ಯಾದಗಿರಿ ಕ್ಷೇತ್ರಕ್ಕೆ ಕುರುಬರಿಗೆ ಟಿಕೇಟ್ ನೀಡದಿದ್ದರೆ ಸೋಲಿಸುವ ಎಚ್ಚರಿಕೆ

ಯಾದಗಿರಿ : ಯಾದಗಿರಿ ವಿಧಾನಸಭಾ ಮತಕ್ಷೇತ್ರಕ್ಕೆ ಕುರುಬ ಸಮಾಜದ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು.  ನೀಡದಿದ್ದರೆ ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಠಿಣವಾಗಲಿದೆ ಎಂದು ಕುರುಬ ಸಮಾಜದ ಶರಣು ಮೇಟಿ ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ ಟಿಕೆಟ್ ಸಿಗದ ಹಾಗೆ ಹಿಂಬಾಗಿಲಿನಿಂದ ಆಟವಾಡುವ ಧೀಮಂತ ನಾಯಕರಿಗೂ ಸೋಲಿಸುವ ಮೂಲಕ ಸಮಾಜದ ಶಕ್ತಿ ತೋರಿಸಬೇಕಾಗುತ್ತದೆ.ಇದು ವಿನಂತಿ ಅಲ್ಲ ಸಮಾಜದ ಎಚ್ಚರಿಕೆ!

ಕುರುಬ ಸಮಾಜದ ಜನರು ಹೆಚ್ಚು ಇರುವ ಕ್ಷೇತ್ರಗಳಲ್ಲಿ  ಸಿದ್ದರಾಮಯ್ಯ ರವರನ್ನು ಕರೆಸಿ ಡೊಳ್ಳು ಬಾರಿಸಿ ಭಾಷಣ ಮಾಡಿಸಿದರೆ ನಮ್ಮ ಗೆಲುವು ಸುಲಭ ಎನ್ನುವ ನಾಯಕರೇ ಈ ಸಲ ಸಾಮಾಜಿಕ ನ್ಯಾಯದಡಿಯಲ್ಲಿ ನಮ್ಮ ಸಮಾಜದ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲೇಬೇಕು. ಒಂದು ವೇಳೆ ನೀಡದಿದ್ದರೆ ಆ ಪಕ್ಷಕ್ಕೆ ನಮ್ಮ ಸಮಾಜದ ಜನರು ತಕ್ಕ ಪಾಠ ಕಲಿಸಲು ಕಾತುರದಿಂದ ಕಾಯುತ್ತಿದ್ದಾರೆ.ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ಅತ್ಯಂತ ಜಾಗರೂಕತೆಯಿಂದ ಪರಿಗಣಿಸಿ ನಮ್ಮ ಸಮಾಜದ ಅಭ್ಯರ್ಥಿಗೆ ಮಾನ್ಯತೆ ನೀಡಲಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *