ಮಹಾಶೈವ ಧರ್ಮಪೀಠದಲ್ಲಿ ‘ ದಿವ್ಯವನ’ ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಮಹಾಕಾಳಿ ಸನ್ನಿಧಿಯ ‘ ಕಾಳಿಕಾವನ’ ದಲ್ಲಿ ಮಾರ್ಚ್ 06 ರ ಸೋಮವಾರದಂದು ವಿವಿಧ ಪವಿತ್ರ ವೃಕ್ಷಗಳ ಸಸಿಗಳನ್ನು ನೆಡುವ ಮೂಲಕ ‘ ದಿವ್ಯವನ’ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ರುದ್ರಾಕ್ಷಿ ಸಸಿ,ಬಿಲ್ವಸಸಿ ಮತ್ತು ಕಮಲದ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಕಾಳಿ ದೈವ ಪಾತ್ರಿ ಶ್ರೀಮತಿ ಗುರುಪಾದಮ್ಮ,ಗೋಪಾಲ ಮಸೀದಪುರ,ಸುಲ್ತಾನಪುರದ ಬಾಬುಗೌಡ ಯಾದವ್,ಉದಯಕುಮಾರ ಮಡಿವಾಳ,ದೇವರಾಜ‌ ಕರಿಗಾರ,ಲಿಂಗಪ್ಪ ಕರಿಗಾರ,ದೇವಸ್ಥಾನಗಳ ಶಿಖರ ನಿರ್ಮಾಣ ಶಿಲ್ಪಿ ರಂಗನಾಥ ಹಳ್ಳೂರ,ಸಹಾಯಕ ಪುರುಷೋತ್ತಮ ಮೊದಲಾದವರು ದಿವ್ಯವನದ ವಿವಿಧ ವೃಕ್ಷ,ಹೂವುಗಳ ಸಸಿಗಳನ್ನು ನೆಟ್ಟರು.

Leave a Reply

Your email address will not be published. Required fields are marked *