ಯಾದಗಿರಿ ಮತಕ್ಷೇತ್ರ ಕಾಂಗ್ರೆಸ್ ಟಿಕೆಟ್ ಗಾಗಿ ಕುರುಬರ ಕಚ್ಚಾಟ, ಟಿಕೆಟ್ ಕೈತಪ್ಪುವ ಭೀತಿ ?

ಯಾದಗಿರಿ : ಯಾದಗಿರಿ ಮತಕ್ಷೇತ್ರದಲ್ಲಿ ಈ ಸಾರಿ ಹಾಲುಮತ ಸಮಾಜಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಎಲ್ಲಾ ಲಕ್ಷಣಗಳಿದ್ದು,ಅತಿ ಹೆಚ್ಚು ಕುರುಬ ಸಮಾಜದವರೆ ಟಿಕೆಟ್ ಗಾಗಿ ಅರ್ಜಿ ಹಾಕಿದ್ದಾರೆ.ಕಾಂಗ್ರೇಸ್ ಹಿರಿಯ ಮುಖಂಡರಾದ ಶರಣಪ್ಪ ಸಲಾದಪುರ,ಮರಿಗೌಡ ಹುಲ್ಕಲ್,ಯುವ ನಾಯಕರಾದ ಭೀಮಣ್ಣ ಮೇಟಿ,ನಿಖೀಲ್ ಶಂಕರ್,ವಿನೋದ ಪಾಟೀಲ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಕ್ಷೇತ್ರದಲ್ಲಿ 17 ಕ್ಕೂ ಹೆಚ್ಚು ಜನರು ಟಿಕೆಟ್ ಗಾಗಿ ಅರ್ಜಿ ಹಾಕಿದ್ದಾರೆ.ಆದರೆ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೇಟ್ ಕೊಡುತ್ತದೆಯೊ ಇನ್ನೂ ನಿರ್ಧಾರವಾಗಿಲ್ಲ.

ಮರಿಗೌಡ ಹುಲ್ಕಲ್.ಕೆಪಿಸಿಸಿ ರಾಜ್ಯ ಕಾರ್ಯದರ್ಶಿ 

ಕುರುಬರಲ್ಲಿ ಕಿತ್ತಾಟ, ಟಿಕೇಟ್ ತಪ್ಪುವ ಭೀತಿ 

ಟಿಕೆಟ್ ಆಕಾಂಕ್ಷಿಗಳು ಹಾಲುಮತದಲ್ಲಿ ತಮ್ಮದೆ ಆದ ಅಭಿಮಾನಿ ಬಳಗವನ್ನು ಮಾಡಿಕೊಂಡಿದ್ದಾರೆ.ತಮ್ಮ ತಮ್ಮ ನಾಯಕರನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿರುವ ಅಭಿಮಾನಿ ಬಳಗದಿಂದ ಕುರುಬರಲ್ಲಿಯೆ ಕಚ್ಚಾಟ ಆರಂಭವಾಗಿದೆ.ಒಬ್ಬ ನಾಯಕನಿಗಾಗಿ ಟಿಕೆಟ್ ಗಿಟ್ಟಿಸಲು ಅಭಿಮಾನಿಗಳು ಕ್ರಿಕೆಟ್ ಪಂದ್ಯಾವಳಿಗಳು,ಕಬ್ಬಡಿ ಪಂದ್ಯಾವಳಿಗಳು ಕ್ಷೇತ್ರದಾಧ್ಯಂತ ನಡೆಯುತ್ತೀವೆ.ಆರೋಗ್ಯ ಶಿಬಿರ,ದೇವರಲ್ಲಿ ಹರಕೆ ಮಾಡಿಕೊಳ್ಳುವುದು ಸೇರಿದಂತೆ ಹಲವು ರೀತಿಯಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

ಆದರೆ ಅಭಿಮಾನಿಗಳಲ್ಲಿ ಭಾರಿ ಬಿರುಕುಂಟಾಗಿದ್ದು,ಒಬ್ಬರನ್ನು ಇನ್ನೂಬ್ಬರು ಸೇರದ ಹಾಗೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ.ಇದರಿಂದ ಟಿಕೇಟ್ ಆಕಾಂಕ್ಷಿಗಳಿಗೆ ಭಾರಿ ಮುಜುಗರ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪುತ್ತದೆಯೊ ಗೊತ್ತಾಗುತ್ತಿಲ್ಲ.ಕಾಂಗ್ರೇಸ್ ಹೈಕಮಾಂಡ್ ಇವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು,ಕುರುಬರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡುವ ಚಿಂತನೆಯಲ್ಲಿದೆ ಎಂದು ಹೇಳಲಾಗುತ್ತಿದೆ.ಕುರುಬರ ಕಚ್ಚಾಟದಿಂದ ಯಾರಿಗಾದರು ಒಬ್ಬರಿಗೆ ಟಿಕೆಟ್ ಕೊಟ್ಟರೆ ಇನ್ನುಳಿದವರು ತಟಸ್ಥರಾಗುವ ಭೀತಿ ಎದುರಾಗಬಹುದು ಎನ್ನುವ ಭೀತಿಯಲ್ಲಿರುವ ಕಾಂಗ್ರೆಸ್ ಪಕ್ಷ ಮೂರನೆಯವರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಕಾಂಗ್ರೆಸ್ ಹೈಕಮಾಂಡನಲ್ಲಿದೆಯಾ ? ಎನ್ನುವ ಮಾತುಗಳು ಕ್ಷೇತ್ರದಾದ್ಯಂತ ಚರ್ಚೆಗಳು ಶುರುವಾಗಿವೆ.

ಶರಣಪ್ಪ ಸಲಾದಪುರ.ಕಾಂಗ್ರೇಸ್ ಹಿರಿಯ‌ ಮುಖಂಡರು

ಪ್ರಸ್ತುತ ಚುನಾವಣೆ ಕೇಂದ್ರ ಮತ್ತು ‌ಕಾಂಗ್ರೇಸ್ ಪಕ್ಷದ ನಡುವೆ ನಡೆಯುತ್ತಿದೆಯಾ ?

ಹೌದು ಎನ್ನುತ್ತಿವೆ ವರದಿಗಳು.ಬಿಜೆಪಿ ಸರಕಾರದ ಸಚಿವರು ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದಕ್ಕೆ ದಿನಕ್ಕೊಂದು ವರದಿಗಳು ಬಿತ್ತರವಾಗುತ್ತಿವೆ.ಸಮರ್ಥ ನಾಯಕತ್ವದ ಕೊರತೆ ರಾಜ್ಯದಲ್ಲಿ ಇಲ್ಲ.ಮುಂದಿನ ವಿಧಾನಸಭಾ ಚುನಾವಣೆ ಎದದುರಿಸಲು ರಾಜ್ಯ ಬಿಜೆಪಿಗೆ ಆಗದು ಎನ್ನುವುದನ್ನು ಮನಗಂಡ ರಾಷ್ಟ್ರೀಯ ನಾಯಕರು ತಾವೇ ಫೀಲ್ಡಿಗಿಳಿದಿದ್ದಾರೆ.ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದು ಕರ್ನಾಟಕದಲ್ಲಿ ಮಾತ್ರ.ಇದು ಕೂಡ ಕೈತಪ್ಪುತ್ತದೆ ಎನ್ನುವುದನ್ನು ತಿಳಿದ ರಾಷ್ಟ್ರೀಯ ನಾಯಕರ ದಂಡೆ ಪ್ರಧಾನಿಯನ್ನೊಳಗೊಂಡು ಎಲ್ಲರು ರಾಜ್ಯ ಚುನಾವಣಾ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದೆ.

ಡಾ.ಭೀಮಣ್ಣ ಮೇಟಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು

ಬಿಜೆಪಿ ಸೋಲಿಸಲು ಜನಬಲ ಜೊತೆಗೆ ಆರ್ಥಿಕವಾಗಿ ಪ್ರಬಲ ಅಭ್ಯರ್ಥಿಗಳ ಅವಶ್ಯಕತೆ ಇದೆ.

ಯಾದಗಿರಿ ಮತಕ್ಷೇತ್ರದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಶಾಸಕರನ್ನು ಎದುರಿಸಲು ಕ್ಷೇತ್ರದಲ್ಲಿ ಜನ ಬೆಂಬಲದ ಜೊತೆಗೆ ಆರ್ಥಿಕವಾಗಿ ಸಬಲ ಇರುವ ವ್ಯಕ್ತಿಯ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಕೇಳಿ ಬರುತ್ತಿರುವ ವಿಷಯವಾಗಿದೆ ಎಂದು ಹೇಳಲಾಗಿದೆ.

ನಿಖೀಲ್ ಶಂಕರ್.ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಇದನ್ನು ಅರಿತುಕೊಂಡು ಹಾಲುಮತ ಸಮಾಜದವರು ಸದೃಢವಾಗಿರುವಂತಹ ವ್ಯಕ್ತಿಯನ್ನು ಕಣಕ್ಕಿಳಿಸಬೇಕಾಗಿರುವುದು ಅನಿವಾರ್ಯವಾಗಿದೆ.

ವಿನೋದ್ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು

ಅದಕ್ಕಾಗಿ ಸಮಾಜದವರೆಲ್ಲರೂ ಒಗ್ಗೂಡಿ ಕುರುಬರಿಗೆ ಯಾವ ವ್ಯಕ್ತಿಗಾದರೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಆ ವ್ಯಕ್ತಿಗೆ ಎಲ್ಲಾ ರೀತಿಯ ಬೆಂಬಲ ವ್ಯಕ್ತಪಡಿಸಿದಾಗ ಮಾತ್ರ ಯಾದಗಿರಿ ಕ್ಷೇತ್ರದಲ್ಲಿ ಜಯಗಳಿಸಲು ಸಾಧ್ಯ. ಇದೇ ರೀತಿಯಲ್ಲಿ ಕಚ್ಚಾಟ ಮುಂದುವರೆದರೆ ಹಾಲುಮತ ಸಮಾಜಕ್ಕೆ ಟಿಕೆಟ್ ಕೈತಪ್ಪುವ ಎಲ್ಲಾ ಲಕ್ಷಣಗಳಿದ್ದು, ಇದರ ಬಗ್ಗೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂದು ಕಾದು ನೋಡಬೇಕಿದೆ.

About The Author