ಡಿಡಿಯು ಶಿಕ್ಷಣ ಸಂಸ್ಥೆಯ 14ನೇ ವಾರ್ಷಿಕೋತ್ಸವ ಸಮಾರಂಭ : ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರವಿರಿಸಿ : ರೇವಣಸಿದ್ದೇಶ್ವರ ಶಾಂತಮಯ ಶ್ರೀ

 

ಶಹಾಪುರ : ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ.ಇಂದಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಪುಸ್ತಕಗಳಿಗಿಂತ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಮೇಲೆ ಮೊಬೈಲ್ ಬಳಕೆಯಿಂದ ಕೆಟ್ಟ ಪರಿಣಾಮ ಬೀರಬಹುದು ಎಂದು ಅಗತೀರ್ತ ಮಠದ ಪೂಜ್ಯಶ್ರೀ ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಗಳು ಪಾಲಕರಿಗೆ ಕಿವಿಮಾತು ಹೇಳಿದರು.

” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು “

  ನಗರ ಪಿಐ ಚೆನ್ನಯ್ಯ ಹಿರೇಮಠ ಮಾತನಾಡಿ,ಡಿಡಿಯು ಶಿಕ್ಷಣ ಸಂಸ್ಥೆಯು ಗ್ರಾಮೀಣ ಮಕ್ಕಳಿಗೆ ಅನುಕೂಲಕರವಾಗಿದ್ದು, ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಬರಲಿ ಎಂದು ಆಶಿಸಿದರು.

ನಗರದ ಪಿಐ ಚನ್ನವೀರ ಹಿರೇಮಠ ಮಾತನಾಡಿದರು “

“ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ”

ನಗರದ ಆರಭೋಳ ಕಲ್ಯಾಣ ಮಂಟಪದಲ್ಲಿ ಡಿಡಿಯು ಶಿಕ್ಷಣ ಸಂಸ್ಥೆಯ 14ನೇ ವಾರ್ಷಿಕೋತ್ಸವ ದಿನಾಚರಣೆ ನಿಮಿತ್ತ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯೆಯ ಜೊತೆ ಸಂಸ್ಕಾರ ವಿನಯವನ್ನು ಶಿಕ್ಷಣ ಸಂಸ್ಥೆಗಳು ಕಲಿಸಬೇಕಿದೆ ಎಂದು ಹೇಳಿದರು.

” ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರವೀಂದ್ರನಾಥ ಹೊಸಮನಿ ಮಾತನಾಡುತ್ತಿರುವುದು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರವೀಂದ್ರನಾಥ ಹೊಸಮನಿ ಮಾತನಾಡಿ, ಭೀಮಣ್ಣ ಮೇಟಿ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ತೆರೆಯುವುದು ಅವರ ಕನಸಾಗಿದ್ದು ಅದನ್ನು ಆದಷ್ಟು ಶೀಘ್ರದಲ್ಲಿ ನೆರವೇರಲಿ ಎಂದು ಆಶಿಸಿದರು.

” ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಭೀಮಣ್ಣ ಮೇಟಿ “

ಪ್ರಾಸ್ತಾವಿಕವಾಗಿ ಡಿಡಿಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಭೀಮಣ್ಣ ಮೇಟಿಯವರು ಮಾತನಾಡಿ, ಶಿಕ್ಷಕರ ಜೊತೆ ಮಕ್ಕಳ ಮೇಲೆ ಪಾಲಕರ ಜವಾಬ್ದಾರಿ ಹೆಚ್ಚಿದ್ದು, ಮಕ್ಕಳ ಅಂಕಪಟ್ಟಿಗಳನ್ನು ಆಧರಿಸುವ ಶಿಕ್ಷಣ ಮುಗಿದ ಅಧ್ಯಾಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಮಕ್ಕಳು ಹೆಚ್ಚಿನ ಗಮನ ಕೊಡಬೇಕಿದೆ ಎಂದು ಹೇಳಿದರು.

” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು “

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಾದ ದೀಕ್ಷಾ, ಸ್ಪೂರ್ತಿ, ಆಶಾ, ರಂಜಿತಾ, ಅಕ್ಷತಾ, ವಿಧ್ಯಾಶ್ರಿ, ಭಾವನ, ಕೀರ್ತಿ, ಸಿಂಧೂ ತಂಡ ಸೇರಿದಂತೆ  ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸಮಾರಂಭದಲ್ಲಿ ಪೂಜ್ಯರಾದ ಮಹಾದೇವಪ್ಪ ಪೂಜಾರಿ, ಪ್ರಾಧ್ಯಾಪಕರಾದ ಶರಣಮ್ಮ ಪಾಟೀಲ್, ಶ್ರೀಮತಿ ವಿದ್ಯಾ ಮೇಟಿ, ದೇವೇಂದ್ರಪ್ಪ ಮೇಟಿ, ಚಂದ್ರಶೇಖರ ಎಎಸ್ಐ, ಶ್ರೀಮತಿ ದೇವಮ್ಮ ಮೇಟಿ, ಸೇರಿದಂತೆ ಶಾಲಾ ಮುಖ್ಯ ಗುರುಗಳಾದ ಫಿಲೀಪ್,ಥಾಮಸ್,ಯಂಕಪ್ಪ ಶಿಕ್ಷಕರಾದ ಶಿವು ಮೇಟಿ,ಸಾಬಯ್ಯ ದಿಗ್ಗಿ,ಶ್ರೀನಿವಾಸ,ಸೂರ್ಯಕಾಂತ,ಶಿಕ್ಷಕಿಯರಾದ ಕಲಾವತಿ,ಮಹಾನಂದ,ಅಕ್ಷತಾ,ಮಾಸಾಬಿ, ಹಾಗೂ ಪಾಲಕರು ಪಾಲ್ಗೊಂಡಿದ್ದರು.ರಾಜೇಶ ಶಾಲಾ ವಾರ್ಷಿಕ ವರದಿ ಮಂಡಿಸಿದರು.ಶಿಕ್ಷಕರಾದ ಚಂದ್ರಶೇಖರ ಕರ್ನಾಳ ಕಾರ್ಯಕ್ರಮ ನಿರೂಪಿಸಿದರು.

 

About The Author