ಕುರುಬರಿಗೆ ಕೈ ಕೊಟ್ಟ ಕಾಂಗ್ರೆಸ್ | ಬಂಡಾಯ ಹೇಳುವ ಭೀತಿ | ಎರಡು ಕಡೆ ಒಂದೇ ಸಮುದಾಯದವರಿಗೆ ಟಿಕೆಟ್ ಆರೋಪ

ಬಸವರಾಜ ಕರೆಗಾರ 

ಯಾದಗಿರಿ : ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಿದವರಿಗೆ ಕಾಂಗ್ರೆಸ್ ನಲ್ಲಿ ಬೆಲೆ ಇಲ್ಲ. ಯಾವತ್ತೂ ಅನ್ಯಾಯ ಮಾಡುವುದಿಲ್ಲ ಎಂದು ಹೇಳಿಕೊಂಡು ಬಂದ ಕಾಂಗ್ರೆಸ್ ಪಕ್ಷ ಕೊನೆಗೂ ಕುರುಬ ಸಮಾಜದ ಅಭ್ಯರ್ಥಿಗಳಿಗೆ ಕೈ ಕೊಟ್ಟಿದೆ.

ಮರಿಗೌಡ ಹುಲ್ಕಲ್

ಉದ್ದೇಶಪೂರ್ವಕವಾಗಿ ಚುನಾವಣೆ ಆಯ್ಕೆ ಸಮಿತಿಯನ್ನು ರಚಿಸಿ, ತಮಗೆ ಬೇಕಿದ್ದವರನ್ನು ಆಯ್ಕೆ ಮಾಡಿ ತಮ್ಮ ತಮ್ಮ ಆಪ್ತರಿಗೆ ಟಿಕೆಟ್ ನೀಡಲಾಗಿದೆ ಎಂದು ಟಿಕೆಟ್ ವಂಚಿತರು ಬಲವಾಗಿ ಆರೋಪಿಸಿದ್ದಾರೆ.ಮರಿಗೌಡ ಹುಲ್ಕಲ್, ಶರಣಪ್ಪ ಸಲಾದಪುರ, ನಿಖಿಲ್ ಶಂಕರ್, ಭೀಮಣ್ಣ ಮೇಟಿ,ವಿನೋದ ಪಾಟೀಲ ಈ ಐದು ಜನ ಹಾಲುಮತ ಕುರುಬರಲ್ಲಿ ಸಾಮಾಜಿಕ ನ್ಯಾಯದಡಿ ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕಿತ್ತು ಎಂದುಕೊಂಡ ಆಕಾಂಕ್ಷಿಗಳಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ.

ನಿಖಿಲ್ ವಿ ಶಂಕರ್

ಸಿದ್ದರಾಮಯ್ಯ ಇರುವಲ್ಲಿ ಕುರುಬರಿಗೆ ಟಿಕೆಟ್ ಸಿಗುತ್ತದೆ ಎನ್ನುವ ನಂಬಿಕೆ ಹುಸಿಯಾಗಿದೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡದೇ ಆಪ್ತರಿಗೆ ಟಿಕೆಟ್ ನೀಡಲಾಗಿದೆ.

ಶರಣಪ್ಪ ಸಲಾದಪುರ

ಯಾದಗಿರಿ ಶಹಪುರ ಮತ್ತು ಯಾದಗಿರಿ ಕ್ಷೇತ್ರಗಳಲ್ಲಿ ಒಂದೇ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ ಎನ್ನುವ ಬಲವಾದ ಆರೋಪ ಕ್ಷೇತ್ರದಾದ್ಯಂತ ಕೇಳಿ ಬರುತ್ತದೆ. ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ಸಾಮಾಜಿಕ ನ್ಯಾಯವಿಲ್ಲ. ಎಲ್ಲಿಯೂ ಸಾಮಾಜಿಕ ನ್ಯಾಯ ಎಂದು ಟಿಕೆಟ್ ವಂಚಿತರು ಆರೋಪಿಸುತ್ತಿದ್ದಾರೆ.

ಡಾ.ಭೀಮಣ್ಣ ಮೇಟಿ

ಶರಣಬಸಪ್ಪ ಕಾಮರೆಡ್ಡಿ, ಭೀಮಣ್ಣ ಮೇಟಿ, ಮಾಲ್ಕರೆಡ್ಡಿ ಬಹಿರಂಗವಾಗಿ ಬಂಡಾಯವೆದ್ದಿದ್ದು ಕಾರ್ಯಕರ್ತರ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಭಂಡಾಯದ ಸುಳಿ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ನೋಡಬೇಕಿದೆ.

About The Author