ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಯ ಪಾಲನೆ ರೂಡಿಸಿಕೊಳ್ಳಬೇಕು : ಭೀಮಣ್ಣ ಮೇಟಿ 

ಶಹಾಪುರ :ನಾಗನಟಿಗಿ ಪ್ರೌಢಶಾಲೆಯಲ್ಲಿ ಸಗರನಾಡು ಸೇವಾ ಸಂಸ್ಥೆಯ 2023ರ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ. ಭೀಮಣ್ಣ ಮೇಟಿ ಅವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಲು ಕನಸು ಕಾಣಬೇಕು, ಆ ಕನಸನ್ನು ಈಡೇರಿಸಿಕೊಳ್ಳಲು ಮನಸಿದ್ದರೆ ಮಾರ್ಗ ಎಂಬಂತೆ ಬಿಡುವಿಲ್ಲದೆ ಶ್ರಮಿಸಬೇಕು ಅಂದಾಗ ಮಾತ್ರ ಯಶಸ್ವಿ ವ್ಯಕ್ತಿಗಳಾಗಿ ಹೊರಬರಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ಮಾಜಿ ಗ್ರಾಪ ಅಧ್ಯಕ್ಷರಾದ ನಾನೆಗೌಡ ಮೇಟಿ, ಮಹದೇವಪ್ಪ ಮೇಟಿ ಮುಖ್ಯ ಗುರುಗಳಾದ ಅರವಿಂದ ಚೌದ್ರಿ ಸಹ ಶಿಕ್ಷಕರು ಹಾಗೂ ಸಂಸ್ಥೆಯ ಅಧ್ಯಕ್ಷ ಭೀಮನಗೌಡ ಪಾಟೀಲ್ ಹಾಗೂ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *