ಕಾಂಗ್ರೆಸ್ ಮೂಲಕವೇ ಬಡ ಹಿಂದುಳಿದ ಅಭಿವೃದ್ಧಿ ಸಾಧ್ಯ : ಸದ್ದಿಲ್ಲದೆ ಕೆಲಸ ಮಾಡುತ್ತಿರುವ ನಿಖಿಲ್ ಶಂಕರ್

ವಡಗೇರಾ : ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಆಕಾಂಕ್ಷಿಗಳು ಮತದಾರರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ನಡೆಸಿದ್ದಾರೆ‌. ಕೆಲವರು ಸೀರೆ ಕುಕ್ಕರ್ ಬಡವರಿಗೆ ಮನೆ ಸಮುದಾಯ ಭವನ ಸೇರಿದಂತೆ ಹಲವು ರೀತಿಯ ಭರವಸೆಗಳನ್ನು ನೀಡುತ್ತಾ,ಮತದಾರರ ಹೋಲಿಕೆಯಲ್ಲಿ ತೊಡಗಿದ್ದಾರೆ.

ಕೆಲವರು ಪಕ್ಷದ ಟಿಕೆಟ್ ನಮಗೆ ಕೊಡುತ್ತಾರೆ ಎಂದು ಸುಮ್ಮನೆ ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷದ ಯುವ ಮುಖಂಡರು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ್ ಶಂಕರ್ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಯಾದಗಿರಿ ಮತಕ್ಷೇತ್ರದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ನಾಯಕರಲ್ಲಿ ನಿಖಿಲ್ ಶಂಕರ್ ಒಬ್ಬರು.

ನಿಖಿಲ್ ಶಂಕರ್ ಕಾಂಗ್ರೆಸ್ ಪಕ್ಷದಲ್ಲಿ ಯುವನಾಯಕ. ಕ್ಷೇತ್ರದಲ್ಲಿ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ಮತದಾರರ ಸಮಸ್ಯೆಗಳನ್ನು ಸದ್ದಿಲ್ಲದೆ ಆರಂಭಿಸಿದ್ದು, ತಳಮಟ್ಟದಿಂದ ನಾಡಿಮಿಡಿತವನ್ನು ಅರಿಯಲು ಶ್ರಮಿಸುತ್ತಿದ್ದಾರೆ. ಮತದಾರರ ನಾಡಿ ಮಿಡಿತವನ್ನು ಅರಿಯಲು ಪ್ರಯತ್ನಿಸುತ್ತಿದೆ ವಸತಿ ವ್ಯವಸ್ಥೆ ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಆರ್ಥಿಕವಾಗಿ ದುರ್ಬಲ ಕುಟುಂಬಗಳು, ಸರಕಾರದಿಂದ ಸೂರು ವಂಚಿತರು ರೈತರ ಸಮಸ್ಯೆಗಳು, ರೈತರ ಆತ್ಮಹತ್ಯೆಗೆ ಸಂಬಂಧಿಸಿದ ಕಾರಣಗಳು,ನಿರುದ್ಯೋಗ ವಿದ್ಯಾವಂತರು, ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ತಮ್ಮ ತಂಡದೊಂದಿಗೆ ಭೇಟಿ ನೀಡಿ ಆಲಿಸುತ್ತಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಮಲ್ಲಪ್ಪಾಜಿ ಯವರ ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿ ಮಾಡಿದ್ದಾರೆ.

ನಾವು ಮತದಾರರ ಸಮಸ್ಯೆಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾವು ಆಲಿಸಿದ ಸಮಸ್ಯೆಗಳನ್ನು ಪೂರೈಸಬೇಕು. ಇಲ್ಲದಿದ್ದರೆ ಮತದಾರರಿಗೆ ವಂಚನೆ ಮಾಡಿದಂತೆ ಎನ್ನುತ್ತಾರೆ ನಿಖಿಲ್ ಶಂಕರ್.ಕಾಂಗ್ರೆಸ್ ಪಕ್ಷ ಯಾದಗಿರಿ ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ನೀಡುತ್ತದೆಯಾ!

” ನಾವು ಆಡಿದ ಮಾತಿಗೆ ಯಾವತ್ತೂ ತಪ್ಪಬಾರದು. ಜನರು ನಮ್ಮ ಮೇಲೆ ನಂಬಿಕೆ ಇಟ್ಟು ವಿಧಾನ ಸಭೆಗೆ ಆಯ್ಕೆ ಮಾಡಿ  ಕಳಿಸಿರುತ್ತಾರೆ.ಜನನಾಯಕರೆಂದರೆ ಸಾರ್ವಜನಿಕರ,ಬಡವರ ಕಾರ್ಮಿಕರ ಮಧ್ಯೆ ನಮ್ಮ ಜೀವನವಿರಬೇಕು.ಅಂದಾಗ ಬಡವರ ನಾಡಿಮಿಡಿತವನ್ನು ಅರಿಯಲು ಸಾಧ್ಯ ನಾವು ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ.ಬಡಜನರ ಪರ ಹಿಂದುಳಿದವರ ಪರ ಕಾಂಗ್ರೆಸ್ ಪಕ್ಷವಿದೆ.”

ನಿಖಿಲ್ ವಿ ಶಂಕರ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಕಾಂಗ್ರೆಸ್ ಪಕ್ಷ 

About The Author