ಪೂಜ್ಯರಿಂದ ಕಲ್ಯಾಣ ಕರ್ನಾಟಕ ಕೋಲಿ ಕಬ್ಬಲಿಗ ಸಾಂಸ್ಕೃತಿಕ ಕಲಾ ಸಂಘಕ್ಕೆ ಚಾಲನೆ

ಶಹಾಪುರ : ನಗರದ, ಹಳಿಸಗರದ ಅಂಬಿಗರ ಚೌಡಯ್ಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ನೂತನವಾಗಿ ಸ್ಥಾಪಿಸಲಾದ “ಕಲ್ಯಾಣ ಕರ್ನಾಟಕ ಕೋಲಿ ಕಬ್ಬಲಿಗ ಸಾಂಸ್ಕೃತಿಕ ಕಲಾ ಸಂಘದ ನೋಂದಣಿ ಪ್ರಮಾಣಪತ್ರವನ್ನು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ, ನಿಜಶರಣ ಅಂಬಿಗರ ಚೌಡಯ್ಯನವರು ೧೨ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗನಾದರೂ, ಪ್ರವೃತ್ತಿಯಲ್ಲಿ ಅನುಭವಿ, ನೇರ, ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುತ್ತಾರೆ. ಅಲ್ಲದೇ, ಅನುಭವ ಮಂಟಪದಲ್ಲಿ ತಮ್ಮದೇ ಛಾಪು ಮೂಡಿಸಿದವರು ಇವರು ಎಂದು ಹೇಳಿದರು.
ಈ ಸಂಘಟನೆಯನ್ನು ಕಲ್ಯಾಣ ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು, ಹೋಬಳಿ ಮಟ್ಟಗಳಲ್ಲಿ ಕಲೆ, ಸಾಹಿತ್ಯ, ನೃತ್ಯ, ಸಂಗೀತ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಯುವಜನರಲ್ಲಿರುವ ಕಲೆಯನ್ನು, ಸಂಗೀತವನ್ನು, ಸಾಹಿತ್ಯವನ್ನು ಹೊರ ಹಾಕಿ, ಅವರಲ್ಲಿ ಸ್ಪೂರ್ತಿ ತುಂಬುವ ಕೆಲಸ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶಾಂತಗಂಗಾಧರ ಮಹಾಸ್ವಾಮಿಗಳು, ಸಿಂದಗಿ, ಮಾಜಿ ಎಂ.ಎಲ್.ಸಿ ಗಳಾದ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕರಾದ ಗುರುಪಾಟೀಲ ಶಿರವಾಳ, ಕೋಲಿ ಸಮಾಜದ ತಾಲ್ಲೂಕಾಧ್ಯಕ್ಷರಾದ ಅಯ್ಯಣ್ಣ ಕನ್ಯಾಕೋಳೂರ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಕು.ಲಲಿತಾ ಅನಪುರ, ನಗರಸಭೆ ಅಧ್ಯಕ್ಷರಾದ ಗಿರಿಜಮ್ಮ ಗಂ/ ಹಣಮಂತ್ರಾಯಗೌಡ, ಲಚ್ಚಪ್ಪ ಜಮಾದಾರ, ಸಂಘದ ಸದಸ್ಯರುಗಳಾದ ಭೀಮು ಮನೇಗಾರ, ರವಿ ನಾಲವಾರ, ವೆಂಕಟೇಶ ಬೋನೇರ, ಮೌನೇಶ ಹಳಿಸಗರ, ಅಮರನಾಥ ಬೋನೇರ, ಮೌನೇಶ ನಾಟೇಕಾರ, ಅಬ್ದುಲ್ ಹಾದಿಮನಿ, ಮೌನೇಶ ತಂಗಡಗಿ, ಸೋಮು ಚಂಡು ಹಳಿಸಗರ, ಅಮರೇಶ ಮಮದಾಪುರ, ಅನಿಲ ಬಿಜಾಪುರ, ರಾಮಲಿಂಗ ಮಣಿಗಿರಿ, ದೇವು ಹೈಯ್ಯಾಳಕರ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

About The Author