ನಕಲಿ ಆಡಿಯೋ ಸೃಷ್ಟಿಸಿ ನನ್ನ ವಿರುದ್ಧ ಷಡ್ಯಂತ್ರ ಮಾಲಕರಡ್ಡಿ ಸ್ಪಷ್ಟನೆ

ಯಾದಗಿರಿ : ಕಳೆದ ಕೆಲವು ದಿನಗಳಿಂದ ನಕಲಿ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಕಲಿ ಆಡಿಯೊದಲ್ಲಿ ನನ್ನ ಧ್ವನಿಯನ್ನು ತಿರುಚಲಾಗಿದೆ ಎಂದು ಮಾಜಿ ಶಾಸಕರಾದ ಡಾ. ಮಾಲಕರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

   ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲ. ನನ್ನ ಸಮಕಾಲೀನರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ನಿಂದಿಸುವ ಮಾತುಗಳನ್ನು ಆಡಿಲ್ಲ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ನನ್ನ ವಿರೋಧಿಗಳು ಷಡ್ಯಂತ್ರ ರೂಪಿಸಿದ್ದಾರೆ.
    ಮಲ್ಲಿಕಾರ್ಜುನ ಖರ್ಗೆಯವರು ಈ ಭಾಗದಲ್ಲಿ 371 ಜೆ ಯಿಂದ ಸಾವಿರಾರು ಉದ್ಯೋಗ ಕಲ್ಪಿಸಿ ಕೊಟ್ಟಿದ್ದಾರೆ. ನನ್ನ ಕುಟುಂಬದವರು ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತಾರೆ ಎನ್ನುವ ಭಯದಿಂದ ಈ ರೀತಿ ಆಡಿಯೋ ತಿರುಚಲಾಗಿದೆ. ಯಾರು ಅನ್ಯತಾ ಭಾವಿಸದೆ ಗಂಭೀರವಾಗಿ ಪರಿಗಣಿಸಬಾರದು.ಆಡಿಯೊದಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *