ಕರುನಾಡು ವಾಣಿ ವರದಿಗೆ ಸ್ಪಂದನೆ : ಮದ್ದರಕಿ ಗ್ರಾಮದ ಬಾವಿಯ ನೀರು ಸ್ವಚ್ಛಗೊಳಿಸಲು ಕ್ರಮ ಕೈಗೊಂಡ ಇಓ ಸೋಮಶೇಖರ ಬಿರಾದರ್

ಯಾದಗಿರಿ : ಮದ್ದರಕಿ ಗ್ರಾಮದಲ್ಲಿ ಎರಡು ನೂರು ವರ್ಷಗಳ ಪುರಾತನ ಬಾವಿಯ ನೀರು ಚರಂಡಿ ನೀರಿನಂತಾಗಿತ್ತು. ಗ್ರಾಮದಲ್ಲಿನ ಹಲವಾರು ಜನರು ಈ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಗ್ರಾಮ ಪಂಚಾಯಿತಿಯ ನಿರ್ಲಕ್ಷ ಇದಕ್ಕೆ ಕಾರಣ ಎಂದು ಗುರುವಾರ ಪತ್ರಿಕೆಯಲ್ಲಿ ವರದಿ ಮಾಡಿಲಾಗಿತ್ತು. ವರದಿಗೆ ಸ್ಪಂದಿಸಿದ ತಾಲೂಕು ಪಂಚಾಯಿತಿ  ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರಾದರ್ ಸ್ಪಂಧಿಸಿದ್ದು, ಇಂದು ಬಾವಿಯ ನೀರನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾರೆ.ಕರುನಾಡು ವಾಣಿ ಪ್ರಕಟಣೆಗೆ ಸ್ಪಂದಿಸಿದ ಸೋಮಶೇಖರ ಬಿರಾದರ ಅವರಿಗೆ ಮತ್ತು ಕರುನಾಡು ವಾಣಿಗೆ ಮದ್ದರಕಿ ಗ್ರಾಮಸ್ಥರಾದ ಮಲ್ಲಿಕಾರ್ಜುನ ಆವಂಟಿ,ಅಂಬುಸಾಹು ಕೋಟಿಕಾನಿ,ಶಿವು ಹೊಸ್ಮನಿ, ಮಲ್ಲಿಕಾರ್ಜುನ ಗುತ್ತಿಗೆದಾರ ಕೃತಜ್ಞನತೆ  ಸಲ್ಲಿಸಿದರು.
ಗ್ರಾಮೀಣ ಅಭಿವೃದ್ಧಿಯೆ ಪಂಚಾಯತ್ ರಾಜ್  ಇಲಾಖೆಯ ಕರ್ತವ್ಯ.ಪತ್ರಿಕಾ ವರದಿಗಳಿಂದ ಗ್ರಾಮದಲ್ಲಿನ ಹಲವಾರು ಸಮಸ್ಯೆಗಳ ಬಗ್ಗೆ ವರದಿ ಮಾಡಿರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಇದು ಒಳ್ಳೆಯ ಬೆಳವಣಿಗೆ. ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿಯಿಂದ ಬಾವಿಯ ನೀರನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಒ ಸೋಮಶೇಖರ ಬಿರಾದರ ತಿಳಿಸಿದರು.ಈ ರೀತಿಯ ವರದಿಗಳಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಗ್ರಾಮೀಣ ಅಭಿವೃದ್ಧಿಯೇ ನಮ್ಮ ಇಲಾಖೆಯ ಆದ್ಯ ಕರ್ತವ್ಯವಾಗಿದೆ ಎಂದರು.