ಬಿಜೆಪಿ ಪಕ್ಷದಿಂದ ಜಾಪ್ಲಾ ತಾಂಡಾದಲ್ಲಿ ಮತಯಾಚನೆ

ಶಹಾಪುರ : ಶಹಾಪುರ ಮತಕ್ಷೇತ್ರದ ಕನ್ಯಕೊಳೂರು ಜಾಪ್ಲಾ ತಾಂಡಕ್ಕೆ  ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಅಮೀನರಡ್ಡಿ ಯಾಳಗಿ ಹಾಗೂ  ಬಿ ಜೆ ಪಿ ಹಿರಿಯ ಮುಖಂಡರಾದ ಡಾ||ಚಂದ್ರಶೇಖರ ಸುಬೇದಾರ ಚುನಾವಣಾ ಪ್ರಚಾರ ನಡೆಸಿದರು. ಪ್ರಚಾರ ಸಮಯದಲ್ಲಿ ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿ ಜೆ‌ ಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಬಿ ಜೆ ಪಿಯನ್ನು ಪ್ರಚಂಡ ಬಹುಮತದಿಂದ ಆರಿಸಿ ರಾಜ್ಯದಲ್ಲಿ ಮತ್ತೊಮ್ಮೆ ಡಬಲ್‌ಇಂಜಿನ್ ಸರ್ಕಾರ ರೂಪಿಸಬೇಕೆಂದು ಹಿರಿಯ ಮುಖಂಡರಾದ ಚಂದ್ರಶೇಖರ ಸುಬೇದಾರ ಅಭ್ಯರ್ಥಿಯ ಪರ ಮತಯಾಚಿಸಿದರು.
       ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜುಗೌಡ ಪಾಟೀಲ ಉಕ್ಕಿನಾಳ, ಮತ್ತು  ಹಿರಿಯ ಮುಖಂಡರಾದ  ಬಸವರಾಜಪ್ಪಗೌಡ ವಿಭೂತಿಹಳ್ಳಿ, ರಾಜಶೇಖರ ಗೂಗಲ್ ಮತ್ತು ಅಡಿವೆಪ್ಪ ಜಾಕಾ ಹಾಗೂ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ಶಂಕರ ಕರಣಿಗಿ ಉಮೇಶ ಮಹಾಮನಿ ಅಬ್ದುಲ್ ಹಾದಿಮನಿ ಕನ್ಯಕೊಳೂರು ಜಾಪ್ಲಾ ತಾಂಡದ ಮುಖಂಡರು, ಹಿರಿಯರು ಹಾಗೂ ಸಾರ್ವಜನಿಕರು ಮತ್ತು ಕಾರ್ಯಕರ್ತ  ಉಪಸ್ಥಿತರಿದ್ದರು.