ರಾಯಪ್ಪಗೌಡ ಹುಡೇದ್ ರವರ ಕುರಿತು ರಚಿಸಿದ ಅಭಿನಂದನಾ ಗ್ರಂಥ ಲೋಕಾರ್ಪಣೆ

ಶಹಪುರ : ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷರು ಮತ್ತು ಕಲ್ಯಾಣ ಕರ್ನಾಟಕದ ವಿಭಾಗಿಯ ಉಪಾಧ್ಯಕ್ಷರಾದ ರಾಯಪ್ಪ ಗೌಡ ಹುಡೇದ ಜನ್ಮ ದಿನಾಚರಣೆ ನಿಮಿತ್ತ ಭಿ,ಗುಡಿಯ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂ ಹಾಲ್ನಲ್ಲಿ ನಾಳೆ ಬೆ.12-00ಕ್ಕೆ ನೌಕರರ ಸಂಘದವರು ಮತ್ತು ಅಭಿಮಾನಿ ಬಳಗದವರಿಂದ ರಾಯಪ್ಪ ಗೌಡ ಹುಡೇದ್ ಕುರಿತು ರಚಿಸಿದ ಸಗರನಾಡಿನ ನೌಕರರ ಬಂದು ಕೃತಿ ಲೋಕಾರ್ಪಣೆ ಸಮಾರಂಭ ನಡೆಯಲಿದೆ.

ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಕರಾಗಿ ಆಗಮಿಸಲಿದ್ದು, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪೂಜ್ಯರಾದ ಹೆಡಗಿಮುದ್ರ ಪೂಜ್ಯ ಶ್ರೀ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು, ದೇವಪುರದ ಪೂಜ್ಯಶ್ರೀ ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಪಂಚಾಯತಿ ಸಿಇಓ ಅಂಬರೀಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸವರು. ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್ ರೆಡ್ಡಿ ದರ್ಶನಾಪುರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ನೌಕರರ ಸಂಘದ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *