ಯಾದಗಿರಿ ಕ್ಷೇತ್ರ : ಚುನಾವಣೆ ದಿನಾಂಕ ನಿಗದಿಯಾದರು ಘೋಷಣೆಯಾಗದ ಕಾಂಗ್ರೆಸ್ ಟಿಕೆಟ್

ಬಸವರಾಜ ಕರೇಗಾರ

“””””

ವಡಗೇರಾ : ಅಸೆಂಬ್ಲಿ ಚುನಾವಣೆ ದಿನಾಂಕ ನಿಗದಿಯಾಗಿದೆ.ಮೇ ಹತ್ತರಂದು ಚುನಾವಣೆ ಮೇ 13 ರಂದು ಮತ ಎಣಿಕೆ ನಡೆಯಲಿದೆ. ಯಾದಗಿರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಇದುವರೆಗೂ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ನಿಗದಿಯಾಗಿಲ್ಲ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ನಿಗೂಢವಾಗಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸುರಪುರ ಎಸ್ಟಿ ಮಿಸಲಾತಿ ಇದೆ. ಉಳಿದಂತೆ ಮೂರು ಕ್ಷೇತ್ರದಲ್ಲಿ ಬಹುಸಂಖ್ಯಾತ ಶಾಸಕರಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಯಾದಗಿರಿ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎನ್ನುವ ಬಲವಾದ ಕೂಗು ರಾಜ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಕೇಳಿ ಬರುತ್ತಿದೆ.
*******
 ಯಾರಿಗೆ ಮಣೆ ಹಾಕುತ್ತಾರೆ ಕಾಂಗ್ರೆಸ್ ಪಕ್ಷ. ಕ್ಷೇತ್ರದಲ್ಲಿ ಐದು ಜನ ಕುರುಬ ಸಮಾಜದವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಕುರುಬರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ತಿಂತಣಿ ಬ್ರಿಡ್ಜ್  ಕನಕ ಗುರು ಪೀಠದ ಪೂಜ್ಯರಾದ ಸಿದ್ದರಾಮಾನಂದಪುರಿ ಸ್ವಾಮಿಜಿಯವರು ಮಾತನಾಡಿ ಕುರುಬರಿಗೆ ಟಿಕೆಟ್ ನೀಡದಿದ್ದರೆ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ಬೆಂಬಲಿಸುವ ಮಾತೇ ಇಲ್ಲ ಎನ್ನುವ ಖಡಕ್ ಸಂದೇಶ ರವಾನಿಸಿದ್ದಾರೆ.
******
     ಕುರುಬ ಸಮಾಜದವರು ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕುರುಬರಿಗೆ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತೇವೆ ಎನ್ನುವ ಎಚ್ಚರಿಕೆ ರವಾನಿಸಿದ್ದಾರೆ. ಹಾಲುಮತ ಸಮಾಜದಲ್ಲಿ ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯವಾಗಿದೆ.ನಿಖೀಲ್ ಶಂಕರ್,ಮರಿಗೌಡ ಹುಲ್ಕಲ್, ಶರಣಪ್ಪ ಸಲಾದಪುರ, ಭೀಮಣ್ಣ ಮೇಟಿ, ವಿನೋದ್ ಪಾಟೀಲ್ ಸೇರಿದಂತೆ ಹಲವು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೂ ಟಿಕೆಟ್ ಕೊಟ್ಟರೂ ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯ.ಈ ವಿಷಯವನ್ನು ಕಾಂಗ್ರೆಸ್ ಪಕ್ಷ ಯಾವ ರೀತಿ ತೆಗೆದುಕೊಳ್ಳುವುದು. ಯಾರಿಗೆ ಟಿಕೆಟ್ ನೀಡುವುದು ಎಂದು ಕಾದು ನೋಡಬೇಕಿದೆ.

About The Author