ಯಾದಗಿರಿ ಕ್ಷೇತ್ರಕ್ಕೆ ಕುರುಬರಿಗೆ ಟಿಕೆಟ್ ಕೊಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ

ಶಹಾಪುರ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಗಾಗಿ ಪೈಪೋಟಿ ಪ್ರಾರಂಭವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕುರುಬರು ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಯಾದಗಿರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಐದು ಜನ ಕುರುಬರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕುರುಬರಿಗೆ ಟಿಕೆಟ್ ನೀಡದಿದ್ದರೆ ಕಲ್ಯಾಣ ಕರ್ನಾಟಕದಾದ್ಯಂತ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕರೆ ಕೊಡುತ್ತೇವೆ ಎಂದು ಕುರುಬ ಸಮಾಜ ಮತ್ತು ರಾಯಣ್ಣ ಯುವ ಪಡೆಯ ಅಧ್ಯಕ್ಷರಾದ ರಾಯಪ್ಪ ಛಲವಾದಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಸಿದರು.

 

ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಯಚೂರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಕುರುಬರಿಗೆ ಟಿಕೆಟ್ ನೀಡಿಲ್ಲ. ಶಹಾಪುರದಲ್ಲಿ 60,000, ಸುರಪುರದಲ್ಲಿ 75,000 ಗುರುಮಿಠಕಲ್ ದಿಲ್ಲಿ 30,000 ಯಾದಗಿರಿ ಕ್ಷೇತ್ರದಲ್ಲಿ 35,000 ಕುರುಬ ಸಮಾಜದ ಮತದಾರರಿದ್ದು, ಈ ಕ್ಷೇತ್ರದಲ್ಲಿ ಕುರುಬರ ಮತಗಳು ನಿರ್ಣಾಯಕವಾಗಿವೆ.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇದನ್ನು ಮನಗಂಡು ಯಾದಗಿರಿ ಕ್ಷೇತ್ರಕ್ಕೆ ಕುರುಬರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೋಡಬೇಕು ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ರಸ್ತಾಪುರ ಮಾತನಾಡಿ, ಕೋಳೂರು ಮಲ್ಲಪ್ಪನವರನ್ನು ಹೊರತುಪಡಿಸಿ ಇದುವರೆಗೂ ಯಾರು ಕೂಡ ಶಾಸಕರಾಗಿಲ್ಲ. ಇಲ್ಲಿಯವರೆಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಇದುವರೆಗೂ ನಾವು ಎಲ್ಲರನ್ನೂ ಬೆಂಬಲಿಸುತ್ತಾ ಬಂದಿದ್ದೇವೆ. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ಎಚ್ಚೆತ್ತುಕೊಂಡು ಕುರುಬ ಸಮಾಜದವರಿಗೆ ಯಾದಗಿರಿ ಕ್ಷೇತ್ರಕ್ಕೆ ಟಿಕೆಟ್ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಾಯಿಬಣ್ಣ ದೋರನಹಳ್ಳಿ, ಮಹಾದೇವಪ್ಪ ನಾಸಿ,ಶರಣು ಹೋತಪೇಟ,ಶಂಭು ಹಯ್ಯಳ ಬಿ,ಮುಖೇಶ್ ಗ್ರಾಪಂ.ಸದಸ್ಯರು ಹಯ್ಯಳ‌ ಬಿ, ಈಶಪ್ಪಗೌಡ ದರಿಯಾಪುರ, ಬಸವರಾಜ ಹಳಿಸಗರ,ಮಹಾಂತಗೌಡ ಸೈದಾಪುರ ಗ್ರಾಪಂ.ಸದಸ್ಯರು ಸೇರಿದಂತೆ ರಾಯಣ್ಣ ಯುವ ಪಡೆಯ ಹಲವಾರು ಯುವಕರು ಇದ್ದರು.

About The Author