ಬಸವರಾಜ ಕರೆಗಾರ
*****
” ನಿಖಿಲ್ ವಿ.ಶಂಕರ್ ರವರಿಂದ ಹೊಸದಾಗಿ ನಿರ್ಮಾಣಗೊಂಡ ಸ್ವಾತಂತ್ರ ಹೋರಾಟಗಾರ ಕೊಲೂರು ಮಲ್ಲಪ್ಪಾಜಿಯ ಸ್ಮಾರಕ “
*****
ಯಾದಗಿರಿ :ಕಲ್ಯಾಣ ಕರ್ನಾಟಕದ ಗಾಂಧಿ ಎಂದು ಕರೆಯಲ್ಪಡುವ ಸ್ವಾತಂತ್ರ್ಯ ಹೋರಾಟಗಾರ ನೇರವಾದಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಕೊಡುಗೆ ಅಪಾರವಿದೆ. ಬ್ರಿಟಿಷರು ಎಷ್ಟೇ ಕಷ್ಟ ಕೊಟ್ಟರು ಹೋರಾಟದ ಕಿಚ್ಚನ್ನು ಮರೆಮಾಚಲಿಲ್ಲ. ದೇಶಕ್ಕಾಗಿ ಗಾಂಧೀಜಿಯಂತೆ ದಿಟ್ಟ ಹೋರಾಟ ಮಾಡಿದ ಧೀಮಂತ ನಾಯಕ ಕೊಲೂರು ಮಲ್ಲಪ್ಪಾಜಿ.ಇಂದಿನವರೆಗೂ ಕೋಳೂರು ಮಲ್ಲಪ್ಪಾಜಿ ಎಂದು ಪ್ರೀತಿಯಿಂದ ಕರೆಯುತ್ತಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಬಾರಿ ಜೈಲುವಾಸ ಅನುಭವಿಸಿದವರು. ದೇಶದ ಜನತೆ ಇಂತಹ ಮಹಾನ್ ನಾಯಕ ಸ್ವಾತಂತ್ರ್ಯ ಹೋರಾಟಗಾರ ಗಿರಿನಾಡಿನವರು ಎನ್ನುವುದೇ ಎಮ್ಮೆಯ ವಿಚಾರ.
” ಕಲ್ಯಾಣ ಕರ್ನಾಟಕ ಗಾಂಧಿ ಸ್ವಾತಂತ್ರ ಹೋರಾಟಗಾರ ಕೊಲೂರು ಮಲ್ಲಪ್ಪಾಜಿ “
*****
ಅಧಿಕಾರ ತನ್ನ ಹತ್ತಿರಕ್ಕೆ ಬಂದರೂ ನಯವಾಗಿ ತಿರಸ್ಕರಿಸಿದ ಕೊಲೂರು ಮಲ್ಲಪ್ಪಾಜಿ
ಮಲ್ಲಪ್ಪಾಜಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದುಕೊಂಡರು. ನೆಹರು ಇಂದಿರಾಗಾಂಧಿಯವರಿಗೆ ಆತ್ಮೀಯರಾಗಿದ್ದ ಮಲ್ಲಪ್ಪಾಜಿ ಸ್ವಾರ್ಥಕ್ಕಾಗಿ ಸರಕಾರದಲ್ಲಿ ಏನು ಬಯಸಲಿಲ್ಲ. ಬಡ ಜನರಿಗೆ ದೀನದಲಿತರಿಗೆ ತಮ್ಮ ಆಸ್ತಿಯನ್ನು ಕೊಟ್ಟರೆಂದರೆ ಆಶ್ಚರ್ಯಕರ.ಮಲ್ಲಪ್ಪಜಿಯವರು ಮನಸ್ಸು ಮಾಡಿದ್ದರೆ ರಾಷ್ಟ್ರೀಯ ಉನ್ನತ ಹುದ್ದೆ, ರಾಜ್ಯದ ಮುಖ್ಯಮಂತ್ರಿ ಆಗುತ್ತಿದ್ದರು. ಇಂದಿರಾಗಾಂಧಿಯವರು ಹೇಳಿದರೂ ನಯವಾಗಿ ತಿರಸ್ಕರಿಸಿದರು.ನನಗಿಂತಹಿರಿಯರಿದ್ ದಾರೆ ಅವರಿಗೆ ಕೊಡಿ ಎಂದರು. ಕೊನೆಗೆ ರಾಜ್ಯದಲ್ಲಿ ಸಚಿವ ಸ್ಥಾನ ಕೂಡ ಬೇಡವೆಂದರು.
” ಕೊಲ್ಲೂರು ಮಲ್ಲಪ್ಪಾಜಿಯವರ ಸ್ಮಾರಕ ನಿರ್ಮಿಸಿದ ನಿಖೀಲ್ ವಿ.ಶಂಕರ್ “
*****
ಇಂದಿನ ರಾಜಕಾರಣಿಗಳು ಮುಖ್ಯಮಂತ್ರಿ ಸಚಿವ ಸ್ಥಾನಕ್ಕಾಗಿ ಕಾಯುತ್ತಿರುತ್ತಾರೆ. ತಮ್ಮಿಂದ ಅಭಿಮಾನಿಗಳಿಂದ ಪ್ರತಿಭಟನೆ ಮಾಡಿಸುತ್ತಿದ್ದಾರೆ. 2023ರ ಇಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಂದ ಪಕ್ಷದ ಟಿಕೆಟ್ಗಾಗಿ ಅಭಿಮಾನಿಗಳಿಂದ ಟಿಕೆಟ್ ನನಗೆ ಕೊಡಿ ಎಂದು ಪಕ್ಷದ ಮೇಲೆ ಒತ್ತಡ ಪ್ರಭಾವ ಬೀರುತ್ತಿದ್ದಾರೆ.
ಕ್ರಿಕೆಟ್ ವಾಲಿಬಾಲ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.ಅಧಿಕಾರದಲ್ಲಿ ಇರುವವರು ಸ್ಮಾರಕ ನಿರ್ಮಾಣ ಮಾಡಲಿಲ್ಲ. ಆದರೆ ಒಬ್ಬ ಸ್ವಾತಂತ್ರ ಹೋರಾಟಗಾರನ ಸ್ಮಾರಕ ನಿರ್ಮಾಣ ಮಾಡದ ಗೋಜಿಗೆ ಹೋಗದೆ ಇರುವುದು ದುರಂತವೇ ಸರಿ. ಜಿಲ್ಲೆಯಲ್ಲಿ ಅಂತಹ ಸಮರ್ಥ ನಾಯಕರಿಲ್ಲವೇ ಅಥವಾ ಇಚ್ಛಾಶಕ್ತಿ ಇಲ್ಲವೇ ಎನ್ನುವುದು ತಿಳಿಯುತ್ತಿಲ್ಲ.
*****
ಸರಕಾರಕೊಲೂರು ಮಲ್ಲಪ್ಪಾಜಿಯವರ ಸ್ಮಾರಕ ನಿರ್ಮಿಸದೆ ಇರುವುದು ದುರದೃಷ್ಟಕರ
ರಾಷ್ಟ್ರ ಮತ್ತು ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು ನಿರ್ಮಾಣವಾಗಿವೆ. ಆದರೆ ಗಿರಿನಾಡಿನ ಮಲ್ಲಪ್ಪಜಿಯವರ ಸ್ಮಾರಕ ಮಾಡುವ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನೆನಪಾಗದೆ ಇರುವುದು ದುರದೃಷ್ಟಕರ.
*****
ಕೊಲೂರು ಮಲ್ಲಪ್ಪಾಜಿ ಸ್ಮಾರಕ ನಿರ್ಮಿಸಿ ಸೈ ಎನಿಸಿಕೊಂಡ ನಿಖಿಲ್ ಶಂಕರ್
ದೇಶದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಿಸುವುದು ಪುಣ್ಯದ ಕೆಲಸ.ದೇಶಕ್ಕಾಗಿ ತನ್ನದೇ ತ್ಯಾಗ ಮಾಡಿದವರು ಮಲ್ಲಪ್ಪಾ ಜಾತಿಯವರು. ರಾಷ್ಟ್ರ ಕಂಡ ಧೀಮಂತ ನಾಯಕರು. ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಅದು ನನಗೆ ಸಿಕ್ಕಿದೆ.ಸ್ಮಾರಕದ ಎಲ್ಲಾ ಕೆಲಸವು ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಮಾಡುತ್ತೇವೆ.ನಿಖಿಲ್ ಶಂಕರ್ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ. ಎಲ್ಲಿಯೂ ಕೂಡ ನಾನು ಆಕಾಂಕ್ಷಿ ಎಂದು ಹೇಳಿಕೊಳ್ಳಲಿಲ್ಲ. ಸದ್ದಿಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ನಾಯಕರು ಕ್ಷೇತ್ರಕ್ಕೆ ಬೇಕು ಅನಿಸುತ್ತಿದೆ.
About The Author
Post Views: 314