ಅಸೆಂಬ್ಲಿ ಚುನಾವಣೆ : ಇಂದಿನಿಂದ ನೀತಿ ಸಂಹಿತೆ ಜಾರಿ : ಉಮಾಕಾಂತ ಹಳ್ಳಿ

ಶಹಾಪೂರ : ಕೇಂದ್ರ ಚುನಾವಣಾ ಆಯೋಗವು ಮೇ 10 ರಂದು ಮತದಾನ ಮೆ 13ರಂದು ಮತ ಎಣಿಕೆ ನಡೆಯಲಿದ್ದು, ಮೇ 15ರವರೆಗೆ ಚುನಾವಣೆ ಪೂರ್ಣಗೊಳ್ಳಲಿದ್ದು ಅಲ್ಲಿಯವರೆಗೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ತಹಸೀಲ್ದಾರರಾದ ಉಮಾಕಾಂತ್ ಹಳ್ಳಿ ತಿಳಿಸಿದರು. 

ತಹಸೀಲ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ನಗರ ಪ್ರದೇಶಗಳಲ್ಲಿ ಚುನಾವಣಾ ತಯಾರಿ ಮಾಡಿಕೊಳ್ಳಲಾಗಿದೆ. ಬಿತ್ತಿ ಚಿತ್ರಗಳನ್ನು 24 ಗಂಟೆ ಒಳಗೆ ತೆಗೆಯಲಾಗುವುದು. ಯಾವುದೇ ಸಭೆ ಸಮಾರಂಭಗಳು ನಡೆಯಬೇಕಿದ್ದರೆ ತಾಲೂಕಿನಲ್ಲಿ ವಾರ್ ರೂಂ ತೆರೆಯಲಾಗಿದ್ದು, ಯಾವುದೇ ಸಭೆ ಸಮಾರಂಭಗಳಿಗೆ ನಗರ ಮತ್ತು ಸ್ಥಳೀಯ ಆಡಳಿತ ಇಲಾಖೆ ವತಿಯಿಂದ ಅನುಮತಿ ಕಡ್ಡಾಯ ಎಂದು ತಿಳಿಸಿದರು. ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕಿದೆ.

ಮುಡುಗೋಳ ಮಲ್ಲ ಬಿ ಚಾಮನಾಳ ಬೇಡರಹಳ್ಳಿಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಪ್ರತಿಬೂತ್ ಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ತಾಲೂಕು ಕೇಂದ್ರಗಳಲ್ಲಿ ಚುನಾವಣಾ ಕೇಂದ್ರ ಕಚೇರಿಯನ್ನು ತೆರೆಯಲಾಗಿದ್ದು, ದಿನದ 24 ಗಂಟೆಗಳ ಕಾಲ 08479- 243321 ಈ ನಂಬರ್ಗೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.

ನಮೂನೆ 12 ಡಿ ಅಡಿಯಲ್ಲಿ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರು ಅರ್ಜಿ ಸಲ್ಲಿಸಿದರೆ ಅವರಿಗೆ ಮನೆಯಿಂದಲೆ ಮತದಾನ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಗ್ರೇಡ್ 2 ತಹಶಿಲ್ದಾರ ಸೇತು ಮಾಧವ ಕುಲಕರ್ಣಿ,ನೋಡಲ್ ಅಧಿಕಾರಿ ಸೋಮಶೇಖರ ಬಿರಾದರ,ಸಿಪಿಐ ವಿಜಯಕುಮಾರ ಇದ್ದರು.

37, ಶಹಾಪೂರ ಕ್ಷೇತ್ರ,

ಪುರುಷ ಮತದಾರರು -118167
ಮಹಿಳಾ ಮತದಾರರು-117478
80 ವರ್ಷ ಮೇಲ್ಪಟ್ಟ ಮತದಾರರು-3831
ಅಂಗವಿಕಲ ಮತದಾರರು-1686
ಏಪ್ರಿಲ್ 13 ಅಧಿಸೂಚನೆ ನಾಮಪತ್ರ ಸಲ್ಲಿಕೆ
ಆರಂಭ.
ಏಪ್ರಿಲ್ 20 ಕೊನೆ ದಿನ.
ಏಪ್ರಿಲ್ 21 ಪರಿಶೀಲನೆ
ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನ 
ಮೆ.10 ಮತದಾನ
ಮೆ 13 ಮಾತು ಎಣಿಕೆ
ಮೆ 15 ಚುನಾವಣೆ ಪ್ರಕ್ರಿಯೆ ಮುಕ್ತಾಯ 

About The Author