ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿಂದು ‘ ಕಳಶಾರೋಹಣ ಮತ್ತು ಯುಗಾದಿ ಉತ್ಸವ’ ಆಹ್ವಾನ ಪತ್ರಿಕೆ ಪೂಜೆ,ಬಿಡುಗಡೆ

ರಾಯಚೂರು : ಜಿಲ್ಲೆಯ‌ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಮಾರ್ಚ್ 22 ರ ಯುಗಾದಿಯ ದಿನದಂದು ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ಶ್ರೀ ವಿಶ್ವೇಶ್ವರ ಶಿವ ಹಾಗೂ ಕ್ಷೇತ್ರೇಶ್ವರಿ ಶ್ರೀ ವಿಶ್ವೇಶ್ವರಿ ದುರ್ಗಾದೇವಿ ದೇವಸ್ಥಾನಗಳ ಕಳಶಾರೋಹಣ ಸಮಾರಂಭ ಮತ್ತು ಯುಗಾದಿ ಉತ್ಸವ ೨೦೨೩ ಅನ್ನು ಹಮ್ಮಿಕೊಳ್ಳಲಾಗಿದೆ.

ಸಮಾರಂಭದ ಅಂಗವಾಗಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿದ್ದು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಇಂದು ಬೆಳಿಗ್ಗೆ ಪೀಠದ ಪರಂಪರೆಯಂತೆಯಂತೆ ಆಹ್ವಾನ ಪತ್ರಿಕೆಗಳನ್ನು ವಿಶ್ವೇಶ್ವರನ ಸನ್ನಿಧಿಯಲ್ಲಿ ಸಮರ್ಪಿಸಿ,ಬಿಡುಗಡೆ ಮಾಡಿ ಶ್ರೀಕ್ಷೇತ್ರದ ಸಿದ್ಧಿವಿನಾಯಕ,ಸುಬ್ರಹ್ಮಣ್ಯ,ನಂದಿ,ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿ,ಅಭಯಾಂಜನೇಯ,ಮಹಾಕಾಳಿ ಮತ್ತು ನಾಗದೇವತೆಗಳಿಗೆ ಆಹ್ವಾನನೀಡಿ,ಸಮಾರಂಭಕ್ಕೆ ಯಶಸ್ಸು ಹಾರೈಸುವಂತೆ ಪ್ರಾರ್ಥಿಸಿದರು.

ನಂತರ ಗೋಪಾಲ ಮಸೀದಪುರ,ಶಿವಪುತ್ರಪ್ಪಗೌಡ ಖಾನಾಪುರ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್ ಹಾಗೂ ಉದಯಕುಮಾರ ಮಡಿವಾಳ ಅವರುಗಳಿಗೆ ಆಹ್ವಾನ ಪತ್ರಿಕೆಗಳನ್ನು ನೀಡುವ ಮೂಲಕ ಆಹ್ವಾನಪತ್ರಿಕೆಗಳನ್ನು ಹಂಚುವ ಕಾರ್ಯಕ್ಕೆ ಚಾಲನೆ ನೀಡಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ ಮತ್ತು ಮಹಾಶೈವ ಧರ್ಮಪೀಠದ ಭಕ್ತರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಸವರಾಜ ಕರೆಗಾರ ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

About The Author