ಮಹಾಶೈವ ಧರ್ಮಪೀಠದಲ್ಲಿ 37 ನೆಯ’ ಶಿವೋಪಶಮನ ಕಾರ್ಯ’

ರಾಯಚೂರು : ರಾಜ್ಯದ ಅತಿವಿಶಿಷ್ಟ್ಯ ಧಾರ್ಮಿಕ ಕ್ಷೇತ್ರವೆಂದು ಹೆಸರಾಗಿರುವ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಮಾರ್ಚ್ 05 ರ ರವಿವಾರದಂದು 37 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.

ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರವನ್ನರಸಿ ಬಂದಿದ್ದ ಭಕ್ತರುಗಳಿಗೆ ಕ್ಷೇತ್ರೇಶ್ವರ ವಿಶ್ವೇಶ್ವರಾನುಗ್ರಹವನ್ನು ಕರುಣಿಸಿದರು.

 

ಲೋಕೇಶ್ವರ ಶಿವನು ಲೋಕಸಮಸ್ತರ ಉದ್ಧಾರಕ್ಕೆಂದು ಶ್ರೀಕ್ಷೇತ್ರ ಕೈಲಾಸದಲ್ಲಿ ಪ್ರಕಟಗೊಂಡು ಲೋಕೋದ್ಧಾರದ ಲೀಲೆಯನ್ನಾಡುತ್ತಿದ್ದಾನೆ ಪೀಠಾಧ್ಯಕ್ಷರಾದ ಪೂಜ್ಯರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳಿಂದ ಪ್ರತಿರವಿವಾರ ನೂರಾರು ಭಕ್ತರು‌ ಸಮಸ್ಯೆಗಳನ್ನು ಹೊತ್ತು ಶ್ರೀಕ್ಷೇತ್ರ ಕೈಲಾಸಕ್ಕೆ ಬರುತ್ತಾರೆ.ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಮೂಲಕ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಾನೆ.

ಸಂತಾನಾರ್ಥಿಗಳು,ಪಾರ್ಶ್ವವಾಯು, ಮಾನಸಿಕ ಅಸ್ವಸ್ಥರಾದಂತಹ ಕಾಯಿಲೆಗಳು ವಾಸಿಯಾಗಲು ಕಷ್ಟಸಾಧ್ಯವಾದ ರೋಗಗಳನ್ನು ಹೊತ್ತ ಭಕ್ತರು ಶ್ರೀಕ್ಷೇತ್ರಕ್ಕೆ ಬರುತ್ತಿದ್ದು ಶಿವ ವಿಶ್ವೇಶ್ವರಾನುಗ್ರಹದಿಂದ ಭಕ್ತರು ಸಂಕಟಮುಕ್ತರಾಗುತ್ತಿದ್ದಾರೆ.ಪರಮೇಶ್ವರನೂ ಪರಬ್ರಹ್ಮನೂ ವಿಶ್ವನಿಯಾಮಕನೂ ಆಗಿರುವ ಶಿವನು ಶ್ರೀಕ್ಷೇತ್ರ ಕೈಲಾಸದಲ್ಲಿ ವಿಶ್ವೇಶ್ವರನ ಹೆಸರಿನಲ್ಲಿ ಪ್ರಕಟಗೊಂಡು ಲೋಕಜನರ ಸಂಕಷ್ಟಗಳನ್ನು ಪರಿಹರಿಸುತ್ತಿರುವುದು ಮಹಾಶೈವ ಧರ್ಮಪೀಠದ ವಿಶೇಷವಾಗಿದೆ,ಅನ್ಯತ್ರದುರ್ಲಭ ಧಾರ್ಮಿಕ ಸಂಗತಿಯಾಗಿದೆ.

About The Author