ಶಾಸಕರ 62 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ, ಕಾಯಕದ ನಿಜನಾಯಕ ಕೃತಿ ಲೋಕಾರ್ಪಣೆ.ಮಾತನಾಡುವುದು ಸಾಧನೆಯಾಗದೆ,ಸಾಧನೆ ಮಾತನಾಡಬೇಕು : ಪೂಜ್ಯ ಶ್ರೀ ಅಜೇಂದ್ರ ಮಹಾಸ್ವಾಮಿಗಳು

ಶಹಾಪುರ :ಶಹಾಪುರ ಕ್ಷೇತ್ರದ ಶಾಸಕರ ಅಭಿವೃದ್ಧಿಯ ಸಾಧನೆ ಬಹುದೊಡ್ಡದು. ಸರಳ ಸಜ್ಜನಿಕೆಯ ರಾಜಕಾರಣಿ ಶರಣಬಸಪ್ಪ ದರ್ಶನಪುರವರ ಕೊಡುಗೆ ಕ್ಷೇತ್ರಕ್ಕೆ ಅಪಾರವಾದದ್ದು. ಮಾತನಾಡುವುದು ಸಾಧನೆಯಾಗದೆ ಸಾಧನೆ ಮಾತನಾಡಬೇಕು ಎನ್ನುವಂತಹ ನಿಜನಾಯಕರು ಶರಣಬಸಪ್ಪಗೌಡ ದರ್ಶನಪುರ ಎಂದು ನಗರದ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯರಾದ ಅಜೇಂದ್ರ ಮಹಾಸ್ವಾಮಿಗಳು ಶಾಸಕರ ಕುರಿತು ಮಾತನಾಡಿದರು.

ನಗರದ ಆರ್ಬೋಳ ಕಲ್ಯಾಣ ಮಂಟಪದಲ್ಲಿ ಶಾಸಕರ 62 ನೇ ವರ್ಷದ ಹುಟ್ಟುಹಬ್ಬ ಮತ್ತು ಷಷ್ಟ್ಯಬ್ದಿ ಸಮಾರಂಭ ನಿಮಿತ್ತ ಅವರ ಅವರು ಅಭಿಮಾನಿ ಬಳಗದವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಸ್ಥಳೀಯ ಸಾಹಿತಿಗಳಾದ ಸಿದ್ರಾಮ್ ಹೊನ್ಕಲ್ ರವರು ರಚಿಸಿದ ಅಲ್ಲಮ ಪ್ರಭು ಪ್ರಕಾಶನ ಹೊರತಂದ ಕಾಯಕದ ನಿಜನಾಯಕ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಧೀಮಂತ ಶ್ರೀಮಂತನಾಗಬಹುದು, ಹೃದಯವಂತನಾಗಲು ಸಾಧ್ಯವೇ, ಶಾಸಕರು ಹೃದಯವಂತರು, ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಶಾಸಕರು ತಮ್ಮ ಕೃತಿಯ ಸಾಧನೆಗಳ ಕುರಿತು ಮಾತನಾಡಿ, ತಮ್ಮ ಬಾಲ್ಯ ಜೀವನವನ್ನು ಮೇಲುಕು ಹಾಕಿದರು.1984-85ರಲ್ಲಿ ಇಂಜಿನಿಯರಾಗಿ,1985-86ರಲ್ಲಿ ಮೂರು ವರ್ಷ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 1988 ರಲ್ಲಿ ತಂದೆಯವರಾದ ಬಾಬುಗೌಡ ದರ್ಶನಾಪುರವರ ಅಕಾಲಿಕ ಮರಣದಿಂದ ಅನಿವಾರ್ಯವಾಗಿ ರಾಜಕೀಯ ಪ್ರವೇಶ ಮಾಡಬೇಕಾಯಿತು. ನಾಲ್ಕು ಬಾರಿ ಶಾಸಕರಾಗಿ ಸಚಿವನಾಗಿ ಅಭಿವೃದ್ಧಿ ಮಾಡಿದ್ದೇನೆ. ನಾನು ಹಣ ಮಾಡಲು ಬಂದಿಲ್ಲ. ಹೆಸರು ಮಾಡಲು ಬಂದಿದ್ದೇನೆ ಎಂದು ಹೇಳಿದರು. ಸೋಲು ಗೆಲುವು ಎರಡು ಕಂಡಿದ್ದೇನೆ. ಕ್ಷೇತ್ರದ ಪ್ರತಿ ಗ್ರಾಮಗಳ ಅಭಿವೃದ್ಧಿ ನನ್ನ ಕರ್ತವ್ಯ. ಶಿಕ್ಷಣ, ಆರೋಗ್ಯ, ರಸ್ತೆ, ವಿದ್ಯುತ್ ಈ ಎಲ್ಲವುಗಳನ್ನು ಶಹಪುರದಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಹಾಕಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಜನರು ಮನಸ್ಸು ಇನ್ನೂ ಗೆಲ್ಲಬೇಕಿದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಆರಂಭದಲ್ಲಿ ಕಾರ್ಯಕ್ರಮದಲ್ಲಿದ್ದ ಪೂಜ್ಯರು  ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುರಾದ ಬಸವರಾಜಪ್ಪಗೌಡ ದರ್ಶನಾಪುರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೂಜ್ಯರು ಶರಣಬಸಪ್ಪಗೌಡ ಮತ್ತು ಧರ್ಮಪತ್ನಿಯಾದ ಭಾರತಿ ದರ್ಶನಾಪುರ ದಂಪತಿಗಳಿಗೆ ಸನ್ಮಾನಿಸಿ ಆಶೀರ್ವಾದಿಸಿದರು.
ಸ್ಥಳೀಯ ಸಾಹಿತಿಗಳಾದ ಸಿದ್ರಾಮ್ ಹೊನ್ಕಲ್ ರವರ ಹಲವು ದಿನಗಳಿಂದ ಶ್ರಮಪಟ್ಟು ನಿಜನಾಯಕ ಕೃತಿ ರಚಿಸಿದ್ದಾರೆ. ಕಾರ್ಯಕ್ರಮದಲ್ಲಿ ದಂಪತಿ ಸಿದ್ರಾಮ್  ಹೊನ್ಕಲ್ ಮತ್ತು ದಂಪತಿಗಳಿಗೆ ಶಾಸಕರು ಪೂಜ್ಯರಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪೂಜ್ಯರಾದ ಶ್ರೀ ಸಿದ್ಧತೋಟೇಂದ್ರ ಮಹಾಸ್ವಾಮಿಗಳು ನಾಲವಾರ, ಪೂಜ್ಯಶ್ರೀ ಗಂಗಾಧರ ಮಹಾಸ್ವಾಮಿಗಳು ಅಬ್ಬೆತುಮಕೂರು, ವಿಶ್ವರಾಧ್ಯ ಶಿವಾಚಾರ್ಯರು ಮಾಗಣಗೆರಿ, ರುದ್ರಮುನಿ ಶಿವಾಚಾರ್ಯರು, ಗುರುಪಾದ ಮಹಾಸ್ವಾಮಿಗಳು, ಸಿದ್ದೇಶ್ವರ ಶಿವಾಚಾರ್ಯರು, ಚೆನ್ನವೀರ ಶಿವಾಚಾರ್ಯರು, ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಬಸವಯ್ಯ ಶರಣರು,ಶರಣು ಗದ್ದುಗೆ, ಮಹಲ್ ರೋಜದ ಮಲ್ಲಿಕಾರ್ಜುನ ಮುತ್ಯಾ, ಬಸವರಾಜ ಹಿರೇಮಠ, ರವರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಮರಿಗೌಡ ಹುಲ್ಕಲ್, ಶರಣಪ್ಪ ಸಲಾದಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಆರ್ಬೋಳ, ವಿಶ್ವನಾಥ ರೆಡ್ಡಿ ದರ್ಶಾನಾಪುರ,
 ಉದ್ಯಮಿಗಳು ಸಮಾಜ ಸೇವಕರಾದ ಗುರು ಮಣಿಕಂಠ,ಎಮ್ ನಾರಾಯಣ ನಿವೃತ್ತ ಲೆಕ್ಕ ಪರಿಶೋದಕರು, ಕೆಂಚಪ್ಪ ನಿವೃತ್ತ ನಿಬಂಧಕರು,  ಶಾಂತು ಪಾಟೀಲ್, ಶಿವಮಾಂತು ಸಾಹು, ಶಾಂತಗೌಡ ನಾಗನಟಿಗಿ, ಶರಣಬಸವ ಸೈದಾಪುರ, ಸೇರಿದಂತೆ ಶರಣಬಸಪ್ಪಗೌಡ ಅಭಿಮಾನಿ ಬಳಗದವರು ಮಹಿಳೆಯರು ಸೇರಿದಂತೆ ಹಲವಾರು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author