ಮಹಾಶೈವ ಧರ್ಮಪೀಠದಲ್ಲಿ 41 ನೆಯ ‘ ಶಿವೋಪಶಮನ ಕಾರ್ಯ : ಕ್ಯಾನ್ಸರ್ ಪೀಡಿತ ಮಹಿಳೆಯಲ್ಲಿ ಚೇತರಿಕೆ

ಗಬ್ಬೂರು : ಮಹಾಶೈವ ಧರ್ಮಪೀಠದಲ್ಲಿ ಎಪ್ರಿಲ್ 09 ನೆಯ ದಿನವಾದ ರವಿವಾರದಂದು 41ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸವನ್ನರಸಿ ಬಂದಿದ್ದ ರಾಜ್ಯ ಹಾಗೂ ಹೊರರಾಜ್ಯಗಳ ನೂರಾರು ಸಂಖ್ಯೆಯಲ್ಲಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ಕ್ಯಾನ್ಸರ್ ಪೀಡಿತ ಮಹಿಳೆ

ಕಳೆದ ವಾರ ಶ್ರೀಕ್ಷೇತ್ರ ಕೈಲಾಸದ ಶಿವ ವಿಶ್ವೇಶ್ವರನ ಸನ್ನಿಧಿಗೆ ಬಂದಿದ್ದ ಶಕ್ತಿನಗರದ ಶ್ರೀಮತಿ ಅರುಣಾ ಎನ್ನುವ ಕ್ಯಾನ್ಸರ್ ಪೀಡಿತ ಮಹಿಳೆಯು ಚೇತರಿಸಿಕೊಂಡು,ಆರೋಗ್ಯದಿಂದ ಇದ್ದುದ್ದು ಇಂದು ಮಹಾಶೈವ ಧರ್ಮಪೀಠದ ಭಕ್ತರ ಆಶ್ಚರ್ಯದ ಕಾರಣವಾಗಿತ್ತು.ವೈದ್ಯರು ಕಿಮಿಯೋ ತೆರಪಿ ಮಾಡಲು ಸೂಚಿಸಿದ್ದರಿಂದ ಭಯ- ಆತಂಕಗಳಿಂದ ಅರುಣಾ ಅವರು ತಮ್ಮ ಪತಿಸಮೇತರಾಗಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದರು.ಅವರ ಮುಖದಲ್ಲಿ ಭಯ,ಆತಂಕ ಎದ್ದು ಕಾಣುತ್ತಿತ್ತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಭಯ- ಆತಂಕ ಪಡುವ ಕಾರಣವಿಲ್ಲ,ವೈದ್ಯನಾಥನಾಗಿರುವ ವಿಶ್ವೇಶ್ವರಶಿವನು ಮೃತ್ಯುಂಜಯನಿದ್ದಾನೆ.ಭವರೋಗವೈದ್ಯನಾಗಿರುವ ವಿಶ್ವೇಶ್ವರನು ಖಂಡಿತವಾಗಿಯೂ ನಿಮ್ಮನ್ನು ಗುಣಮುಖರನ್ನಾಗಿಸುತ್ತಾನೆ’ ಎಂದು ಲೋಬಾನ ಮಂತ್ರಿಸಿಕೊಟ್ಟು ಶಿವಾಭಯ ನೀಡಿದ್ದರು.ಉಲ್ಲಸಿತರಾಗಿದ್ದ ಅರುಣಾ ಅವರಿಗೆ ಇಂದು ಮೃತ್ಯುಂಜಯ ಮಂತ್ರದಿಂದ ಅಭಿಮಂತ್ರಿಸಲ್ಪಟ್ಟ ವಿಭೂತಿಯನ್ನು ನೀಡಿ,ಕೆಲವು ಸೂಚನೆಗಳನ್ನಿತ್ತು ಸಂಪೂರ್ಣವಾಗಿ ಗುಣಮುಖರಾಗಲು ಹರಸಿ,ಶಿವಾಭಯ ಕರುಣಿಸಿದರು.

ಪ್ರತಿವಾರವು ಅಸಾಧ್ಯರೋಗಪೀಡಿತರುಗಳು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ,ಗುಣಮುಖರಾಗುತ್ತಿರುವುದರಿಂದ ಮಹಾಶೈವ ಧರ್ಮಪೀಠವು ‘ ಧರೆಗಿಳಿದ ಕೈಲಾಸ’ ಎಂದು ಭಕ್ತರಿಂದ ಕರೆಯಿಸಿಕೊಳ್ಳುತ್ತ ಶಿವ ವಿಶ್ವೇಶ್ವರನು ‘ ಮಾತನಾಡುವ ಮಹಾದೇವ’ ಎಂದು ಪ್ರಸಿದ್ಧನಾಗಿದ್ದಾನೆ.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದಾಸೋಹ ಸಮಿತಿಯ ಗುರುಬಸವ ಹುರಕಡ್ಲಿ,ಶಿವಯ್ಯಸ್ವಾಮಿ ಮಠಪತಿ,ಗೋಪಾಲಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಶರಣಪ್ಪ ಬೂದಿನಾಳ,ಯಲ್ಲಪ್ಪ ಕರಿಗಾರ,ಹನುಮೇಶ,ಉದಯಕುಮಾರ ಸಣ್ಣಹುಲಿಗೆಪ್ಪ ಮಡಿವಾಳ ಹಾಗೂ ಪತ್ರಕರ್ತರುಗಳಾದ ಏಳುಬಾವೆಪ್ಪಗೌಡ,ಬಸವರಾಜ ಬ್ಯಾಗವಾಟ ಅವರುಗಳು ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಉಪಸ್ಥಿತರಿದ್ದರು.

About The Author