ಮುತ್ಸದ್ದಿ ನಾಯಕ | ಭವಿಷ್ಯದ ನಾಯಕರಾಗುವರೆ ನಿಖಿಲ್ ಶಂಕರ್

ಯಾದಗಿರಿ : ನಿವೃತ್ತ ಜಿಲ್ಲಾಧಿಕಾರಿಯ ಮಗನಾದ ನಿಖಿಲ್ ಶಂಕರ್ ರಾಜ್ಯಾದ್ಯಂತ ತನ್ನದೇ ಆದ ಕಾರ್ಯಕರ್ತರು ಮತ್ತು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿರುವ ಯುವ ನಾಯಕ. ಜಿಲ್ಲಾಧಿಕಾರಿಗಳ ಮಕ್ಕಳು ಜಿಲ್ಲಾಧಿಕಾರಿಗಳಾಗಬೇಕು ಎನ್ನುವ ಕನಸು ಕಾಣುತ್ತಾರೆ.

ಅದೇ ರೀತಿಯ ವ್ಯಾಸಂಗವನ್ನು ಮಕ್ಕಳಿಗೆ ಕೊಡಿಸುತ್ತಾರೆ. ನಿಖಿಲ್ ಶಂಕರ್ ಮನಸ್ಸು ಮಾಡಿದ್ದರೆ ತಾನು ಕೂಡ ದೇಶದ ಉನ್ನತ ದರ್ಜೆಯ ಸರಕಾರಿ ನೌಕರರಾಗಬಹುದು. ಆದರೆ ಅದೆಲ್ಲವನ್ನು ಬಿಟ್ಟು ಜನಸೇವೆಯೇ ನನಗೆ ನೌಕರಿ ಇದ್ದ ಹಾಗೆ.ನನ್ನ ತಂದೆ ಒಂದು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಜನಸೇವೆ ಗೈದರು. ನಾನು ರಾಜ್ಯದ ಜನಸೇವಕನಾಗಬೇಕು ಎನ್ನುವ ಭಾವನೆಯಿಂದ ರಾಜಕೀಯಕ್ಕೆ ಬಂದಿದ್ದೇನೆ.

ಯಾದಗಿರಿ ಕ್ಷೇತ್ರವನ್ನು ಹುಡುಕಿಕೊಂಡು ಬಂದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿದ್ದೆ. ಆದರೆ ಸಿಗಲಿಲ್ಲ. ನಾನು ವಿಚಲಿತನಾಗಲಾರೆ. ಖಂಡಿತ ಮುಂದೊಂದು ದಿನ ಈ ಕ್ಷೇತ್ರದ ಜನರು ನನ್ನ ಕೈಹಿಡಿಯುತ್ತಾರೆ ಎನ್ನುವ ಭರವಸೆ ನನಗಿದೆ ಎನ್ನುತ್ತಾರೆ ನಿಖಿಲ್ ಶಂಕರ್. ಆರ್ಥಿಕವಾಗಿ ಸಬಲನಾಗಿದ್ದರು, ತನ್ಮಯತೆಯಿಂದ ಜನರ ಮಧ್ಯದಲ್ಲಿ ಬೆರೆಯುವ ಯುವ ನಾಯಕ.ಒಂದೇ ವರ್ಷದಲ್ಲಿ ಯಾದಗಿರಿ ಜಿಲ್ಲೆಯ ಜನರ ಮನಸ್ಸನ್ನು ಗೆದ್ದಿದ್ದಾರೆ.

ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಲೂರು ಮಲ್ಲಪ್ಪನವರ ಹೆಸರೇಳಿಕೊಂಡು ರಾಜಕೀಯ ಮಾಡಿದ ಹಲವಾರು ರಾಜಕಾರಣಿಗಳು ಮಲ್ಲಪ್ಪಾಜಿಯವರ ಸಮಾಧಿಯನ್ನು ಸರಿ ಮಾಡಲಿಲ್ಲ. ಆದರೆ ನಿಖಿಲ್ ಶಂಕರ್ 25 ಲಕ್ಷಕ್ಕೂ ಹೆಚ್ಚು ಹಣವನ್ನು ಸ್ವಂತ ಖರ್ಚುನಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡಿದ್ದಾರೆ. ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅರಿಯಲು ಗೊತ್ತಾಗದಂತೆ ತನ್ನದೇ ಆದ ತಂಡವನ್ನು ರಚಿಸಿ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಸದ್ದಿಲ್ಲದೆ ಕೆಲಸ ಮಾಡುತ್ತಿರುವ ನಾಯಕ ನಿಖಿಲ್ ಶಂಕರ್. ಸಣ್ಣ ಕೆಲಸ ಮಾಡಿ ದೊಡ್ಡವರಂತೆ ಬಿಂಬಿಸುವ ಈ ಕಾಲದಲ್ಲಿ ನಾ ಮಾಡಿದ ಯಾವುದೇ ಕೆಲಸಕ್ಕೂ ಪ್ರಚಾರ ಬೇಡ ಎನ್ನುತ್ತಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಂದ ದ ಬೆಸ್ಟ್ ಲೀಡರ್ ಆಫ್ ಯು ಎಂದು ಗುರುತಿಸಿಕೊಂಡ ಧಣಿವರಿಯದ ನಾಯಕನಾಗಿದ್ದಾರೆ.ನಿಖಿಲ್ ಶಂಕರ್ ನನ್ನದೇನಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವದು ಎಂದು ಹೇಳುತ್ತಾರ. ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ನಿಖಿಲ್ ಶಂಕರ್ ಜನಪ್ರತಿನಿಧಿಯಾಗಿ ಭವಿಷ್ಯದ ನಾಯಕನಾಗಿ ಬೆಳೆಯಲಿ ಎನ್ನುವುದೆ ಜನಾಭಿಪ್ರಾಯವಾಗಿದೆ.

About The Author