ಶಹಾಪುರ ವಿಜಯ ಸಂಕಲ್ಪ ಯಾತ್ರೆ : CM ಸೇರಿದಂತೆ ಪ್ರಮುಖ ನಾಯಕರ ಗೈರು ಸಾಧ್ಯತೆ ? ಯಶಸ್ವಿಯಾಗುವುದೆ ವಿಜಯ ಸಂಕಲ್ಪ ಯಾತ್ರೆ ?

ಯಾದಗಿರಿರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯಾದ್ಯಂತ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಸಾಧನೆಗಳನ್ನು ಪರಿಚಯಿಸಲು ತಾಲೂಕು, ಜಿಲ್ಲೆ, ಕ್ಷೇತ್ರಗಳಾದ್ಯಂತ ಸಂಚರಿಸಲ್ಪಟ್ಟಿದ್ದ ವಿಜಯ ಸಂಕಲ್ಪ ಯಾತ್ರೆ ಕಳೆಗುಂದಲಿದೆಯಾ ?. ರಾಷ್ಟ್ರ ರಾಜ್ಯ ನಾಯಕರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.ಯಾದಗಿರಿ ಜಿಲ್ಲೆಗೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆ ಇಂದು ಹತ್ತು ಗಂಟೆ ಸುಮಾರಿಗೆ ಶಹಪುರ ನಗರಕ್ಕೆ ಆಗಮಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಗೈರುಹಾಜರಾಗುವ ಸಾಧ್ಯತೆ ಇದೆ ಎನ್ನುವ ಸುಳಿವು ಸಿಕ್ಕಿದ್ದು, ಇದರಿಂದ ವಿಜಯ ಸಂಕಲ್ಪ ಯಾತ್ರೆ ನೀರಸವಾಗಿ ಜರುಗುವ ನಿರೀಕ್ಷೆ ಇದೆ.

ಇದರಿಂದ ಶಹಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಾವು ಮಾಡಿದ ಶ್ರಮ ವ್ಯರ್ಥವಾಗುತ್ತದೆ ಎನ್ನುವಂತಾಗಿದೆ?

ಶಹಾಪುರ ನಗರದಾದ್ಯಂತ ಬಿಜೆಪಿ ಕಟೌಟ್ಗಳ ಭರಾಟೆ ಜೋರಾಗಿದೆ.ಟಿಕೆಟ್ ಆಕಾಂಕ್ಷಿಗಳು ತಮ್ಮ ಟಿಕೆಟ್ ಗಾಗಿ ಶಕ್ತಿ ಪ್ರದರ್ಶನ ತೋರಿಸುವ ನಿಟ್ಟಿನಲ್ಲಿ ನಗರದಾದ್ಯಂತ ತಮ್ಮ ರಾಜ್ಯ ನಾಯಕರ ಚಿತ್ರಗಳನ್ನು ಹಾಕಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿ ನಿಂತಿವೆ. ಇತ್ತ ಪ್ರಮುಖ ಮುಖಂಡರು ಗೈರುಹಾಜರಾಗಲಿರುವ ಸಂಭವ ಇದೆ ಎನ್ನುವ ಅನುಮಾನ ನಾಯಕರಲ್ಲಿ ಕಾಡುತ್ತಿದೆ.

ನಗರದ ಕಟೌಟ್ಗಳನ್ನು ಹಾಕುವುದರಲ್ಲಿ ಪ್ರಮುಖ ನಾಯಕರ ಕಟೌಟ್ ಆಕುವುದಕ್ಕೆ ಸ್ಥಳಾಕಾಶ ಸಿಗದ ಕಾರಣ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಕಳೆ ಕಟ್ಟಲಿದೆಯಾ ವಿಜಯ ಸಂಕಲ್ಪ ಯಾತ್ರೆ 

ರಾಜ್ಯದ ಪ್ರಮುಖ ನಾಯಕರ ಗೈರಿನಿಂದಾಗಿ ವಿಜಯ ಸಂಕಲ್ಪ ಯಾತ್ರೆ ಕಳೆ ಕಟ್ಟುವ ಸಂಭವವಿದೆ. ಟಿಕೆಟ್ ಆಕಾಂಕ್ಷಿಗಳು ಎಷ್ಟೇ ಶಕ್ತಿ ಪ್ರದರ್ಶನ ಮಾಡಿದರು ರಾಜ್ಯ ನಾಯಕರು ಬಾರದೆ ಹೋದರೆ ನಮ್ಮ ಶ್ರಮ ವ್ಯರ್ಥವಾಗಲಿದೆಯಾ ?.ವಿಜಯ ಸಂಕಲ್ಪ ಯಾತ್ರೆ ಅದ್ದೂರಿಯಾಗಿ ಆಚರಿಸಬೇಕು ಎಂದುಕೊಂಡಿದ್ದ ಯಾತ್ರೆ ತನ್ನ ಕಳೆ ಕಳೆದುಕೊಳ್ಳಲಿದೆಯಾ ಎಂದು ಹೇಳಲಾಗುತ್ತಿದೆ ?.

ರಾಜ್ಯ ನಾಯಕರ ಮುಂದೆ ತಮ್ಮ ಶಕ್ತಿ ಪ್ರದರ್ಶಿಸುವ ನಾಯಕರಿಗೆ ವಿಜಯ ಸಂಕಲ್ಪ ಯಾತ್ರೆ ಉತ್ತಮ ಅವಕಾಶವಾಗಿತ್ತು. ಆದರೆ ನಾಯಕರೆ ಬಾರದೇ ಇದ್ದರೆ ಶ್ರಮ ವ್ಯರ್ಥವಾಗುವುದು ಎಂದು ಅಂದುಕೊಳ್ಳುತ್ತಿದ್ದಾರೆ.ಇಂದಿನ ಯಾತ್ರೆಯಲ್ಲಿ  ಕಾರ್ಯಕರ್ತರು ಯಾವ ಪ್ರಮಾಣದಲ್ಲಿ ಸೇರುತ್ತಾರೆ ಎಂದು ಕಾದು ನೋಡಬೇಕಿದೆ.

About The Author