ಸರ್ವ ಜನಾಂಗದ ಧೀಮಂತ ನಾಯಕ ಶರಣು ತಳ್ಳಿಕೇರಿ

ಬಸವರಾಜ ಕರೇಗಾರ
basavarajkaregar@gmail.com
9060737896

 

ಶರಣು ತಳ್ಳಿಕೇರಿ

ಬಿಜೆಪಿ ಪಕ್ಷದಲ್ಲಿ ಎಲ್ಲ ನಾಯಕರ ಜೊತೆ ಹೊಂದಿಕೊಂಡು ಸದಾ ಜನರ ಒಳಿತನ್ನೇ ಬಯಸುವ ಸಹೃದಯಿ ರಾಜ್ಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರು ಶರಣು ತಳ್ಳಿಕೇರಿ ಅವರು ಸಮಾಜದ ಧೀಮಂತ ನಾಯಕರು. ಸದಾ ಅಭಿವೃದ್ಧಿಯನ್ನು ಬಯಸುವ ಜನನಾಯಕರು. ಹಾಲುಮತ ಸಮಾಜದಲ್ಲಿ ಸದಾ ಜನರ ಮನದಲ್ಲಿ ನೆಲಸಿದ ನಾಯಕ. ಯಾವುದೇ ಕೆಲಸ ಕಾರ್ಯಗಳಲ್ಲಿ ಜನರ ಹಿತವನ್ನು ಕಾಪಾಡುವ ಇವರು ಸಮಾಜದ ಜನತೆಯ ಕಷ್ಟ-ಸುಖದಲ್ಲಿ ಭಾಗಿಯಾಗಿ,ಸರ್ವರ ಏಳ್ಗೆಯ ಪರ ದುಡಿಯುವ ನಾಯಕರು ಶರಣು ತಳ್ಳಿಕೇರಿ.

 

ಶರಣು ಬಿ ತಳ್ಳಿಕೇರಿಯವರ ಅಭಿವೃದ್ಧಿ ಕಾರ್ಯಗಳು.

 

ಬೆಳಗಾವಿಯಲ್ಲಿ ಅನುಗ್ರಹ ಯೋಜನೆಯ ಬಾಕಿ 40 ಕೋಟಿ ಹಣ ಬಿಡುಗಡೆಗೆ ಹಾಗೂ ಯೋಜನೆ ಮುಂದುವರೆಯಲು ಅತಿ ಹೆಚ್ಚು ಶ್ರಮವಹಿಸಿ ಕುರಿಗಾಹಿಗಳ ಹಿತಕಾಪಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪರವರನ್ನು ಕುರಿಗಾಹಿ ಬಂಧುಗಳು ಭೇಟಿಯಾಗಿ ಸನ್ಮಾನಿಸಿ ಅಭಿನಂದಿಸಿದರು.

 

 

ಹಾವೇರಿ ಜಿಲ್ಲೆಯ ಹಿರೇಕೆರೂರುನಲ್ಲಿ ಸಂಚಾರಿ ಕುರಿಗಾರರು ಮತ್ತು ಗ್ರಾಮಸ್ಥರಿಂದ ನಡೆದ ಆದಿಶಕ್ತಿ ದುರ್ಗಾದೇವಿ ಜಾತ್ರೆಯಲ್ಲಿ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿ,ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ  ಸುಬ್ರಹ್ಮಣ್ಯ, ಹಾಲುಮತ ಮಹಾಸಭಾದ ರಾಜ್ಯ ಅಧ್ಯಕ್ಷರಾದ ರುದ್ರಣ್ಣ ಗುಳಗುಳಿ,ಕುಸ್ಕುರು ಜಯಪ್ಪ,ಷಣ್ಮುಕಪ್ಪ ಕಂಬಳಿ,ಡಾ ಪ್ರಶಾಂತ್, ರಾಮಚಂದ್ರ ಹೆಗಡೆ,ವಿಠ್ಠಲ್ ಬನ್ನಿ,ಮಲ್ಲಪ್ಪ,ಮಲ್ಲೇಶ್ ಪೂಜಾರ್ ,ಮಲ್ಲಿಕಾರ್ಜುನ್,ಮೃತ್ಯುಂಜಯ ಸೇರಿದಂತೆ ಅನೇಕರು ಉಪಸ್ಥಿತರು.

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ NLM ಯೋಜನೆ ಅಡಿಯಲ್ಲಿ ಬಂಡೂರು ತಳಿಯ ಟಗರುಗಳನ್ನು ನಿಗಮದ ಅಧ್ಯಕ್ಷರಾದ ಶರಣು  ಬಿ ತಳ್ಳಿಕೇರಿಯವರು ಅರ್ಹ ಫಲಾನುಭವಿಗಳಿಗೆ ವಿತರಿಸಿದರು.ನಾಗಮಂಗಲ ಶಾಸಕರಾದ ಸುರೇಶಗೌಡರು,ನಿಗಮದ ಅಧಿಕಾರಿಗಳಾದ ಡಾ ರಮೇಶ್,ಡಾ ವಿವೇಕಾನಂದ,ಡಾ ಕುಮಾರಸ್ವಾಮಿ, ನಿಶಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ಸಿಡಿಲಿಗೆ ಬಲಿಯಾದ ಕುರಿಗಾಯಿ ಸಹೋದರ ದೇವೇಂದ್ರಪ್ಪ ಮನೆಗೆ(ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗುಡ್ಡದ ಚನ್ನಾಪುರ) ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.ಶಿಗ್ಗಾವಿ ಮಂಡಲ ಬಿಜೆಪಿ ಅಧ್ಯಕ್ಷರಾದ ಶಿವಾನಂದ ಮ್ಯಾಗೇರಿ,ಪ್ರದಾನ ಕಾರ್ಯದರ್ಶಿಗಳಾದ ರೇಣುಕಗೌಡ,ಬಸವರಾಜ್ ನಾರಾಯಣಪುರ, ಒಬಿಸಿ ಮೋರ್ಚಾ ಅಧ್ಯಕ್ಷರಾದ ಷಣ್ಮುಖ ಕಾಳನೂರು, ಮಾಳಪ್ಪ ಗೆಡ್ಡೆ, ಗೌಡಪ್ಪ ಬನ್ನಿ ಡಾ ನಾಗಪ್ಪ ,ಡಾ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರಕುಣಿಯಲ್ಲಿ 18 ವರ್ಷದ ವಲಸೆ ಕುರಿಗಾಹಿ ದೇವೆಂದ್ರಪ್ಪ ಮಾಚಿನಳ್ಳಿ ಸಿಡಲಿನ ಹೊಡೆತಕ್ಕೆ ಬಲಿಯಾಗಿದ್ದು,ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸದರಿ ದುರ್ಘಟನೆ ಬಗ್ಗೆ ಮಾಹಿತಿ ನೀಡಿದ್ದು ,ಮಾಹಿತಿ ಮೇರೆಗೆ ಕುಂದಗೋಳ ತಹಶೀಲ್ದಾರ ಅಶೋಕ್ ಶಿಗ್ಗಾವಿ ಘಟನಾ ಸ್ಟಳಕ್ಕೆ ಭೇಟಿನೀಡಿದ್ದಾರೆ.ಮೃತ ದೇವೆಂದ್ರಪ್ಪ ರವರ ಆತ್ಮಕ್ಕೆ ಶಾಂತಿ ಸಿಗಲಿ,ಕುಟುಂಬಸ್ಥರಿಗೆ ನೋವು ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

 

ಇತ್ತೀಚೆಗಷ್ಟೇ ಕಾಮಾಂಧರಿಂದ  ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ  ಕುರಿಗಾಹಿ ಹೆಣ್ಣುಮಗಳು ಸಹೋದರಿ ಲಕ್ಷ್ಮೀ ಕುಟುಂಬಕ್ಕೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿ ಯವರು ರೂ.15 ಲಕ್ಷ. ಪರಿಹಾರ ಧನವನ್ನು ಲಕ್ಷ್ಮಿ ಕುಟುಂಬಕ್ಕೆ ನೀಡಬೇಕೆಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರೂ.15 ಲಕ್ಷಗಳ ಪರಿಹಾರ ಧನವನ್ನು ಮಂಜೂರು ಮಾಡಿರುತ್ತಾರೆ.

 

 

ಕೊಪ್ಪಳ ಜಿಲ್ಲೆಯ ಗಂಗಾವತಿ ಯಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿಗಾರರಿಗೆ ನಾರಿ ಸುವರ್ಣ ಟಗರುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಶಾಸಕರಾದ ಪರಣ್ಣ ಮನವಳ್ಳಿ ಉದ್ಘಾಟಿಸಿದರು.ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ನಗರಸಭೆ ಸದಸ್ಯರಾದ ಈರಮ್ಮ ಹೊಸ್ಕೆರಾ,ನವೀನ್ ಮಾಲಿಪಾಟಿಲ್, ಅಜಯ್ ಬಿಚ್ಚಾಲಿ,ಅಭಿ ಸಿರಿಗೇರಿ,ಹಿರಿಯರಾದ ಯಮನಪ್ಪ ವಿಟ್ಟಲಾಪುರ, ನೀಲಪ್ಪ ಸಣ್ಣಕ್ಕಿ,ನಾಗೇಶ್, ಜಿಲ್ಲಾ ಸಹಾಯಕ ನಿರ್ದೇಶಕರಾದ ಡಾ:ಯಮನಪ್ಪ,ಡಾ ಮಲ್ಲಯ್ಯ,ಭೀಮನಗೌಡ,ಜಯಪ್ರಕಾಶ್ ಜುಡಿ,ರುದ್ರೇಶ್ ,ವೆಂಕಟೇಶ್, ಶಿವು ಅರಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ಇತ್ತೀಚೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಕಾಮಾಂಧರಿಂದ ಹತ್ಯೆಯಾದ ಶ್ರೀಮತಿ ಲಕ್ಷ್ಮಿ ವಿಠ್ಠಲ ಕಳ್ಳಿಮನಿಯವರ  ಸ್ವಗ್ರಾಮ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾ ಲ್ಲೂಕಿನ ವನ್ನೂರು ಗ್ರಾಮದ ನಿವಾಸಕ್ಕೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು,ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪರವರ 1ಲಕ್ಷ ರೂಪಾಯಿ ಚೆಕ್ ಹಾಗೂ ಕರ್ನಾಟಕ  ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳ ವರ್ಗದಿಂದ 65ಸಾವಿರ ರೂಪಾಯಿ ಚೆಕ್ ಹಾಗೂ ಅಧ್ಯಕ್ಷರು ವೈಯಕ್ತಿಕವಾಗಿ   50 ಸಾವಿರ ರೂಪಾಯಿ ಚೆಕ್ ನೀಡಿದರು.ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ್, ನಿಗಮದ ಉಪನಿರ್ದೇಶಕರಾದ ಡಾ:ಸುಧಾ ದೇವರಡ್ಡಿ , ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಬಾಳಿಕಾಯಿ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಈರಣ್ಣ ಅಂಗಡಿ ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದ ರಾಜಕುಮಾರ ಸಗಾಯಿ  ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಬಸವರಾಜ್ ನೇಸರಾಗಿ ಲಕ್ಷ್ಮಣ ತಪಸೆ, ಮಹಾಂತೇಶ್  ವಕ್ಕುಂದ, ಮಹಾಂತೇಶ್ ಚಿನ್ನಪ್ಪಗೌಡರ್, ಮಲ್ಲಿಕಾರ್ಜುನ ಕುಲಕರ್ಣಿ, ಮಾರುತಿ ಮದ್ರಾಸಿ, ವಿಠ್ಠಲ್ ಮಳಗಲಿ, ಶಂಕರ ಹೆಗಡೆ, ಕೆಂಪಣ್ಣ,ಗಿರೀಶ್ ಮುನ್ಯಾಳ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು ಮೈಸೂರನಲ್ಲಿ ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಹೊರಗುತ್ತಿಗೆ ನೌಕರ(ಚಾಲಕ)ಪಾಪಣ್ಣವರ ಮನೆಗೆ ಭೇಟಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ,10ಸಾವಿರ ಧನಸಹಾಯ ಮಾಡಿ “ಹೊರಗುತ್ತಿಗೆ ಆಧಾರದ ಕೆಲಸದ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

 

ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಸದಾ ಹೋರಾಟದ ಮನೋಬಾವನೆ ಬೆಳೆಸಿಕೊಂಡವರು. ಯಾವುದೇ ಕೆಲಸ ಕಾರ್ಯಗಳಲ್ಲಿ ಹಿಡಿದ ಹಟ ಬಿಡದವರು.ನಿಗಮದ ಅಧ್ಯಕ್ಷರಾಗಿ ಕುರಿಗಾರರ ಸಮಸ್ಯೆಗಳನ್ನು ಆಲಿಸುತ್ತಾ, ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಸಮಸ್ಯೆಗಳನ್ನು ಆಲಿಸಿದ ತಳ್ಳಿಕೇರಿಯವರು, ಅದರಂತೆಯೇ ಕಳೆದ ಸಾಲಿನ ಆರ್ಥಿಕ ಬಜೆಟ್ ನಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡು ಕುರಿಗಾರರ ಹಲವು ಸಮಸ್ಯೆಗಳನ್ನು ಪೂರೈಸಿದವರು.

* ಕುರಿಗಾರರಿಗೆ ವಸತಿ ಸಮಸ್ಯೆ.
* ಸತ್ತ ಕುರಿಗಳಿಗೆ 2500 ರಿಂದ 3500 ರೂ. ಪರಿಹಾರಧನ ಏರಿಕೆ.
* ವಲಸೆ ಕುರಿಗಾರರಿಗೆ ಮನೆ ನಿರ್ಮಿಸಲು ಐದು ಲಕ್ಷ ಸಹಾಯಧನ.
* ಸತ್ತ ಕುರಿಗಾರರಿಗೆ ಪರಿಹಾರಧನವನ್ನು ಪುನ: ಪ್ರಾರಂಭಿಸಿದರು.
* ಹಲವಾರು ಕಡೆ ಕುರಿಗಾರರು ಮತ್ತು ವಲಸೆ ಕುರಿಗಾರರು ಕಾರಣಾಂತರಗಳಿಂದ ಮರಣ ಹೊಂದಿದವರಿಗೆ ರಿಂದ 15 ಲಕ್ಷ ರೂಪಾಯಿಗಳ ಪರಿಹಾರವನ್ನು ಸರಕಾರದ ಕಡೆಯಿಂದ ಕೊಡಿಸಿದ್ದಾರೆ.ಇದು ಸಣ್ಣ ಸಾಧನೆಯೇನಲ್ಲ.

ಹಲವಾರು ಕುರಿಗಾರರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಜೊತೆಗೆ ಇತರ ಸಮುದಾಯದವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರು ಶರಣು ತಳ್ಳಿಕೇರಿ. ಹಾಲುಮತ ಸಮುದಾಯದವರು ಸಮಸ್ಯೆಗಳು ಮತ್ತು ವಿಶೇಷವಾಗಿ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜದ ಸೇರ್ಪಡೆ ಬಗ್ಗೆ ಗಮನಹರಿಸಬೇಕಿದೆ.

ಶರಣು ತಳ್ಳಿಕೇರಿ ರಾಜ್ಯ ವಿಧಾನಸಭೆಗೆ ಪ್ರವೇಶಿಸಬೇಕೆಂಬುದು ಅವರ ಅಭಿಮಾನಿಗಳ ಆಶಯವಾಗಿದೆ. ಜನ ಸಮುದಾಯದ ನಾಯಕರು ವಿಧಾನಸಭೆಯ ಸದಸ್ಯರಾದರೆ ಸಮುದಾಯದ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಕುರುಬ ಸಮುದಾಯದ ನಾಯಕರು ಇದಕ್ಕಾಗಿ ಪ್ರಯತ್ನಿಸಬೇಕು.ಯಾವ ಪಕ್ಷವು ಮುಖ್ಯವಲ್ಲ. ಸಮಾಜಕ್ಕೆ ಹಗಲಿರುಳು ದುಡಿಯುವ ನಾಯಕರು ಜನಪ್ರತಿನಿಧಿಗಳಾಗಬೇಕು ಎನ್ನುವುದು ಸಮಾಜದ ಆಶಯವಾಗಿದೆ.ಮುಂದಿನ ದಿನಗಳಲ್ಲಿ ಶರಣು ತಳ್ಳಿಕೇರಿಯವರು ವಿಧಾನಸಭೆ ಅಥವಾ ವಿಧಾನಪರಿಷತ ಸದಸ್ಯರಾಗಿ ಎಲ್ಲಾ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸುವ ಜನರ ನಾಯಕರಾಗಬೇಕು ಎಂದು ಕುರುಬ ಸಮಾಜದ ಮತ್ತು ಅವರ ಅಭಿಮಾನಿಗಳ ಆಶಯವಾಗಿದೆ.

About The Author