ಬಿಜೆಪಿಯನ್ನು ತೊಲಗಿಸಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ : ಚೆನ್ನಾರೆಡ್ಡಿ ತುನ್ನೂರು

ವಡಗೇರಾ : ಬಿಜೆಪಿ ಸರ್ಕಾರವನ್ನು ತೊಲಗಿಸಿ ಈ ಸಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ ಎಂದು ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿಯಾದ ಚೆನ್ನಾರೆಡ್ಡಿ ತುನ್ನೂರು ಹೇಳಿದರು. ಇಂದು ಹಯ್ಯಳ ಬಿ ಗ್ರಾಮದಲ್ಲಿ ಪ್ರಚಾರ ಕಾರ್ಯ ನಿಮಿತ್ತ ಮಾತನಾಡಿ ಅವರು, ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷ ರಾಜ್ಯವನ್ನು ಲೂಟಿ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
     ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮರಿಗೌಡ ಹುಲ್ಕಲ್ ಮಾತನಾಡಿ, ಸಿದ್ದರಾಮಯ್ಯನವರ ಆಡಳಿತದ ಕಾಲದಲ್ಲಿ ರಾಜ್ಯ ಹಸಿವು ಮುಕ್ತ ರಾಜ್ಯವಾಗಿತ್ತು. ರೈತರ ಸಹಕಾರ ಬ್ಯಾಂಕಿನ ಪ್ರತಿ ರೈತರ 50,000 ಸಾಲ ಮನ್ನ ಮಾಡಿದ್ದರು. ಬಡವರಿಗೆ ಅನುಕೂಲವಾಗಲೆಂದು ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆದಿದ್ದರು. ಪ್ರತಿ ವರ್ಷ ಮೂರು ಲಕ್ಷದಂತೆ ಐದು ವರ್ಷದಲ್ಲಿ 15 ಲಕ್ಷ ಜನತಾ ಮನೆಗಳನ್ನು ನಿರ್ಮಾಣ ಮಾಡಿದ್ದರು.
      ಆದರೆ ಬಿಜೆಪಿ ಸರಕಾರ ಬಡವರಹೊಟ್ಟೆಗೆ ಕನ್ನ ಹಾಕಿದೆ. ರೈತರ ಮತ್ತು ಗ್ರಾಹಕರಿಗೆ ನಿಲುಕದ ರೀತಿಯಲ್ಲಿ ದಿನಬಳಕೆ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ ಶೋಷಿತ ವರ್ಗಕ್ಕೆ ಅನ್ಯಾಯ ಮಾಡಿದೆ ಎಂದು ಸರ್ಕಾರದ ವಿರುದ್ಧ ಕೆಂಡಕಾರಿದರು.
 ಡಾ. ಭೀಮಣ್ಣ ಮೇಟಿ ಮಾತನಾಡಿದರು.
     ಕಾಂಗ್ರೆಸ್ ಮುಖಂಡರಾದ ಡಾ. ಭೀಮಣ್ಣ ಮೇಟಿ, ಸಿದ್ದಲಿಂಗಪ್ಪ ಸಾಹು ಹತ್ತಿಗೂಡೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮರಿಯಪ್ಪ ಬಿಳಾರ, ರಾಘವೇಂದ್ರ ಮಾನಸ್ಗಲ್, ಶರಣಪ್ಪ ದೇಸಾಯಿ, ಮಲ್ಲಿಕಾರ್ಜುನ ರೆಡ್ಡಿ ಬಿರನೂರು ಸಾಹೇಬರೆಡ್ಡಿ ಅನಕಸೂಗೂರು, ಮಲ್ಲನಗೌಡ ಹಾಗೂ
ಗ್ರಾಮದ ಮುಖಂಡರಾದ ಕಾಂಗ್ರೆಸ್ ಪಕ್ಷದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮೌನೇಶ್ ಪೂಜಾರಿ ಶೇಖಣ್ಣ ಸಾಹು ಚಂದ್ರಶೇಖರ್ ಸಾಹು ಹೇಮಣ್ಣ ಬಾಗಲಿ,ಭಾಗಣ್ಣ ತಡಿಬಿಡಿ, ಕಾಮಣ್ಣ ಗ್ರಾಪಂ.ಸದಸ್ಯರು, ಮುಕೇಶ ಗ್ರಾಪಂ.ಸದಸ್ಯರು,
 ನಿಂಗಣ್ಣ ಪೂಜಾರಿ ಸೇರಿದಂತೆ ಗ್ರಾಮದ ಹಲವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *