ಕಲ್ಯಾಣ ಬಾಗದಲ್ಲಿ ಕಲೆ ಸಂಸ್ಕೃತಿ ಉಳಿಸುವುದು ನಮ್ಮ ಕರ್ತವ್ಯ : ವಿಶ್ವನಾಥರಡ್ಡಿ ದರ್ಶನಾಪೂರ

ಶಹಾಪೂರ: ಶಹಾಪೂರ ಪಟ್ಟಣದ ಚಾಮುಂಡೇಶ್ವರಿ ನಗರದ ಮಾತೃಛಾಯ ಶಾಲೆಯ ಆವರಣದಲ್ಲಿ ಸ್ನೇಹ ಸಮ್ಮೇಳನ ಮತ್ತು ದಶಮಾನೋತ್ಸವ ಕಾರ್ಯಕ್ರಮವನ್ನು ಶಹಾಪೂರದ ಜಿಲ್ಲಾ ಸಹಕಾರ  ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ದರ್ಶನಾಪೂರ ಉದ್ಘಾಟನೆ ಮಾಡಿ ಮಾತಾನಾಡಿದ ಅವರು, ಕಲೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸುವುದರಿಂದ ಸಾಂಸ್ಕೃತಿಕ ಲೋಕದ ಬಗ್ಗೆ  ಮಕ್ಕಳ ಮೇಲೆ ಪರಿಣಾಮವಾಗಲು ಸಾದ್ಯ. ಮಾತೃಛಾಯ ಶಿಕ್ಷಣ ಸಂಸ್ಥೆಯು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ಕಾರ್ಯಗಳು ಮಾಡಲಿ ಎಂದು ಹಾರೈಸಿದರು.

   ಉತ್ತರ ಕರ್ನಾಟಕದ ಕರವೆ ಅಧ್ಯಕ್ಷರಾದ ಶರಣು  ಗದ್ದುಗೆ ಮಾತಾನಾಡಿ, ಕನಕದಾಸ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯಲಿರುವ ಮಾತೃಛಾಯ ಶಾಲೆಯು ಅನೇಕ ಗ್ರಾಮೀಣ ಪ್ರದೇಶದ ಮಕ್ಕಳು ಮುಂದಿನ ದಿನಗಳಲ್ಲಿ ಶಿಕ್ಷಣ ಪಡೆದು ಸಂಸ್ಥೆಗೆ ಕೀರ್ತಿ ತರಲಿ ಎಂದು ಹೇಳಿದರು.

ಸಂಸ್ಥೆಯಿಂದ ಪ್ರತಿ ವರ್ಷ ಸಾಧನಾ ಪ್ರಶಸ್ತಿ ನೀಡಲಾಗುತ್ತಿದ್ದು,ಈ ವರ್ಷ ನಾರಾಯಣ ಆಚಾರ್ಯ ಸಗರ,ಎಂ ನಾರಾಯಣ ನಿವೃತ್ತ ಲೆಕ್ಕ ಪರಿಶೋದಕರು, ಬುದ್ದಘೋಷ ದೇವಿಂದ್ರ ಹೆಗಡೆ,ವೆಂಕಟೇಶ ಬೋನೇರ್, ಶರಬಸವ ಸೈದಾಪೂರ, ಬಸವರಾಜ ಕಲಾವಿದ ಕ್ಯಾತನಾಳ ರವರಿಗೆ ನೀಡಲಾಯಿತು.

ಸೂರಯ್ಯಬೇಗಂ ಹಾದಿಮನಿ ಪ್ರಾಚಾರ್ಯರು ಕಿತ್ತೂರ ರಾಣೆ ಚನ್ನಮ್ಮ ವಸತಿ ಶಾಲೆ, ಮಲ್ಲಿಕಾರ್ಜುನ ಕಂದಕೂರು ಹಿಂದುಳಿದ ಘಟಕದ ಬಿಜೆಪಿ ಜಿಲ್ಲಾದ್ಯಕ್ಷರು, ತಾಲೂಕು ಖಾಸಗಿ ಶಿಕ್ಷಣ ಸಂಘದ ಅಧ್ಯಕ್ಷರಾದ ಚನ್ನಬಸು ವನದುರ್ಗ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಯಾದ ರೇಣುಕಾ ಪಾಟೀಲ, ಶರಣು ಕಾಡಂಗೇರಾ,ಮಾತೃಛಾಯ ಶಾಲೆಯ ಅಧ್ಯಕ್ಷರಾದ ತಿಪ್ಪಣ್ಣ ಖ್ಯಾತನಾಳ ಸೇರಿದಂತೆ ಇತರರು ಇದ್ದರು.

ಮಡಿವಾಳಪ್ಪ ಪಾಟೀಲ್ ಹೆಗ್ಗನದೊಡ್ಡಿ ಶಹಾಪೂರ ನಿರೂಪಣೆ ಮಾಡಿದರು. ಶೋಭ ಕುಲ್ಕರ್ಣಿ ನಿರೂಪಿಸಿದರು.ಬಂಡೇಶ ಪಾಟೀಲ ವಂದಿಸಿದರು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

About The Author