ಮತದಾನ ಪ್ರತಿಯೊಬ್ಬರ ಹಕ್ಕು : ಯಾವುದೇ ಆಮಿಷಕ್ಕೆ ಪ್ರಭಾವಕ್ಕೆ ಒಳಗಾಗದೆ ಮತ‌ಚಲಾಯಿಸಿ ಸಿಇಓ ಗರಿಮಾ ಪನ್ವಾರ್ ಕರೆ

ಶಹಾಪೂರ : ಮತದಾನ ಪ್ರತಿಯೊಬ್ಬರ ಹಕ್ಕು. ಯಾವುದೇ ಆಮಿಷಕ್ಕೆ ಪ್ರಭಾವಕ್ಕೆ ಒಳಗಾಗದೆ ಮತ‌ಚಲಾಯಿಸಿ ಎಂದು ಗಿರಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗರಿಮಾ ಪನ್ವಾರ್ ಮತದಾರರಿಗೆ ಕರೆ ನೀಡಿದರು.

ಗುರುವಾರ ಸಂಜೆ ತಾಲೂಕಿನ ಸಗರ ಗ್ರಾಮ ಪಂಚಾಯತಿಯಲ್ಲಿ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ರ ಪ್ರಯುಕ್ತ ಆಯೋಜಿಸಿರುವ ಮತದಾರರ ಮತದಾನ ಜಾಗೃತಿ ಸಭೆಯನ್ನು ಜಿಲ್ಲಾ ಪಂಚಾಯತ ಯಾದಗಿರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಪ್ರತಿ ಮತಗಟ್ಟೆಯಲ್ಲಿಯೂ ಶೇ 100% ಮತ ಚಲಾಯಿಸಿ ಮತದಾನೋತ್ಸವದ ಹಬ್ಬವನ್ನಾಗಿ ಆಚರಣೆ ಮಾಡಬೇಕು. ಸ್ವತಂತ್ರವಾಗಿ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಹೇಳಿದರು. ಚುನಾವಣೆ ಆಯೋಗವು ಅಶಕ್ತ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆ ಕಲ್ಪಿಸಿದೆ. ಈ ಎಲ್ಲಾ ಮತದಾನದ ಜಾಗೃತಿ ಮಾಹಿತಿಯನ್ನು ಪ್ರತಿ ಮನೆ-ಮನೆಗೂ ತಲುಪಿಸಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದರು.

ಸಗರ ಗ್ರಾಮದ ಚೌಡಿಕಟ್ಟೆಯಿಂದ ಗ್ರಾಮ ಪಂಚಾಯತಿಯವರೆಗೆ ಮೇಣದ ಬತ್ತಿಯ ಮೂಲಕ ಮೆರವಣಿಗೆಯಲ್ಲಿ ಮತದಾನದ ಘೋಷವಾಕ್ಯಗಳನ್ನು ಮೊಳಗಿಸಲಾಯಿತು.

ಈ ಸಂದರ್ಭದಲ್ಲಿ ಸೋಮಶೇಖರ ಬಿರೆದಾರ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಶಹಾಪೂರ, ಗ್ರಾ.ಪಂ.ಆಡಳಿತ ಮಂಡಳಿಯವರು, ಭೀಮನಗೌಡ ಬಿರೆದಾರ ಸಹಾಯಕ ನಿರ್ದೇಶಕರು ತಾ.ಪಂ, ಸೆಕ್ಟರ್ ಅಧಿಕಾರಿಗಳು ಸಗರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸ್ವ.ಬಾ.ಮಿ ಸಮಾಲೋಚಕರು, ನರೇಗಾ ಸಿಬ್ಬಂದಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಗ್ರಾ.ಪಂ.ಸಗರ, ಮೇಲ್ವಿಚಾರಕಿಯರು, ಎನ್ ಆರ್ ಎಲ್ ಎಮ್ ಸಿಬ್ಬಂದಿ, ಗ್ರಾಮಸ್ಥರು, ಮಹಿಳೆಯರು ಆಶಾ- ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

About The Author