ಮಹಾಶೈವ ಧರ್ಮಪೀಠಕ್ಕೆ ದೇವದುರ್ಗ ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ನಾಯಕ್ ಭೇಟಿ

ಗಬ್ಬೂರು : ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿ ಶ್ರೀಮತಿ ಕರಿಯಮ್ಮ ಜಿ ನಾಯಕ್ ಅವರು ಇಂದು ಗಬ್ಬೂರಿನ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ,ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ,ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾ ಹಾಗೂ ಮಹಾಕಾಳಿ ದೇವಿಯರ ದರ್ಶನ ಪಡೆದು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಂದ ಶಿವಾಭಯ ಅನುಗ್ರಹ ಪಡೆದರು.ಪೀಠಾಧ್ಯಕ್ಷರು ಈ ಸಂದರ್ಭದಲ್ಲಿ ಕರಿಯಮ್ಮ ನಾಯಕ್ ಅವರನ್ನು ಶಿವಾನುಗ್ರಹಪೂರ್ವಕವಾಗಿ ಶಾಲುಹೊದಿಸಿ,ಸನ್ಮಾನಿಸಿದರು.

ಜೆ ಡಿ ಎಸ್ ಮುಖಂಡ ಖಾಜಯ್ಯಗೌಡ ಅಬ್ಕಾರಿ,ಚೆನ್ನಪ್ಪಗೌಡ ಮಾಲೀಪಾಟೀಲ್,ಶಿವಯ್ಯಸ್ವಾಮಿ ಮಠಪತಿ, ವರದರಾಜ ಅಬ್ಕಾರಿ,ಗಂಗಣ್ಣ ಬುದ್ದಿನ್ನಿ, ಗುರುಬಸವ ಹುರಕಡ್ಲಿ,ವೀರೇಶ ಯಾದವ್,ಬಿಬ್ಬಣ್ಣಮರಾಠ,ಗೋಪಾಲ ಮಸೀದಪುರ , ಶರಣಪ್ಪ ಬೂದಿನಾಳ, ಬಾಬುಗೌಡ ಯಾದವ್,ಉದಯಕುಮಸರ ಸಣ್ಣ ಹುಲಿಗೆಪ್ಪ,ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *