ಕೊನೆ ಕ್ಷಣದಲ್ಲಿ ಮಾಲಕರೆಡ್ಡಿ ಪುತ್ರಿಗೆ ತಪ್ಪಿದ ಕೈ ಟಿಕೆಟ್, ಡಾ.ಮಲ್ಲಿಕಾರ್ಜುನ ಖರ್ಗೆ ಆಪ್ತನಿಗೆ ಒಲಿದ ಕಾಂಗ್ರೆಸ್ ಟಿಕೆಟ್

ಬಸವರಾಜ ಕರೆಗಾರ

ಯಾದಗಿರಿ : ಈ ಮೊದಲೇ ಕಾಂಗ್ರೆಸ್ ನಾಯಕರೆಲ್ಲರೂ ಕೂಡಿ ವ್ಯಕ್ತಿ ಯಾರಾದರೇನು, ಗೆಲುವು ಒಂದೇ ಮಾರ್ಗ. ಗೆಲ್ಲುವ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂದು ಹೇಳಿಕೊಂಡು ಬಂದಿದ್ದರು. ರಾಷ್ಟ್ರದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪ್ರಬಲವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಇಂದು ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಪ್ರಕಟಿಸಿದ್ದು, ಕೊನೇ ಕ್ಷಣದಲ್ಲಿ ಮಾಜಿ ಸಚಿವರಾದ ಡಾ. ಮಾಲ್ಕರೆಡ್ಡಿ
ಯವರ ಪುತ್ರಿ ಡಾ. ಅನುರಾಧ ಮಾಲ್ಕರೆಡ್ಡಿಗೆ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದ್ದು, ಮಲ್ಲಿಕಾರ್ಜುನ ಖರ್ಗೆಯವರ ಆಪ್ತರಾದ ಚೆನ್ನಾ ರೆಡ್ಡಿ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿದೆ.
****
ಕಲ್ಯಾಣ ಕರ್ನಾಟಕದಲ್ಲಿ ಕಲಬುರ್ಗಿ ಮತ್ತು ಯಾದಗಿರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಖರ್ಗೆಯವರ ಆಪ್ತರಿಗೆ ಟಿಕೆಟ್ ನೀಡಲಾಗಿದೆ.
****
ಕೆಲವು ದಿನಗಳ ಹಿಂದೆ ಡಾ. ಅನುರಾಧ ಮಾಲೀಕ ರೆಡ್ಡಿ ಅವರು ಹೆಸರು ಪ್ರಬಲವಾಗಿ ಕೇಳಿ ಬರುತ್ತಿತ್ತು. ಕೊನೆಯ ಕ್ಷಣದಲ್ಲಿ ಮಿಸ್ ಆಗಿದೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾದಗಿರಿ ಕ್ಷೇತ್ರದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆಯೋ ನೋಡಬೇಕಿದೆ.ಕಾಂಗ್ರೆಸ್ ಪಕ್ಷ ಬಿಟ್ಟಿದ್ದ ಬಾಬುರಾವ್ ಚಿಂಚನಸೂರ್ ಸೇರಿದಂತೆ ರಾಜ್ಯದ ಹಲವು ಪಕ್ಷಗಳಿಂದ ಬಂದ ನಾಯಕರಿಗೆ ಕಾಂಗ್ರೆಸ್ ಟಿಕೆಟ್  ಕೊಟ್ಟಿದೆ. ಗೆಲ್ಲುವ ಅಭ್ಯರ್ಥಿ ಎಂದು ಹೇಳಿಕೊಂಡು ಬಂದ ನಾಯಕರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಸಕ್ಸಸ್ ಆಗಿದ್ದಾರೆ. ಇದರಿಂದ ಯಾದಗಿರಿ ಕ್ಷೇತ್ರದಲ್ಲಿ ಈಗಾಗಲೇ ಕುರುಬರಿಗೆ ಟಿಕೆಟ್ ದೊರೆಯಬಹುದು ಎಂದು ಹೇಳಲಾಗಿತ್ತು 35,000 ಮತದಾರರನ್ನು ಹೊಂದಿದ ಈ ಕ್ಷೇತ್ರದಲ್ಲಿ ಕುರುಬರು ನಿರ್ಣಾಯಕರು. ಆದರೆ ಕುರುಬರಿಗೆ ಟಿಕೆಟ್ ಲಭಿಸಲಿಲ್ಲ. ಇದರಿಂದ ಯಾದಗಿರಿಯಲ್ಲಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭದ ಮಾತಲ್ಲ.
****
ಡಾ.ಮಾಲಕರೆಡ್ಡಿಯವರು ಶಾಸಕರಾಗಿ ಸಚಿವರಾಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರದಾದ್ಯಂತ ಅವರ ಕಾರ್ಯಕರ್ತರು ಇದುವರೆಗೂ ಇದ್ದಾರೆ. ಯಾವ ಕಾಂಗ್ರೆಸ್ ನಾಯಕರು ಇದುವರೆಗೂ ಕ್ಷೇತ್ರದಲ್ಲಿ ಬಂದಿಲ್ಲ. ಚುನಾವಣೆ ಸಮಯದಲ್ಲಿ ಎಲ್ಲರೂ ಓಡಾಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಮಾಲ್ಕರೆಡ್ಡಿಯವರ ಅಭಿಮಾನಿಗಳಿದ್ದು, ಡಾ. ಅನುರಾಧ ಮಾಲ್ಕರೆಡ್ಡಿಯವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಬೇಕಾಗಿತ್ತು.
ಮರಿಗೌಡ ಚಿಕ್ಕಮೇಟಿ ಯುವ
ಕಾಂಗ್ರೆಸ್ ಮುಖಂಡ ಯಾದಗಿರಿ
****
ರಾಜ್ಯದಲ್ಲಿ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತದೆ ಎಂದು ಹೇಳಲಾಗಿತ್ತು.ಡಾ.ಮಾಲಕರೆಡ್ಡಿಯವರು ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳು ಅಪಾರ. ಅನಿವಾರ್ಯ ಕಾರಣಗಳಿಂದ ಪಕ್ಷ ಬಿಟ್ಟಿರಬಹುದು. ರಾಜ್ಯದಲ್ಲಿ ಪಕ್ಷ ಬಿಟ್ಟವರಿಗೆ ಟಿಕೆಟ್ ಕೊಟ್ಟಿಲ್ಲವೇ?. ಕಾಂಗ್ರೆಸ್ ಹೈಕಮಾಂಡ್ ಡಾ. ಅನುರಾಧ ಮಾಲಕ ರೆಡ್ಡಿಯವರಿಗೆ ಟಿಕೆಟ್ ಕೊಡಬೇಕಿತ್ತು.ಪ್ರಸ್ತುತ ಕಾಂಗ್ರೆಸ್ ಪಕ್ಷ ಯಾದಗಿರಿ ಕ್ಷೇತ್ರದಲ್ಲಿ ಗೆಲ್ಲುವುದು ಸುಲಭದ ಮಾತಲ್ಲ.
ಬಸವರಾಜ ಯಾದಗಿರಿ

About The Author