ಕೈ ತಪ್ಪಿದ ಟಿಕೆಟ್ : ಬೆಂಬಲಿಗರ ಸಭೆ : ಇನ್ನೆರಡು ದಿನಗಳಲ್ಲಿ ನಿರ್ಧಾರ ಪ್ರಕಟ ಡಾ. ಮಾಲಕರೆಡ್ಡಿ

ವಡಗೇರಾ : ನಾನು ರಾಜಕೀಯ ನಿವೃತ್ತಿ ಬಯಸಿದ್ದೆ. ಚುನಾವಣೆಗೆ ಹೋಗುವುದೇ ಬೇಡ ಎಂದಿದ್ದೆ. ಆದರೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ ನನ್ನನ್ನು ಕರೆಯಿಸಿ ಒತ್ತಾಯದ ಮೇರೆಗೆ ನನಗೆ ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನಿಮಗೆ ನೀಡಲಾಗುವುದು ಎಂದು ಹೇಳಿದರು.ಹಾಗಾಗಿ ನನ್ನ ಪುತ್ರಿ ಡಾ. ಅನುರಾಘರಿಂದ ಟಿಕೆಟ್ ಗಾಗಿ ಅರ್ಜಿ ಹಾಕಿದ್ದೆ. ಆದರೆ ಉದ್ದೇಶ ಪೂರ್ವಕವಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಮಾಜಿ ಸಚಿವರಾದ ಡಾ. ಎ.ಬಿ. ಮಾಲಕರೆಡ್ಡಿ ಹೇಳಿದರು.

ಯಾದಗಿರಿ ನಗರದ ತಮ್ಮ ನಿವಾಸದಲ್ಲಿ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರ್ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ನನಗೆ ಏಕೆ ಕೊಡಲಿಲ್ಲ. ನನ್ನ ಕಾರ್ಯಕರ್ತರ ನಿರ್ಧಾರವೇ ಅಂತಿಮ.ನನ್ನ ಕಾರ್ಯಕರ್ತರಿಂದ ಚುನಾವಣೆಗೆ ನಿಲ್ಲುವಂತೆ ಒತ್ತಾಯವಿದೆ. ಇನ್ನೆರಡು ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಬೇಕೊ ಬೇಡವೋ ಎನ್ನುವ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.

ಮಾಲಕರೆಡ್ಡಿಯವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ.ಇದನ್ನು ಜೆಡಿಎಸ್ ಪಕ್ಷ ಬಳಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಯಾದಗಿರಿಯ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾದ ಹಣಮೆಗೌಡ ಬೀರನಕಲ್ ಗೆ ಜೆಡಿಎಸ್ ಟಿಕೆಟ್ ತಪ್ಪಬಹುದು ಎಂದು ಹೇಳಲಾಗಿದೆ.

ಜಿಲ್ಲೆಯಲ್ಲಿ ದಲಿತರು ರಾಜಕೀಯವಾಗಿ ಬೆಳೆದಿದ್ದೆ ಎಬಿ ಮಾಲ್ಕರೆಡ್ಡಿಯವರಿಂದ. ಯಾದಗಿರಿ ಕ್ಷೇತ್ರದಲ್ಲಿ ದಲಿತರಿಗೆ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಸೇರಿದಂತೆ ಹಲವು ಸ್ಥಾನಮಾನಗಳನ್ನು ಕೊಡಿಸಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಟಿಕೆಟ್ ಕೈತಪ್ಪಿಸಲು ಆಡಿಯೋವನ್ನು ಬಳಸಿಕೊಂಡು ದಲಿತರ ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ನಾವು ಯಾವುದೇ ಕಾರಣಕ್ಕೂ ನಿಮ್ಮ ಜೊತೆಗಿರುತ್ತೇವೆ. ರಾಜಕೀಯ ನೆಲೆ ಕಂಡುಕೊಂಡಿದ್ದೆ ನಿಮ್ಮಿಂದ ಎಂದು ಹಲವಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ದಲಿತ ನಾಯಕರು ಮಾಲ್ಕರೆಡ್ಡಿಯವರಿಗೆ ಬೆಂಬಲ ಸೂಚಿಸಿದರು.

About The Author