ಹಯ್ಯಳ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ : ಕಳಪೆ ಜೆಜೆಎಂ ಕಾಮಗಾರಿ : ಅಧಿಕಾರಿಗಳಿಂದ ಭ್ರಷ್ಟಾಚಾರ | ಪ್ರತಿಭಟನೆಯ ಎಚ್ಚರಿಕೆ ನೀಡಿದ ಮೌನೇಶ್ ಪೂಜಾರಿ

ವಡಗೇರಾ : ಭಯಂಕರ ಬಿಸಿಲಿನಲ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ತಲೆದೋರಿದ್ದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜೆಜೆಎಂ ಕಾಮಗಾರಿ ಹಯ್ಯಳ ಬಿ ಗ್ರಾಮದಲ್ಲಿ ಹಳ್ಳ ಹಿಡಿದಿದೆ.ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದೆ. ಕುಡಿಯುವ ನೀರಿಗೋಸ್ಕರ ಜನತೆ ತತ್ತರಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಹಯ್ಯಳ ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ ಪೂಜಾರಿ ಬಲವಾಗಿ ಆರೋಪಿಸಿದ್ದಾರೆ.
ಜೆಜೆಎಂ ಕಾಮಗಾರಿಯು ಎರಡು ವರ್ಷವಾದರೂ ಗ್ರಾಮದಲ್ಲಿ ಪೂರ್ಣಗೊಂಡಿಲ್ಲ. ಸಹಾಯಕ ಅಭಿಯಂತರರಾದ ರಾಹುಲ್ ಕಾಂಬ್ಳೆ ಮತ್ತು ಕಿರಿಯ ಅಭಿಯಂತರರಾದ ಶಿವಪುತ್ರಪ್ಪ ಪದೇ ಪದೇ ಹೇಳಿದರು ಕ್ಯಾರೆ ಎನ್ನುತ್ತಿಲ್ಲ. ಗುತ್ತಿಗೆದಾರನಾದ ಆನಂದ ಹುಡೆ ಅಧಿಕಾರಗಳ ಗುಮ್ಮಕ್ಕಿನಿಂದ ನಿರ್ಲಕ್ಷವಹಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ನೀರಿನ ಹಾಹಾಕಾರ ಭುಗಿಲೆದ್ದಿದೆ. ಖಾಸಗಿಯವರಿಂದ ಕುಡಿಯುವ ನೀರನ್ನು ಇಪ್ಪತ್ತು ರೂಪಾಯಿಗೆ 20 ಲೀಟರ್ ತೆಗೆದುಕೊಂಡು ಕುಡಿಯಬೇಕಿದೆ. ಬಡವರು ಹೇಗೆ ತಂದು ಕುಡಿಯಲು ಸಾಧ್ಯ.ಜೆಜೆಎಂ ಕಾಮಗಾರಿ ಗ್ರಾಮದೊಳಗೆ ರಸ್ತೆಗಳನ್ನು ಅಗೆದು ಕಳಪೆ ಪೈಪುಗಳನ್ನು ಕಿತ್ತುಹಾಕಲಾಗಿದೆ. ಹೊಸ ಪೈಪ್ಗಳನ್ನು ತಂದರು ಹಾಕುತ್ತಿಲ್ಲ. ಸರಕಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು.
ಇದರಿಂದ ಜೆಜೆಎಂ ಕಾಮಗಾರಿಯಲ್ಲಿ ಗುತ್ತಿಗೆದಾರ ಮತ್ತು ಅಧಿಕಾರಿಗಳ ನಡುವೆ ಭ್ರಷ್ಟಾಚಾರ ನಡೆದಿದೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ.ಅದಿಕಾರಿಗಳು ಕ್ರಮವಹಿಸದಿದ್ದರೆ ಜಿಲ್ಲಾ ಪಂಚಾಯಿತಿಯ ಮುಂದೆ ಖಾಲಿ ಕೊಡಗಳ ಜೊತೆಗೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು

About The Author