ಶಹಾಪುರ ನಗರ ವಾರ್ಡ್ 01,02,03,17 ರಲ್ಲಿ ಬಿಜೆಪಿ ಪಕ್ಷದಿಂದ ಭರ್ಜರಿ ಪ್ರಚಾರ ಪಕ್ಷ ಸೇರ್ಪಡೆ

ಶಹಾಪುರ : ಶಹಾಪುರ ನಗರದ ಗಂಗಾನಗರ ವಾರ್ಡ್ 17 ರಲ್ಲಿ ಕಾಂಗ್ರೆಸ್, ಜೆಡಿಎಸ್ ತೊರೆದು ಹಲವು ಕಾರ್ಯಕರ್ತರು  ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ  ಅಮೀನರಡ್ಡಿ ಯಾಳಗಿ ಅವರ ನೇತೃತ್ವದಲ್ಲಿ ಬಿ ಜೆ ಪಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ ಹಾಗೂ ನಗರ ಮಂಡಲ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಕೋನೆರ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜುಗೌಡ ಪಾಟೀಲ ಉಕ್ಕಿನಾಳ ಹಾಗೂ ಪಕ್ಷದ ಇತರ ಪ್ರಮುಖರು, ಮುಖಂಡರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು

 ನಗರದ ವಾರ್ಡ ನಂ:01,02 ಹಾಗೂ 03 ರಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಅಮೀನರಡ್ಡಿ ಯಾಳಗಿ ಹಾಗೂ ಬಿ ಜೆ ಪಿ ಹಿರಿಯ ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ ಅವರು ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದರು. ಈ ಪ್ರಚಾರ ಸಮಯದಲ್ಲಿ ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿ ಜೆ‌ ಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಬಿ ಜೆ ಪಿಯನ್ನು ಆರಿಸಿ ರಾಜ್ಯದಲ್ಲಿ ಮತ್ತೊಮ್ಮೆ ಡಬಲ್‌ಇಂಜಿನ್ ಸರ್ಕಾರ ರೂಪಿಸಬೇಕೆಂದು ಹಿರಿಯ ಮುಖಂಡರಾದ ಚಂದ್ರಶೇಖರ ಸುಬೇದಾರ ಅವರು ಅಭ್ಯರ್ಥಿಯ ಪರವಾಗಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ  ದೇವಿಂದ್ರಪ್ಪ ಕೋನೆರ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜುಗೌಡ ಪಾಟೀಲ ಉಕ್ಕಿನಾಳ, ಮತ್ತು, ರಾಜಶೇಖರ ಗೂಗಲ್ ಹಾಗೂ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಕರಣಿಗಿ , ದೇವೀಂದ್ರ ಸುರಪುರಕರ್ (ಸನ್ನಿ) ಹಾಗೂ ಶ್ರೀ ಮಹೇಶ ಆಲ್ದಾಳ ಮತ್ತು ವಾರ್ಡನ ಮುಖಂಡರು, ಹಿರಿಯರು ಹಾಗೂ ಸಾರ್ವಜನಿಕರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

 

About The Author