ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಎಪ್ರಿಲ್ 2 ರ ರವಿವಾರದಂದು ನಲವತ್ತನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರವನ್ನರಸಿ ಬಂದಿದ್ದ ಬಹುಸಂಖ್ಯೆಯಲ್ಲಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.
ರಾಯಚೂರು ನಗರಸಭಾ ವ್ಯಾಪ್ತಿಯ ಅಸ್ಕಿಹಾಳ ಗ್ರಾಮದ ಮನೋಜಕುಮಾರ ಎನ್ನುವ ಬಾಲಕ ಪೂರ್ಣ ಗುಣಮುಖನಾಗಿ ಬಂದು,ಲವಲವಿಕೆಯಿಂದ ಓಡಾಡುತ್ತ ಎಲ್ಲರ ಗಮನಸೆಳೆದಿದ್ದು ಇಂದಿನ ವಿಶೇಷವಾಗಿತ್ತು.ಆ ಬಾಲಕನಿಗೆ ಎರಡೂ ಕಾಲುಗಳು ಸ್ವಾಧೀನ ತಪ್ಪಿ ಕಾಲುಗಳ ಮೇಲೆ ಎದ್ದು ನಿಲ್ಲುವುದಾಗಲಿ,ನಡೆದಾಡುವುದಾಗಲಿ ಸಾಧ್ಯವಿರಲಿಲ್ಲ.ರಾಯಚೂರು- ಬೆಂಗಳೂರಿನ ಪ್ರಖ್ಯಾತ ವೈದ್ಯರ ಬಳಿ ತೋರಿಸಿ ನಿರಾಶರಾಗಿದ್ದ ಮನೋಜಕುಮಾರನ ತಂದೆ ತಾಯಿಗಳು ಎರಡುವಾರಗಳ ಹಿಂದೆ ಮಹಾಶೈವ ಧರ್ಮಪೀಠಕ್ಕೆ ಬಾಲಕನನ್ನು ಕರೆತಂದು ಪೀಠಾಧ್ಯಕ್ಷರೆದುರು ಕಣ್ಣೀರು ಕರೆದಿದ್ದರು.’ ಚಿಂತಿಸಬೇಡಿ,ಶಿವ ವಿಶ್ವೇಶ್ವರ ಸರ್ವಶಕ್ತನಿದ್ದಾನೆ.ನಿಮ್ಮ ಮಗ ಗುಣಮುಖನಾಗುತ್ತಾನೆ’ ಎಂದು ಪೀಠಾಧ್ಯಕ್ಷರು ಲೋಬಾನ ಮಂತ್ರಿಸಿಕೊಟ್ಟಿದ್ದರು.ಆ ಹುಡುಗ ಸಂಪೂರ್ಣ ಗುಣಮುಖನಾಗಿ ಮನೆಯಲ್ಲಿ ನಿಲ್ಲದೆ ಗೆಳೆಯರಜೊತೆ ಆಡಲು ಓಡುತ್ತಾನೆ ಎಂದು ದಂಪತಿಗಳು ಸಂತಸ ವ್ಯಕ್ತಪಡಿಸಿ ಶ್ರೀಕ್ಷೇತ್ರದ ದಾಸೋಹ ಸೇವೆಗೆ ತಮ್ಮಿಂದ ಆದ ಭಕ್ತಿ ಕಾಣಿಕೆಯನ್ನು ಸಲ್ಲಿಸಿದರು.ಎರಡು ವಾರಗಳ ಹಿಂದೆ ಬಾಲಕನ ಸ್ಥಿತಿಯನ್ನು ಕಂಡಿದ್ದ ಭಕ್ತರು ಇಂದು ಅವನು ಪೂರ್ಣಗುಣಮುಖನಾಗಿದ್ದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿ ‘ ಇದಲ್ಲವೆ ವಿಶ್ವೇಶ್ವರನ ಲೀಲೆ’ ಎಂದು ಕೊಂಡಾಡಿದರು.
ಇಂದಿನ ಶಿವೋಪಶಮನ ಕಾರ್ಯದಲ್ಲಿ ಬೆಂಗಳೂರು,ಬೀದರ್ ನಂತಹರಾಜ್ಯದ ದೂರದ ಊರುಗಳಿಂದ ಬಂದಿದ್ದ ಭಕ್ತರಲ್ಲದೆ ನೆರೆಯ ಮಹಾರಾಷ್ಟ್ರದ ಪೂನಾ,ಮುಂಬೈ ಗಳಿಂದ,ಸೀಮಾಂಧ್ರ- ತೆಲಂಗಾಣಗಳಿಂದ ಭಕ್ತರು ಬಂದಿದ್ದರು.ಕ್ಯಾನ್ಸರ್ ಪೀಡಿತ ಮಹಿಳಾ ರೋಗಿ ಒಬ್ಬರು ಕೂಡ ಇಂದು ತೋರಿಸಿಕೊಳ್ಳಲು ಬಂದಿದ್ದರು.
ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಗೋಪಾಲ ಮಸೀದ ಪುರ, ಈರಪ್ಪ ಮಸೀದಪುರ,ದಾಸೋಹ ಸಮಿತಿಯ ಗುರುಬಸವ ಹುರಕಡ್ಲಿ, ಬಾಬುಗೌಡ ಯಾದವ್ ಸುಲ್ತಾನಪುರ, ಚೆನ್ನಪ್ಪಗೌಡ ಮಾಲಿಪಾಟೀಲ್, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಮೃತ್ಯುಂಜಯ ಯಾದವ್, ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಯಲ್ಲಪ್ಪ ಕರಿಗಾರ, ಪೂಜಾ ಕೈಂಕರ್ಯ ನೆರವೇರಿಸುವ ದೇವರಾಜ ಕರಿಗಾರ,ತಿಪ್ಪಯ್ಯ ಭೋವಿ,ಉದಯಕುಮಾರ ಸಣ್ಣಹುಲಿಗೆಪ್ಪ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.