ಅಧ್ಯಕ್ಷರಾಗಿ ಎಂ ವಿಜಯ್ ಕುಮಾರ, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ನೇಮಕ

ಬಳ್ಳಾರಿ : ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಬಳ್ಳಾರಿ ತಾಲೂಕು ಅಧ್ಯಕ್ಷರಾಗಿ ವಿಜಯ ಕುಮಾರ,  ಪ್ರಧಾನ ಕಾರ್ಯದರ್ಶಿಗಳಾಗಿ ಕೆ ಜಿ ಮಂಜುನಾಥ ರವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ರವರು ಆದೇಶಿಸಿದ್ದಾ.ರೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘದ ತತ್ವ ನಿಷ್ಠೆಗೆ ಬದ್ಧರಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಘದ ಸಂಘಟನೆಯ ಕಾರ್ಯಕೈಗೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಡಿ ಗಂಗಾಧರ, ಜಿಲ್ಲಾಧ್ಯಕ್ಷರಾದ ಬಂಡಿಹಟ್ಟಿ ರಾಮಲಿಂಗ, ಕಲ್ಯಾಣ ಕರ್ನಾಟಕದ ಉಪಾಧ್ಯಕ್ಷರಾದ ಕೆಎಂ ನಾಗರಾಜ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ ಕುಮಾರ,ಹಲಗುಂದಿ ಗ್ರಾಮದ ಕೆಜಿ.ಉಮಾಪತಿ,ಗಾದಿಲಿಂಗ ಪೂಜಾರಿ,ಕೆಎಮ್.ಜಡೇಶ,ಕೆಎಸ್ ಅರ್ಜುನ್,ರಮೇಶ ಪೂಜಾರಿ,ಕೆ ಶಶೀಧರ,ಕೆಜಿ ರಾಜೇಶ,ಡಿಜೆ ವಿರೇಶ, ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು