ಯಾದಗಿರಿ ಕ್ಷೇತ್ರದಿಂದ ಕುರುಬರಿಗೆ ನೀಡಲು ಸಾಬಣ್ಣ ಪೂಜಾರಿ ಆಗ್ರಹ

ಕುರುಬ ಜನಾಂಗದ ಋಣ ತೀರಿಸಲು ತಾವು ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರುಬ ಸಮಾಜದವರಿಗೆ ನೀಡಬೇಕು ಒಂದು ವೇಳೆ ನೀಡದಿದಲ್ಲಿ ಯಾದಗಿರ ಜಿಲ್ಲೆಯ ಹಿಂದುಳಿದ ಜನಾಂಗದಲ್ಲಿ ಬಹುಸಂಖ್ಯಾತರಾದ ಕುರುಬರಿಂದ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗುವುದಂತು ಖಚಿತ. ಎಚ್ಚೆತ್ತಿಕೊಳ್ಳಬೇಕು ಇಲ್ಲವಾದರೆ ಕುರುಬ ಸಮಾಜದ ಶಕ್ತಿ, ಸಾಮರ್ಥ್ಯ ಏನೆಂಬುದು ತೋರಿಸಬೇಕಾಗುತ್ತೆ ಎಂದು AICC ಮಲ್ಲಿಕಾರ್ಜುನ ಖರ್ಗೆ ಯವರಿಗೆ ಸಾಬಣ್ಣ ಎಂ ಪೂಜಾರಿ ಕೊಲ್ಲೂರು ಪೂಜಾರಿ ಮನವಿ ಮಾಡಿದ್ದಾರೆ.

ಅಂದು ಕೊಲ್ಲೂರು ಮಲ್ಲಪಾಜೀಯವರು ಸುರುಪುರ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರೊಬ್ಬರು ಬಿಟ್ಟರೆ ಅಲ್ಲಿಂದ ಇಲ್ಲಿಯವರಿಗೂ ಕುರುಬ ಸಮಾಜದ ಯಾವೊಬ್ಬ ನಾಯಕರು ಕೂಡ ಶಾಸಕರಾಗಿಲ್ಲ ಅನ್ನೋದು ಕುರುಬ ಸಮಾಜದ ಕುಲಬಾಂಧವರಿಗೆ ಬೇಸರ, ನೋವಿನ ಸಂಗತಿಯಾಗಿದೆ.

ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಾದಗಿರಿ ಜಿಲ್ಲೆಯ ಕುರುಬ ಸಮಾಜದ ಬೆಂಬಲ, ಮತಗಳು ಬೇಕು. ಆದರೆ ಕುರುಬ ಸಮಾಜಕ್ಕೆ ಟಿಕೆಟ್ ನೀಡದಿರುವುದು ಯಾವ ನ್ಯಾಯ? ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣವೆಂದರೇ ಯಾವ ನ್ಯಾಯ? ಸಮಾಜಕ್ಕೆ ಇನ್ನೆಷ್ಟು ವರ್ಷಗಳ ಕಾಲ ಅನ್ಯಾಯ, ಮೋಸ, ದ್ರೋಹ ಮಾಡುತ್ತೀರಾ ಹೇಳಿ? ಸಮಾಜ ಇನ್ನೆಷ್ಟು ವರ್ಷಗಳ ಕಾಲ ಅನ್ಯಾಯ, ಮೋಸ, ದ್ರೋಹ ಸಹಿಸಿಕೊಳ್ಳಬೇಕು ನೀವೇ ಹೇಳಿ?

ಕಾಂಗ್ರೆಸ್ ಗೆ ಕುರುಬ ಸಮಾಜದ ಋಣ, ಬೆಂಬಲ, ಕೊಡುಗೆ ಅಪಾರವಿದೆ ತಾವು ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಬೆಳೆದಿದ್ದೀರಿ ಅಂದರೆ ಅದಕ್ಕೆ ಪ್ರಮುಖ ಕಾರಣಿಕರ್ತರು ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ್ ಕರ್ನಾಟಕದ ಗಾಂಧಿ ಕೊಲ್ಲೂರು ಮಲ್ಲಪ್ಪಾಜೀಯವರು ಮಾತ್ರ ಎಂದರೆ ಭವಿಷ್ಯ ನಿಜಕ್ಕೂ ತಪ್ಪಾಗಲಾರದು ಎಂಬುವುದು ನಮ್ಮೆಲ್ಲರ ಭಾವನೆಯಾಗಿದೆ ಇದನ್ನ ತಾವು ಎಂದೆಂದಿಗೂ ಮರೆಯಬಾರದು.

ತಾವು ಅವರ ಋಣವನ್ನು ತೀರಿಸಬೇಕೆಂದರೆ, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಬಾರಿಯಾದರು ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರುಬರಿಗೆ ನೀಡಬೇಕು ಅದು ಬಿಟ್ಟು ಬೇರೆಯವರಿಗೆ ನೀಡಿದ್ದೆಯಾದಲ್ಲಿ ಯಾದಗಿರಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನ ಸೋಲಿಸುವುದರ ಮೂಲಕ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುವಂತಹ ಕೆಲಸ ಮಾಡಬೇಕಾಗುತ್ತದೆ ಎಂದು ಕುರುಬ ಸಮಾಜದ ವತಿಯಿಂದ ಎಚ್ಚರಿಕೆ ನೀಡುತ್ತೇವೆ ಎಂದು ಆಗ್ರಹಿಸಿದರು.

About The Author