡೆಯುತ್ತಿದೆ.
ಯಾರಾರ ಕೈವಾಡವಿದೆ ಎಂದು ಗೊತ್ತು.
ನನ್ನ ಪ್ರಶ್ನೆಗೆ ದರ್ಮೆಂದ್ರ ಪ್ರಧಾನ ಮಾತನಾಡಿಲ್ಲ.
15 ದಿನಗಳ ಹಿಂದೆ ಮೊದಲೆ ಹೇಳಿದ್ದರೆ ರಾಜಿನಾಮೆ ಕೊಡುತ್ತಿದ್ದೆ ಎಂದು ಮನನೊಂದು ಮಾತನಾಡಿದರು.
 ಕುಟುಂಬವರಿಗೆ ಟಿಕೆಟ್ ಕೊಡುವೆವು.ನಿಮಗಿಲ್ಲ ಎನ್ನುವರು.ಯಾಕೆ ಎಂದು ಕೇಳಿದರೆ ಹೇಳುತ್ತಿಲ್ಲ.
ದೇಶದಲ್ಲಿ ಉನ್ನತ್ತ ಹುದ್ದೆ ಕೊಡುವೆವು ಎಂದು ಹೇಳುವರು.ನಾನು ಗೆದ್ದರೆ ಸಿಎಂ ಆಗುವರು ಎನ್ನುವ ಭಯವಿದೆ.ಆದ್ದರಿಂದ ನಾಳೆ ಬೆಳಿಗ್ಗೆ ಶಿರಸಿ ಭೇಟಿ ನಂತರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದು ತಿಳಿಸಿದರು.

About The Author