ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠಕ್ಕೆ ಕಳಶಗಳ ಆಗಮನ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ಹಾಗೂ ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿ ದೇವಸ್ಥಾನಗಳ ಕಳಶಾರೋಹಣ ಸಮಾರಂಭವನ್ನು ಮಾರ್ಚ್ 22 ರ ಯುಗಾದಿಯಂದು ಹಮ್ಮಿಕೊಂಡಿದ್ದು

ಈ ದಿನ ರಾತ್ರಿ ಎರಡು ಕಳಶಗಳು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿದವು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸದ ದ್ವಾರದಲ್ಲಿ ಕಳಶಗಳಿಗೆ ಪೂಜೆ ಸಲ್ಲಿಸಿ,ಬರಮಾಡಿಕೊಂಡರು.

ನಂತರ ವಿಶ್ವೇಶ್ವರ ಶಿವ,ವಿಶ್ವೇಶ್ವರಿ ದುರ್ಗಾದೇವಿ,ಅಭಯ ಆಂಜನೇಯ ಮತ್ತು ಮಹಾಕಾಳಿ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಿ ಎರಡು ಕಳಶಗಳನ್ನು ಪೀಠಾಧ್ಯಕ್ಷರ ಯೋಗಸಿದ್ಧಿಸ್ಥಳವಾದ ಮೂಲದುರ್ಗಾದೇವಿಯ ಸನ್ನಿಧಿಯಲ್ಲಿ ನೆಲೆಗೊಳಿಸಲಾಯಿತು.

ಯುಗಾದಿಯಂದು ಬೆಳಿಗ್ಗೆ 9.00 ಘಂಟೆಗೆ ಮಹಾಶೈವ ಧರ್ಮಪರಂಪರೆಯಂತೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಉಭಯ ದೇವಸ್ಥಾನಗಳ ಕಳಶಾರೋಹಣ ನಡೆಸುವರು.

ದಿಡ್ಡಿ ಬಸವ ಅತ್ತನೂರು ಅವರು ಬಂಧುಮಿತ್ರರೊಡಗೂಡಿ ಎರಡು ಕಳಶಗಳ ಕೊಡುಗೆ ನೀಡಿದ್ದು ಚಿತ್ರದುರ್ಗ ಜಿಲ್ಲೆಯ ನಾಯ್ಕನಹಟ್ಟಿ ಯ ಮಹೇಶ ಮೆಟಲ್ ವರ್ಕ್ ಕಳಶನಿರ್ಮಾಣ ಸಂಸ್ಥೆಯವರು ಕಳಶಗಳನ್ನು ನಿರ್ಮಿಸಿದ್ದಾರೆ.ಗೋಪಾಲ ಮಸೀದಪುರ,ಶರಣಪ್ಪ ಬೂದಿನಾಳ,ರಂಗನಾಥ ಹಳ್ಳೂರು ಮತ್ತು ಪ್ರತಾಪ ಹಳ್ಳೂರು ಅವರುಗಳನ್ನೊಳಗೊಂಡ ತಂಡವು ನಾಯ್ಕನ ಹಟ್ಟಿಯಿಂದ ಕಳಶಗಳನ್ನು ತಂದರು.

ಕಳಶಸ್ವಾಗತ ಕಾರ್ಯಕ್ರಮದಲ್ಲಿ ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಪೀಠದ ಕಾರ್ಯನಿರ್ವಾಹಕ ಅಧಿಕಾರಿ ವರದರಾಜ ಅಬ್ಕಾರಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ, ಚೆನ್ನಪ್ಪಗೌಡ ಮಾಲೀಪಾಟೀಲ್, ಪ್ರಭು ಕರಿಗಾರ,ಗಂಗಣ್ಣ ಬುದ್ದಿನ್ನಿ,ಪಂಚಯ್ಯ ಕರಿಗಾರ,ಯಲ್ಲಪ್ಪ ಕರಿಗಾರ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್,ಶರಣಪ್ಪ ಗೋನಾಳ,ಗೋಪಾಲ ಮಸೀದಪುರ,‌ ಬಸವರಾಜ ಯಲ್ಲಪ್ಪ ಕರಿಗಾರ, ಹನುಮೇಶ,ಸಣ್ಣ ಹುಲಿಗೆಪ್ಪ ಮಡಿವಾಳ,ಉದಯಕುಮಾರ ಮಡಿವಾಳ,ತಿಪ್ಪಯ್ಯ ಬೋವಿ,ಅಂಬರೇಶ ಗಣೇಕಲ್ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

ಬಸವರಾಜ ಕರಿಗಾರ,ಸಾಂತಪ್ಪ ಕರಿಗಾರ,ಪ್ರಭು ಮಲ್ಲಯ್ಯ ಕರಿಗಾರ ಅವರ ನೇತೃತ್ವದ ಡೊಳ್ಳಿನ ತಂಡಗಳು ಡೊಳ್ಳುಗಳನ್ನು ಬಾರಿಸಿದರು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

About The Author